• search
  • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶಿವಮೊಗ್ಗದಲ್ಲಿ ಜನರಿಂದ ಪೌರ ಕಾರ್ಮಿಕರಿಗೆ, ಪೊಲೀಸರಿಗೆ ಪಾದ ಪೂಜೆ

|

ಶಿವಮೊಗ್ಗ, ಏಪ್ರಿಲ್ 14: ಕೊರೊನಾ ವೈರಸ್‌ ಭೀತಿ ನಡುವೆಯೂ ತಮ್ಮ ಆರೋಗ್ಯದ ಬಗ್ಗೆ ಯೋಚನೆ ಮಾಡದೆ, ಪೊಲೀಸರು, ಪೌರ ಕಾರ್ಮಿಕರು, ವೈದ್ಯರು ಹಾಗೂ ಪತ್ರಕರ್ತರು ಕೆಲಸ ಮಾಡುತ್ತಿದ್ದಾರೆ. ಈ ಪೈಕಿ ಪೊಲೀಸರಿಗೆ ಹಾಗೂ ಪೌರ ಕಾರ್ಮಿಕರಿಗೆ ವಿಶೇಷ ಗೌರವವನ್ನು ಶಿವಮೊಗ್ಗದಲ್ಲಿ ಸಲ್ಲಿಸಲಾಗಿದೆ.

ಶಿವಮೊಗ್ಗದ ಕಡೇಕಲ್ ಗ್ರಾಮದಲ್ಲಿ ಪೊಲೀಸರಿಗೆ ಹಾಗೂ ಪೌರ ಕಾರ್ಮಿಕರಿಗೆ ಪಾದ ಪೂಜೆ ಮಾಡಲಾಗಿದೆ. ಬಿಜೆಪಿ ಕಾರ್ಯಕರ್ತರು ಹಾಗೂ ಗ್ರಾಮಸ್ಥರ ವತಿಯಿಂದ ಈ ಕಾರ್ಯಕ್ರಮ ನಡೆದಿದೆ. ಈ ಮೂಲಕ ಪೊಲೀಸರು ಹಾಗೂ ಪೌರ ಕಾರ್ಮಿಕರಿಗೆ ಗ್ರಾಮದ ಜನ ಧನ್ಯವಾದ ತಿಳಿಸಿದ್ದಾರೆ.

ಕೇವಲ ಒಂದೇ ಒಂದು ಕೊರೊನಾ ಪ್ರಕರಣ ಹೊಂದಿರುವ ಭಾರತದ 3 ರಾಜ್ಯಗಳು

ಕೊರೊನಾ ವೈರಸ್‌ ತಡೆಯಲು, ಲಾಕ್ ಡೌನ್ ಘೋಷಣೆ ಆಗಿದೆ. ಪೊಲೀಸರು ಆ ನಿಯಮ ಸರಿಯಾಗಿ ಪಾಲನೆ ಆಗುವಂತೆ ನೋಡಿಕೊಳ್ಳುತ್ತಿದ್ದಾರೆ. ಹಗಲು ರಾತ್ರಿ ಎನ್ನದೆ ಕೆಲಸ ಮಾಡುತ್ತಿದ್ದಾರೆ. ಎಷ್ಟೋ ಪೊಲೀಸರು ತಮ್ಮ ಕುಟುಂಬದಿಂದ ದೂರ ಇದ್ದಾರೆ.

ಇತ್ತ ಪೌರ ಕಾರ್ಮಿಕರು ಎಂದಿನಂತೆ ತಮ್ಮ ಕೆಲಸ ಮಾಡುತ್ತಿದ್ದಾರೆ. ವೈರಸ್‌ ಹರಡದಂತೆ ಶುಚಿತ್ವ ಕಾಪಾಡಿಕೊಳ್ಳಲು ಸಹಾಯ ಮಾಡಿದ್ದಾರೆ. ಹೀಗಾಗಿ ವೈರಸ್‌ ವಿರುದ್ಧ ಹೋರಾಟ ನಡೆಸಿದ ಇವರನ್ನು ಗ್ರಾಮಸ್ಥರು ಪಾದ ಪೂಜೆ ಮಾಡಿ, ಸನ್ಮಾನ ಮಾಡಿದರು. ತಮ್ಮ ರಕ್ಷಣೆಗೆ ನಿಂತವರಿಗೆ ನಮನ ಸಲ್ಲಿಸಿದರು.

ಅಂದಹಾಗೆ, ಶಿವಮೊಗ್ಗ ಜಿಲ್ಲೆಯಲ್ಲಿ ಅದೃಷ್ಟವಶಾತ್ ಈವರೆಗೆ ಒಂದು ಪಾಸಿಟಿವ್ ಪ್ರಕರಣಗಳು ಕಂಡು ಬಂದಿಲ್ಲ.

English summary
Kadekal village people thanked police by doing paada pooja in Shivamogga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X