ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗದಲ್ಲಿ ಕಾರಿನಲ್ಲಿ ಮಹಿಳೆ ಶವ ಪತ್ತೆ ಪ್ರಕರಣ; ಕೊನೆಗೂ ಸಿಕ್ಕಿಬಿದ್ದ ಆರೋಪಿ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಜನವರಿ 10: ಶಿವಮೊಗ್ಗ ನಗರದ ಹಳೇ ರೈಲು ನಿಲ್ದಾಣದ ಬಳಿ ಮಾರುತಿ ಓಮ್ನಿ ಕಾರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಓಮ್ನಿ ಕಾರಿನೊಳಗೆ ಸಿಕ್ಕಿತು ಪ್ಲಾಸ್ಟಿಕ್ ನಲ್ಲಿ ಸುತ್ತಿಟ್ಟಿದ್ದ ಮಹಿಳೆ ಶವಓಮ್ನಿ ಕಾರಿನೊಳಗೆ ಸಿಕ್ಕಿತು ಪ್ಲಾಸ್ಟಿಕ್ ನಲ್ಲಿ ಸುತ್ತಿಟ್ಟಿದ್ದ ಮಹಿಳೆ ಶವ

ಜನವರಿ 3ರಂದು ವಿದ್ಯಾನಗರ ರೈಲ್ವೇ ನಿಲ್ದಾಣದ ಬಳಿ ಓಮ್ನಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯೊಬ್ಬರ ಶವ ದೊರೆತಿತ್ತು. ಹತ್ತು ದಿನಗಳ ಹಿಂದೆ ಮಹಿಳೆಯನ್ನು ಕೊಲೆ ಮಾಡಿ ಕಾರಿನಲ್ಲಿ ಇಟ್ಟಿರುವುದಾಗಿ ತಿಳಿದುಬಂದಿತ್ತು. ಮುಖಕ್ಕೆ ಆಸಿಡ್ ಹಾಕಿ ಶವಕ್ಕೆ ಪ್ಲಾಸ್ಟಿಕ್ ಸುತ್ತಲಾಗಿತ್ತು. ಕೊಲೆಯಾದ ಮಹಿಳೆ ಊರುಗಡೂರು ಗ್ರಾಮದ ತಹಸೀನಾ ಎಂಬುದಾಗಿ ತಿಳಿದುಬಂದಿತ್ತು.

Police Arrested Accused In Women Death In Shivamogga

ಶಿವಮೊಗ್ಗದಲ್ಲಿ ಮಹಿಳೆ ಶವ ಪತ್ತೆ; ಪ್ರಕರಣಕ್ಕೆ ತಿರುವು!ಶಿವಮೊಗ್ಗದಲ್ಲಿ ಮಹಿಳೆ ಶವ ಪತ್ತೆ; ಪ್ರಕರಣಕ್ಕೆ ತಿರುವು!

ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಕೋಟೆ ಠಾಣೆ ಪೊಲೀಸರು ಕೊಲೆ ಆರೋಪಿ ಸೋಮಿನಕೊಪ್ಪದ ಸೈಯದ್ ಅಬು ಸಲೇಹ ಎಂಬುವನನ್ನು ಬಂಧಿಸಿದ್ದಾರೆ. ಮಹಿಳೆಯ ಶವ ಪತ್ತೆಯಾದ ಕಾರು ಈತನದ್ದೇ ಎಂದು ತಿಳಿದು ಬಂದಿದ್ದು, ಕೊಲೆಯಾದ ಮಹಿಳೆ ತಹಸೀನಾಳ ಜೊತೆ ಈತ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ.

English summary
Police have arrested a man accused of murdering a woman in shivamogga, where her body found in Maruti Omni car near the old railway station in Shivamogga
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X