ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗ್ರಾ.ಪಂ.ಚುನಾವಣೆ ಮುಂದೂಡಿಕೆಗೆ ಶಿವಮೊಗ್ಗ ಗ್ರಾ.ಪಂ.ಸದಸ್ಯರ ವಿರೋಧ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಮೇ 18: ಕೊರೊನಾ ಲಾಕ್ ಡೌನ್ ನಿಂದಾಗಿ ಇದೇ ತಿಂಗಳು ನಡೆಯಬೇಕಿದ್ದ ಗ್ರಾಮ ಪಂಚಾಯಿತಿಗಳ ಚುನಾವಣೆಯನ್ನು ಆರು ತಿಂಗಳು ಮುಂದೂಡಿದ್ದು, ಆಡಳಿತ ಸಮಿತಿ ಅಥವಾ ಆಡಳಿತಾಧಿಕಾರಿಗಳನ್ನು ನೇಮಿಸುವ ಕುರಿತು ತೀರ್ಮಾನ ಮಾಡಲಾಗಿದೆ. ಆದರೆ ಹೊಸ ಆಡಳಿತ ಸಮಿತಿ ರಚನೆಗೆ ಶಿವಮೊಗ್ಗದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ.

ನಮ್ಮನ್ನೇ ಮುಂದುವರೆಸಿ, ಇಲ್ಲವೇ ಚುನಾವಣೆ ನಡೆಸಿ ಎಂದು ಗ್ರಾಮ ಪಂಚಾಯತಿ ಸದಸ್ಯರು ಒತ್ತಾಯಿಸಿದ್ದಾರೆ. ಹೊಸ ಆಡಳಿತ ಸಮಿತಿ ಬೇಡವೇ ಬೇಡ. ಕೊರೊನಾ ಸಂಕಷ್ಟದಲ್ಲಿ ಕೆಲಸ ಮಾಡಿದ್ದು ನಾವು. ರಾಜ್ಯದ ಯಾವುದೇ ಸಚಿವರು, ನಾಯಕರು ಬಂದು ಇಲ್ಲಿ ಯಾವುದೇ ಕೆಲಸ ಮಾಡಿಲ್ಲ. ಈ ಒಂದು ಸಂದರ್ಭವನ್ನೇ ಮುಂದಿಟ್ಟುಕೊಂಡು ರಾಜಕೀಯ ಮಾಡಬೇಡಿ ಎಂದು ವಿರೋಧಿಸಿದ್ದಾರೆ.

ಕೊರೊನಾ ಪರಿಣಾಮ; ಬಿಬಿಎಂಪಿ ಚುನಾವಣೆ ಮುಂದೂಡಿಕೆ?ಕೊರೊನಾ ಪರಿಣಾಮ; ಬಿಬಿಎಂಪಿ ಚುನಾವಣೆ ಮುಂದೂಡಿಕೆ?

ಜಿಲ್ಲೆಯ 271 ಗ್ರಾಮ ಪಂಚಾಯತಿಗಳಲ್ಲೂ ಹೋರಾಟಕ್ಕೆ ಸಿದ್ಧ. ಹೊಸ ಆಡಳಿತ ಸಮತಿ ವಿಚಾರವನ್ನು ತಕ್ಷಣವೇ ಕೈ ಬಿಡಿ, ಕೈ ಬಿಡದಿದ್ದರೆ ಮುಂದಿನ ದಿನಗಳಲ್ಲಿ 6021 ಗ್ರಾಮ ಪಂಚಾಯತಿಯಲ್ಲೂ ಹೋರಾಟ ನಡೆಸುತ್ತೇವೆ. ಗ್ರಾಮ ಪಂಚಾಯಿತಿಯಲ್ಲಿ ತಮ್ಮ ಬೆಂಬಲಿತರನ್ನು ನಿಲ್ಲಿಸಲು ಬಿಜೆಪಿಯ ಹೊಸ ತಂತ್ರವಿದು ಎಂದು ದೂರಿದ್ದಾರೆ.

Opposition To Postpone Of Gram Panchayat Election In Shivamogga

ಅಧಿಕಾರ ಚುಕ್ಕಾಣಿ ಹಿಡಿಯಲು ಹಾಗೂ ನಮ್ಮ ಅಧಿಕಾರವನ್ನು ಮೊಟಕುಗೊಳಿಸಲು ಹುನ್ನಾರ ನಡೆಯುತ್ತಿದೆ. ಗ್ರಾಮ ಪಂಚಾಯತಿ ಚುನಾವಣೆಯನ್ನು ಆರು ತಿಂಗಳು ಮುಂದೂಡಿ ಒಳ ರಾಜಕೀಯ ಮಾಡುತ್ತಿದ್ದಾರೆ. ಚುನಾವಣೆ ಏನೇ ಇದ್ದರು ಚುನಾವಣಾ ಆಯೋಗದ ನಿರ್ಧಾರಕ್ಕೆ ಬಿಟ್ಟಿದ್ದು. ಕೇಂದ್ರ ಹಾಗೂ ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

English summary
Gram panchayat members opposed the decision of postponement of gram panchayat election to 6 months, gram panchayat election, opposition to gram panchayat election in shivamogga, shivamogga news,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X