ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ; ನಗರ ಕೇಸರಿಮಯ, ಹೇಗಿದೆ ಈ ಬಾರಿ ಅಲಂಕಾರ?

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಸೆಪ್ಟೆಂಬರ್ 8: ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಪೂರ್ವ ಮೆರವಣಿಗೆ ಹಿನ್ನೆಲೆ ನಗರ ಕೇಸರಿಮಯವಾಗಿದೆ. ಶುಕ್ರವಾರ ಮೆರವಣಿಗೆ ಸಾಗುವ ಮಾರ್ಗದಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ಅಲಂಕಾರ ಮಾಡಿದ್ದಾರೆ. ಅಲ್ಲದೆ ಕುಟುಂಬ ಸಹಿತ ಬಂದು ಅಲಂಕಾರವನ್ನ ಕಣ್ತುಂಬಿಕೊಳ್ಳುವಂತೆ ಮನವಿ ಮಾಡಿದ್ದಾರೆ.

ಗಾಂಧಿ ಬಜಾರ್‌ನಲ್ಲಿ ಗೀತೋಪದೇಶ ಕಾನ್ಸೆಪ್ಟ್‌ನ ಬೃಹತ್ ಮಹಾದ್ವಾರ ನಿರ್ಮಿಸಲಾಗಿದೆ. ಇದರ ಬಹುತೇಕ ಕೆಲಸ ಪೂರ್ಣಗೊಂಡಿದೆ. ಈಗಾಗಲೇ ಜನರು ಮಹಾದ್ವಾರದ ಬಳಿ ಬಂದು ಫೋಟೊ, ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.

ಶಿವಮೊಗ್ಗದಲ್ಲಿ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ, ವಾಹನ ಸಂಚಾರ ಮಾರ್ಗ ಬದಲಾವಣೆಶಿವಮೊಗ್ಗದಲ್ಲಿ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ, ವಾಹನ ಸಂಚಾರ ಮಾರ್ಗ ಬದಲಾವಣೆ

ಇನ್ನು, ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಸಾಗುವ ಗಾಂಧಿ ಬಜಾರ್ ರಸ್ತೆ ಸಂಪೂರ್ಣ ಕೇಸರಿಮಯವಾಗಿದೆ. ಕೇಸರಿ ಹಿಂದೂ ಅಲಂಕಾರ ಸಮಿತಿ ವತಿಯಿಂದ ಗಾಂಧಿ ಬಜಾರ್‌ನಲ್ಲಿ ರಸ್ತೆ ಉದ್ದಕ್ಕೂ ಕೇಸರಿ ಬಂಟಿಂಗ್ಸ್ ಕಟ್ಟಲಾಗಿದೆ.

Preparations Underway for Hindu Mahasabha Ganesha Immersion in Shivamogga on Friday


ಮೆರವಣಿಗೆ ಸಾಗುವ ಪ್ರತಿ ಸರ್ಕಲ್‌ನಲ್ಲಿಯು ವಿಭಿನ್ನವಾಗಿ ಅಲಂಕಾರ ಮಾಡಲಾಗುತ್ತಿದೆ. ರಾಮಣ್ಣ ಶ್ರೇಷ್ಠಿ ಪಾರ್ಕ್, ಶಿವಪ್ಪನಾಯಕ ವೃತ್ತ, ಶಿವಪ್ಪನಾಯಕ ಹಳೆ ಮಾರುಕಟ್ಟೆ ವೃತ್ತ (ಎಎ ಸರ್ಕಲ್), ಗೋಪಿ ವೃತ್ತದಲ್ಲಿ ವಿಶೇಷ ಅಲಂಕಾರ ಮಾಡಲಾಗಿದೆ.

ದೇಶದ 75ನೇ ಸ್ವಾತಂತ್ರ್ಯೋತ್ಸವ ಆಚರಣೆ ಮಾಡುತ್ತಿದ್ದೇವೆ. ಆದ್ದರಿಂದ ಯುವಕರಿಗೆ ದೈವ ಭಕ್ತಿ ಮತ್ತು ರಾಷ್ಟ್ರಭಕ್ತಿಯನ್ನು ಮೂಡಿಸುವಂತೆ ಅಲಂಕಾರ ಮಾಡಲಾಗುತ್ತಿದೆ. ಛತ್ರಪತಿ ಶಿವಾಜಿ, ರಾಣ ಪ್ರತಾಪ್ ಸಿಂಗ್ ಪ್ರತಿಮೆಗಳನ್ನು ಇರಿಸಲಾಗುತ್ತಿದೆ ಎಂದು ದೀನದಯಾಳು ತಿಳಿಸಿದ್ದಾರೆ.

50 ಸಾವಿರಕ್ಕಿಂತಲೂ ಹೆಚ್ಚು ಜನರು

ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳಲಿದ್ದಾರೆ. ಈ ಭಾರಿಯೂ 50 ಸಾವಿರಕ್ಕಿಂತಲೂ ಹೆಚ್ಚಿನ ಸಂಖ್ಯೆ ಜನರು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ. 5 ಸಾವಿರಕ್ಕಿಂತಲೂ ಹೆಚ್ಚು ಮಹಿಳೆಯರು, ಮಾತೆಯರು ಮೆರವಣಿಗೆಯಲ್ಲಿ ಭಾಗವಹಿಸುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆ ಇದೆ ಎಂದು ದೀನದಯಾಳು ಹೇಳಿದ್ದಾರೆ.

Preparations Underway for Hindu Mahasabha Ganesha Immersion in Shivamogga on Friday

ನಗರದಲ್ಲಿ ಬಿಗಿ ಭದ್ರತೆ

ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಹಿನ್ನೆಲೆ ನಗರದಾದ್ಯಂತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಮೆರವಣಿಗೆ ಹಾದಿ ಉದ್ದಕ್ಕೂ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಸೆಪ್ಟೆಂಬರ್ 9ರಂದು ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ನಡೆಯಲಿದೆ. ಆ ದಿನ ಬಂದೋಬಸ್ತ್‌ಗಾಗಿ ದೊಡ್ಡ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ಇಬ್ಬರು ಹೆಚ್ಚುವರಿ ಪೊಲೀಸ್ ಅಧೀಕ್ಷಕರು, 19 ಪೊಲೀಸ್ ಉಪಾಧೀಕ್ಷಕರು, 46 ಇನ್ಸ್ ಪೆಕ್ಟರ್‌ಗಳು, 71 ಸಬ್ ಇನ್ಸ್ ಪೆಕ್ಟರ್, 1970 ಪೊಲೀಸ್ ಸಿಬ್ಬಂದಿ, 700 ಗೃಹ ರಕ್ಷಕ ದಳ ಸಿಬ್ಬಂದಿ, 1 ಆರ್.ಎಫ್.ಕಂಪನಿ (200 ಅಧಿಕಾರಿಗಳು ಮತ್ತು ಸಿಬ್ಬಂದಿ), 15 ಕೆ.ಎಸ್.ಆರ್.ಪಿ ತುಕಡಿ (300 ಅಧಿಕಾರಿ ಮತ್ತು ಸಿಬ್ಬಂದಿ), 15 ಡಿ.ಎ.ಆರ್ ತುಕಡಿ (120 ಅಧಿಕಾರಿ ಮತ್ತು ಸಿಬ್ಬಂದಿ) ಭದ್ರತೆಗೆ ನಿಯೋಜನೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

English summary
Organizers of the Ganesha procession have decorated prime locations with saffron buntings, they are expecting over 50,000 people for the procession of hindu maha Ganesha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X