• search
  • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶಿವಮೊಗ್ಗ: ಬೈಕ್ ನಲ್ಲಿ ಹೋಗುವಾಗ ಪ್ಯಾಂಟ್ ಜೇಬಿನಲ್ಲಿದ್ದ ಮೊಬೈಲ್ ಸ್ಪೋಟ!

By ಶಿವಮೊಗ್ಗ ಪ್ರತಿನಿಧಿ
|

ಶಿವಮೊಗ್ಗ, ಸೆಪ್ಟೆಂಬರ್ 17: ಪ್ಯಾಂಟಿನ ಜೇಬಿನಲ್ಲಿ ಮೊಬೈಲ್ ಇಟ್ಟುಕೊಂಡು ಬೈಕ್ ಚಲಾಯಿಸುವಾಗ ಇದ್ದಕ್ಕಿಂದ್ದಂತೆ ಮೊಬೈಲ್ ಸ್ಪೋಟವಾಗಿ, ಯುವಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆ ಸೊರಬದಲ್ಲಿ ನಡೆದಿದೆ.

ಸೊರಬ ತಾಲ್ಲೂಕಿನ ಕುಪ್ಪಗುಡ್ಡೆ ಗ್ರಾಮದ ಕೆರೆ ಬಳಿ ಈ ಮೊಬೈಲ್ ಸ್ಪೋಟ ಘಟನೆ ನಡೆದಿದ್ದು, ತವನಂದಿ ಗ್ರಾಮದ ಶರತ್(22) ಎಂಬಾತ ಗಾಯಗೊಂಡವನಾಗಿದ್ದಾನೆ. ಶರತ್ ತವನಂದಿ ಗ್ರಾಮದಿಂದ ಕುಪ್ಪಗುಡ್ಡೆಗೆ ಹೋಗುವಾಗ ಕೆರೆಯ ಬಳಿ ಮೊಬೈಲ್ ಸ್ಟೋಟಗೊಂಡಿದೆ.

ಪೊಲೀಸ್ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ, ಹಣಕ್ಕಾಗಿ ಮೆಸೇಜ್

ಇದರಿಂದ ಯುವಕ ಗಾಬರಿಯಲ್ಲಿ ಬೈಕ್ ನ ನಿಯಂತ್ರಣ ಕಳೆದುಕೊಂಡು ಕೆರೆಗೆ ಬಿದ್ದಿದ್ದಾರೆ. ತಕ್ಷಣ ಶರತ್ ನನ್ನು ಹಿಂಬದಿ ಬೈಕ್ ಸವಾರರು ರಕ್ಷಿಸಿ, ನಂತರ ಸೊರಬ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಯುವಕ ಶರತ್ ನ ಬಲ ತೂಡೆಗೆ ತೀವ್ರ ಗಾಯವಾಗಿದ್ದು, ಈ ಕುರಿತು ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
Shivamogga News: A person injured by mobile blast while he riding bike in soraba. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X