ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ: ವಾಕಿಂಗ್ ಮಾಡುತ್ತಿದ್ದವರಿಗೆ ವ್ಯಾಯಾಮ ಮಾಡಿಸಿದ ಪೊಲೀಸರು

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಜೂನ್ 2: ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಶಿವಮೊಗ್ಗದ ನೆಹರೂ ಸ್ಟೇಡಿಯಂ ಪಕ್ಕದ ರಸ್ತೆಯಲ್ಲಿ ವಾಕಿಂಗ್ ಮಾಡುತ್ತಿದ್ದವರಿಗೆ ಶಿವಮೊಗ್ಗ ಪೊಲೀಸರು ಕ್ಲಾಸ್ ತೆಗೆದುಕೊಂಡಿದ್ದು, ಪೊಲೀಸ್ ಠಾಣೆಯ ಮುಂದೆಯೇ ವ್ಯಾಯಾಮ ಮಾಡಿಸಿ ಕಳುಹಿಸಿದ್ದಾರೆ.

ನಗರದ ನೆಹರೂ ಸ್ಟೇಡಿಯಂ ಪಕ್ಕದ ರಸ್ತೆಯಲ್ಲಿ ವಾಕಿಂಗ್ ಮಾಡುತ್ತಿದ್ದವರನ್ನು ಪೊಲೀಸ್ ಠಾಣೆಗೆ ಕರೆತಂದು ಕ್ಲಾಸ್ ತೆಗೆದುಕೊಳ್ಳಲಾಗಿದೆ. ಶಿವಮೊಗ್ಗ ಡಿವೈಎಸ್ಪಿ ಪ್ರಶಾಂತ್ ಮುನ್ನೋಳಿ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್ ರವಿ ಮತ್ತು ಜಯನಗರ ಠಾಣೆ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಹಲವರನ್ನು ವಶಕ್ಕೆ ಪಡೆದಿದ್ದಾರೆ.

'ಕೋವಿಡ್ ಟೆಸ್ಟ್ ಮಾಡಿಸುತ್ತೇವೆ'

ಜಯನಗರ ಠಾಣೆ ಮುಂದೆ ಎಲ್ಲರನ್ನು ನಿಲ್ಲಸಿ, ಲಾಕ್‌ಡೌನ್ ರೂಲ್ಸ್ ಕುರಿತು ಡಿವೈಎಸ್ಪಿ ಪ್ರಶಾಂತ್ ಮುನ್ನೋಳಿ ಮತ್ತು ಇನ್ಸ್‌ಪೆಕ್ಟರ್ ರವಿ ಅವರು ಪಾಠ ಮಾಡಿದರು. ಅಲ್ಲದೆ ಈ ಅವಧಿಯಲ್ಲಿ ಪೊಲೀಸರು ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದನ್ನು ತಿಳಿಸಿದರು. ಈಗ ವಶಕ್ಕೆ ಪಡದಿರುವವರ ಕೋವಿಡ್ ಟೆಸ್ಟ್ ಮಾಡಿಸಿ, ನೆಗೆಟಿವ್ ಬಂದವರನ್ನಷ್ಟೆ ಮನೆಗೆ ಕಳುಹಿಸಲಾಗುತ್ತದೆ ಎಂದರು. ಆಗ ಎಲ್ಲರೂ ತಮ್ಮನ್ನು ಬಿಡುವಂತೆ ಮನವಿ ಮಾಡಿದರು.

Shivamogga : Police Given Strict Warning To People Walking At Nehru Stadium Violating Guidelines

ವ್ಯಾಯಾಮ ಹೇಳಿಕೊಟ್ಟ ಡಿವೈಎಸ್ಪಿ

ಇದೆ ವೇಳೆ ಡಿವೈಎಸ್ಪಿ ಪ್ರಶಾಂತ್ ಮುನ್ನೋಳಿ ಅವರು ಮನೆಯಲ್ಲೇ ಇದ್ದು ವ್ಯಾಯಾಮ ಮಾಡುವಂತೆ ಮನವಿ ಮಾಡಿದರು. ಅಲ್ಲದೇ ಕೆಲವು ವ್ಯಾಯಾಮಗಳನ್ನು ಹೇಳಿಕೊಟ್ಟು, ಎಲ್ಲರಿಗೂ ವ್ಯಾಯಾಮ ಮಾಡಿಸಿದರು.

ವಾಕಿಂಗ್‌ಗೆ ಬಂದವರ ವಾಹನಗಳು ಸೀಜ್

Recommended Video

ವೈದನ ಮೇಲೆ ರೋಗಿಯ ಸಂಬಂಧಿಕರಿಂದ ಹಲ್ಲೆ | Oneindia Kannada

ನೆಹರೂ ಸ್ಟೇಡಿಯಂಗೆ ಪ್ರತಿ ದಿನ ನೂರಾರು ಮಂದಿ ವಾಕಿಂಗ್, ಜಾಗಿಂಗ್‌ಗೆ ಬರುತ್ತಾರೆ. ಆದರೆ ಲಾಕ್‌ಡೌನ್ ಹಿನ್ನೆಲೆ ಸ್ಟೇಡಿಯಂ ಬಂದ್ ಮಾಡಲಾಗಿದೆ. ಇಲ್ಲಿಗೆ ಬರುವ ಹಲವರು ವಾಹನಗಳನ್ನು ತರುತ್ತಾರೆ. ಇವತ್ತು ವಾಕಿಂಗ್, ಜಾಗಿಂಗ್‌ಗೆ ಬಂದಿದ್ದವರು ತಂದಿದ್ದ ವಾಹನಗಳನ್ನು ಸೀಜ್ ಮಾಡಲಾಗಿದೆ. ಲಾಕ್‌ಡೌನ್ ಅವಧಿ ಮುಗಿಯುವವರೆಗೆ ವಾಹನಗಳು ಸಿಗುವುದಿಲ್ಲ ಎಂದು ಡಿವೈಎಸ್ಪಿ ಪ್ರಶಾಂತ್ ಮುನ್ನೋಳಿ ತಿಳಿಸಿದರು.

English summary
Police have been strict warning for those walking on the road next to the Nehru Stadium in Shivamogga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X