ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗದಲ್ಲಿ ರಾಷ್ಟ್ರ ಲಾಂಛನದ ಮೇಲೆ ಹಾರಾಡಿದ ಕೇಸರಿ ಧ್ವಜ ಪೊಲೀಸ್ ವಶ

|
Google Oneindia Kannada News

ಶಿವಮೊಗ್ಗ ಸೆಪ್ಟೆಂಬರ್ 09: ಶಿವಮೊಗ್ಗ ವೃತ್ತದ ಅಶೋಕ ನಗರದಲ್ಲಿ ರಾಷ್ಟ್ರ ಲಾಂಛನದ ಮೇಲೆ ಹಾಕಲಾಗಿದ್ದ ಕೇಸರಿ ಧ್ವಜವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಶಿವಮೊಗ್ಗದಲ್ಲಿ ಗಣೇಶ ಚತುರ್ಥಿ ಮೆರವಣಿಗೆಯ ಅಂಗವಾಗಿ ಪಟ್ಟಣದಾದ್ಯಂತ ಹಿಂದೂ ಗುಂಪುಗಳು ಕೇಸರಿ ಧ್ವಜಗಳನ್ನು ಮತ್ತು ಸಾವರ್ಕರ್ ಹಾಗೂ ಬಜರಂಗದಳದ ನಾಯಕ ಹರ್ಷನನ್ನು ಹತ್ಯೆಗೈದ ಫ್ಲೆಕ್ಸ್ ಬ್ಯಾನರ್‌ಗಳನ್ನು ಹಾಕಿದ್ದವು. ಇದೇ ವೇಳೆ ಶಿವಮೊಗ್ಗ ವೃತ್ತದ ಅಶೋಕ ನಗರದಲ್ಲಿ ರಾಷ್ಟ್ರ ಲಾಂಛನದ ಮೇಲೆ ಕೇಸರಿ ಧ್ವಜವನ್ನೂ ಹಾಕಲಾಗಿತ್ತು. ದುರಾದೃಷ್ಟವೆಂದರೆ ಇದನ್ನು ಯಾರೂ ಕೂಡ ವಿರೋಧಿಸಿಲ್ಲ. ಯಾರೂ ಕೂಡ ಗಮನಿಸಿಯೂ ಇಲ್ಲ. ಯಾವುದೇ ಪ್ರಕರಣ ದಾಖಲಾಗಿಲ್ಲ. ಆದರೆ ಇಂದು ಅದನ್ನು ಪೊಲೀಸರು ಅದನ್ನು ವಶಪಡಿಸಿಕೊಂಡಿದ್ದಾರೆ.

ಎರಡು ವರ್ಷಗಳ ಬಳಿಕ ಶಿವಮೊಗ್ಗದಲ್ಲಿ ಅದ್ಧೂರಿಯಿಂದ ಗಣೇಶೋತ್ಸವ ಆಚರಿಸಲಾಗುತ್ತಿದೆ. ಆದರೆ, ಸ್ವಾತಂತ್ರ್ಯ ಅಮೃತ ಮಹೋತ್ಸವದಂದು ಉಂಟಾದ ಸಾವರ್ಕರ್‌ ಫ್ಲೆಕ್ಸ್‌ ತೆರವು ಮತ್ತು ಯುವಕನಿಗೆ ಚಾಕು ಇರಿತ ಪ್ರಕರಣದಿಂದಾಗಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.

ಶಿವಮೊಗ್ಗದಲ್ಲಿ ಅಂದು 144 ಸೆಕ್ಷನ್ ಜಾರಿ

ಶಿವಮೊಗ್ಗದಲ್ಲಿ ಅಂದು 144 ಸೆಕ್ಷನ್ ಜಾರಿ

ಆಗಸ್ಟ್ 15 ರಂದು ನಗರದ ಅಮೀರ್ ಅಹಮದ್ ವೃತ್ತದಲ್ಲಿ ಇರಿಸಲಾಗಿದ್ದ ಸಾವರ್ಕರ್ ಫ್ಲೆಕ್ಸ್ ತೆರವು ಮಾಡಿದ ಘಟನೆ ನಡೆದ ಬೆನ್ನಲ್ಲೇ ಯುವಕನಿಗೆ ಚಾಕು ಇರಿಯಲಾಗಿತ್ತು. ನಗರದ ಗಾಂಧಿಬಜಾರ್​ನಲ್ಲಿ ಈ ಪ್ರಕರಣ ನಡೆದಿತ್ತು. ಅಮೀರ್ ಅಹಮದ್ ವೃತ್ತದಲ್ಲಿ ಇರಿಸಲಾಗಿದ್ದ ಸಾವರ್ಕರ್ ಫ್ಲೆಕ್ಸ್ ಅನ್ನು ತೆರವು ಮಾಡಿದ ಬೆನ್ನಲ್ಲೇ ಕೆಲಕಾಲ ಗಲಾಟೆ ನಡೆದಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ನಗರದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿತ್ತು. ಆದರೆ ಬಳಿಕ ಕೆಲ ಗಂಟೆಯಲ್ಲೇ ಯುವಕನಿಗೆ ದುಷ್ಕರ್ಮಿಗಳು ಚಾಕು ಇರಿದಿರುವ ಪ್ರಕರಣ ನಡೆದಿದೆ. ಗಾಂಧಿ ಬಜಾರ್​​ನಲ್ಲಿದ್ದ ಪ್ರೇಮ್ ಸಿಂಗ್(20) ಎಂಬ ಯುವಕನಿಗೆ ಚಾಕುವಿನಿಂದ ಇರಿಯಲಾಗಿದೆ. ಗಾಯಗೊಂಡ ಯುವಕನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಾದ ಬಳಿಕ ಅವರು ಚೇತರಿಸಿಕೊಂಡಿದ್ದಾರೆ. ಫ್ಲೆಕ್ಸ್ ತೆರವು ವಿಚಾರ ಸಂಬಂಧ 10 ಜನರನ್ನು ವಶಕ್ಕೆ ಪಡೆಯಲಾಗಿತ್ತು. ಶಿವಮೊಗ್ಗ ನಗರದಾದ್ಯಂತ ಆಗಸ್ಟ್ 18ರ ತನಕ 144 ಸೆಕ್ಷನ್ ಜಾರಿ ಮಾಡಲಾಗಿತ್ತು.

50 ಕಡೆ ವಾಚ್‌ ಟವರ್‌

50 ಕಡೆ ವಾಚ್‌ ಟವರ್‌

ಇಂದು (ಸೆಪ್ಟೆಂಬರ್‌ 9) ಕೋಟೆ ಶ್ರೀಭೀಮೇಶ್ವರ ದೇವಸ್ಥಾನದಿಂದ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಹೊರಡಲಿದೆ. ನಗರದಲ್ಲಿ 350ಕ್ಕೂ ಅಧಿಕ ಸಾರ್ವಜನಿಕ ಗಣಪತಿ ಮೂರ್ತಿಗಳು ಪ್ರತಿಷ್ಠಾಪನೆಗೊಂಡರೂ ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನೆ ಮತ್ತು ವಿಸರ್ಜನೆಗೆ ವಿಶೇಷ ಮಹತ್ವವಿದೆ. ಹಾಗಾಗಿ, ಮೆರವಣಿಗೆ ಸಾಗುವ 50 ಕಡೆ ವಾಚ್‌ ಟವರ್‌ಗಳು ಪಾಲಿಕೆಯಿಂದ ನಿರ್ಮಾಣಗೊಂಡಿವೆ. ಪೊಲೀಸರು ವಾಚ್‌ ಟವರ್‌ಗಳ ಮೂಲಕ ಮೆರವಣಿಗೆಯ ಪೂರ್ಣ ಚಿತ್ರೀಕರಣ ಮಾಡಲಿದ್ದಾರೆ. ಕಿಡಿಗೇಡಿಗಳ ಹೆಡೆಮುರಿ ಕಟ್ಟಲು ಪೊಲೀಸರು ಸಜ್ಜಾಗಿದ್ದಾರೆ.

ಪೊಲೀಸ್‌ ಬಂದೋಬಸ್ತ್ ಮೂಲಕ ಮೆರವಣಿ

ಪೊಲೀಸ್‌ ಬಂದೋಬಸ್ತ್ ಮೂಲಕ ಮೆರವಣಿ

ಗಣಪತಿ ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ಸಿಸಿಟಿವಿಗಳನ್ನು ಅಳವಡಿಸಲಾಗುವುದು. ಪ್ರತಿಯೊಂದರ ಮೇಲೆ ನಿಗಾ ಇಡಲಾಗುವುದು. ಜತೆಗೆ, ಬಿಗಿ ಪೊಲೀಸ್‌ ಬಂದೋಬಸ್ತ್ ಮೂಲಕ ಮೆರವಣಿಗೆ ಸಾಗಲಿದೆ. ಗಣಪತಿಯ ವಿಸರ್ಜನೆ ಸಮಯ ಮತ್ತು ಮಾರ್ಗದ ಬಗ್ಗೆ ಸರಿಯಾದ ಮಾಹಿತಿ ಮುಂಚಿತವಾಗಿಯೇ ನೀಡಬೇಕು. ರಸ್ತೆಯಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುವಂತಿಲ್ಲ. ಜನರಿಗೆ ತೊಂದರೆ ಆಗದಂತೆ ಪ್ರತಿಷ್ಠಾಪಿಸಬೇಕು ಎಂದು ಹೇಳಿದರು.

ವಿಸರ್ಜನೆ ವೇಳೆ ಪೊಲೀಸ್ ಕಟ್ಟೆಚ್ಚರ

ವಿಸರ್ಜನೆ ವೇಳೆ ಪೊಲೀಸ್ ಕಟ್ಟೆಚ್ಚರ

ಗಣಪತಿ ವಿಸರ್ಜನೆ ಮಾಡುವ ಸ್ಥಳದಲ್ಲಿ ಪ್ರವೇಶ ಮತ್ತು ನಿರ್ಗಮನಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು. ಹಿಂದೂ ಮಹಾಸಭೆ ಗಣಪತಿ, ಓಂ ಗಣಪತಿ ವಿಸರ್ಜನೆ ಸಮಯಕ್ಕೆ ಬೇರೆ ಯಾವುದೇ ಗಣಪತಿ ವಿಸರ್ಜಿಸಬಾರದು. ವಿಸರ್ಜನೆಗೋಸ್ಕರ ಜಿಲ್ಲಾಡಳಿತದಿಂದ ಕ್ರೇನ್‌ ನೀಡುವಂತೆ ಕೋರಲಾಗಿದೆ. ಇದರ ವ್ಯವಸ್ಥೆ ಮಾಡಲಾಗುವುದು ಎಂದು ಡಿಸಿ ಡಾ.ಆರ್‌.ಸೆಲ್ವಮಣಿ ತಿಳಿಸಿದರು.

English summary
The police seized the saffron flag which was placed over the national emblem at Ashoka Nagar in Shimoga circle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X