ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪರೇಶ್ ಮೇಸ್ತ ಸಾವು : ಪ್ರಮುಖ ಆರೋಪಿ ಬಂಧನ

|
Google Oneindia Kannada News

ಶಿವಮೊಗ್ಗ, ಫೆಬ್ರವರಿ 04 : ರಾಜ್ಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದ್ದ ಪರೇಶ್ ಮೇಸ್ತ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ. ಡಿ.8ರಂದು ಪರೇಶ್ ಮೇಸ್ತ ಶವ ಪತ್ತೆಯಾಗಿತ್ತು.

ಹೊನ್ನಾವರದ ಸಲೀಂ ಶೇಖ್ ಎಂಬುವವರನ್ನು ಸಾಗರದ ಮನೆಯೊಂದರಲ್ಲಿ ಹೊನ್ನಾವರದ ಪೊಲೀಸರು ಬಂಧಿಸಿದ್ದಾರೆ. ಸಿಪಿಐ ಚೆಲುವರಾಯಸ್ವಾಮಿ ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಪರೇಶ್ ಮೇಸ್ತ ಸಾವಿನ ಪ್ರಕರಣ ಸಿಬಿಐ ತನಿಖೆಗೆಪರೇಶ್ ಮೇಸ್ತ ಸಾವಿನ ಪ್ರಕರಣ ಸಿಬಿಐ ತನಿಖೆಗೆ

2016ರ ಡಿಸೆಂಬರ್ 6ರಂದು ಹೊನ್ನಾವರದಲ್ಲಿ ಗಲಭೆ ನಡೆದಿತ್ತು. ಈ ಸಂದರ್ಭದಲ್ಲಿ ಪರೇಶ್ ಮೇಸ್ತ ನಾಪತ್ತೆಯಾಗಿತ್ತು. ಡಿ.8ರಂದು ಹೊನ್ನಾವರದ ಕೆರೆಯಲ್ಲಿ ಆತನ ಶವ ಪತ್ತೆಯಾಗಿತ್ತು.

Paresh Mesta death : Main accused arrested in Sagar

ಪರೇಶ್ ಮೇಸ್ತ ತಂದೆ ಕಮಲಾಕರ ಅವರು 5 ಜನರ ವಿರುದ್ಧ ದೂರು ನೀಡಿದ್ದರು. ಐವರು ಆರೋಪಿಗಳ ಪೈಕಿ ಅಣ್ಣಿಗೇರಿ ಎಂಬುವವರನ್ನು ಈಗಾಗಲೇ ಬಂಧಿಸಲಾಗಿದೆ. ಪ್ರಮುಖ ಆರೋಪಿ ಸಲೀಂ ಶೇಖ್‌ನನ್ನು ಈಗ ಬಂಧಿಸಲಾಗಿದೆ.

ಕುಮಟಾ-ಹೊನ್ನಾವರ ಕ್ಷೇತ್ರ: ಬೀಚುಗಳ ಸ್ವರ್ಗದಲ್ಲಿ ಗೆಲ್ಲುವವರ್ಯಾರು?ಕುಮಟಾ-ಹೊನ್ನಾವರ ಕ್ಷೇತ್ರ: ಬೀಚುಗಳ ಸ್ವರ್ಗದಲ್ಲಿ ಗೆಲ್ಲುವವರ್ಯಾರು?

ಉಳಿದ ಆರೋಪಿಗಳಾದ ಸಿಫ್, ಇಮ್ತಿಯಾಜ್, ಫೈಜಲ್ ಅವರು ತಲೆಮರೆಸಿಕೊಂಡಿದ್ದಾರೆ. ಉಳಿದ ಆರೋಪಿಗಳ ಸುಳಿವು ಸಿಕ್ಕಿದೆ ಶೀಘ್ರದಲ್ಲೇ ಅವರನ್ನು ಬಂಧಿಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

ಪರೇಶ್ ಹತ್ಯೆ, ಮುಸ್ಲಿಮರ ಮೇಲೆ ಡೌಟು: ಮೇಸ್ತಾ ತಂದೆಪರೇಶ್ ಹತ್ಯೆ, ಮುಸ್ಲಿಮರ ಮೇಲೆ ಡೌಟು: ಮೇಸ್ತಾ ತಂದೆ

ಪರೇಶ್ ಮೇಸ್ತ ಸಾವಿನ ಪ್ರಕರಣದ ತನಿಖೆಯನ್ನು ಕರ್ನಾಟಕ ಸರ್ಕಾರ ಸಿಬಿಐ ತನಿಖೆಗೆ ವಹಿಸಿದೆ. ಪರೇಶ್ ಮೇಸ್ತ ಸಾವಿನ ಬಳಿಕ ಉತ್ತರ ಕನ್ನಡದ ವಿವಿಧ ತಾಲೂಕುಗಳಲ್ಲಿ ಭಾರೀ ಹಿಂಸಾಚಾರ ನಡೆದಿತ್ತು.

English summary
Honnavar police arrested main accused in connection with the murder case of Paresh Mesta. The death of 19-year-old Paresh Mesta, which sparked violence across Uttara Kannada district of Karnataka in the month of December 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X