ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಆನ್ ಲೈನ್ ಅರ್ಜಿ ಆಹ್ವಾನ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಸೆಪ್ಟೆಂಬರ್ 24: ಕೇಂದ್ರ ಸರ್ಕಾರದ ವಸತಿ ಮತ್ತು ನಗರಾಭಿವೃದ್ಧಿ ಹಾಗೂ ಮಾನವ ಸಂಪನ್ಮೂಲ ಇಲಾಖೆಯ ಮಾರ್ಗಸೂಚಿಯಂತೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಸಮಿತಿಯ ಜಂಟಿ ಸಹಯೋಗದೊಂದಿಗೆ ಶಿವಮೊಗ್ಗ ಸ್ಮಾರ್ಟ್ ಸಿಟಿ ಲಿಮಿಟೆಡ್ ನಲ್ಲಿ ತಾಂತ್ರಿಕ ಪದವೀಧರರಿಂದ ಅರ್ಜಿ ಆಹ್ವಾನ ಮಾಡಲಾಗಿದೆ.

ಶಿವಮೊಗ್ಗ ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ತಾಂತ್ರಿಕ ಶಿಕ್ಷಣ ಹಿನ್ನೆಲೆಯೂ ಸೇರಿದಂತೆ 18 ತಿಂಗಳಿನ ಒಳಗೆ ತೇರ್ಗಡೆಯಾದ ಹೊಸ ಪದವೀಧರರಿಗೆ ರೂ. 5000/- ಸ್ಟೆಫಂಡ್ ನೊಂದಿಗೆ ಒಂದು ವರ್ಷದ ಅವಧಿಗೆ ಹಾಗೂ ಸ್ಟೆಫಂಡ್ ರಹಿತವಾಗಿ ಎರಡು ತಿಂಗಳ ಅವಧಿಗೆ ಇಂಜಿನಿಯರಿಗ್, ನಗರ ಯೋಜನೆ, ಹಣಕಾಸು, ಪರಿಸರ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಪ್ರಾಯೋಗಿಕ ತರಬೇತಿ ಪಡೆಯಲು ಅನುಕೂಲವಾಗುವ ಇಂಟರ್ನ್ ಶಿಪ್ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದ್ದು, ಅರ್ಹ ಪದವೀಧರ ಅಭ್ಯರ್ಥಿಗಳಿಂದ ಆನ್ ಲೈನ್ ಅರ್ಜಿ ಆಹ್ವಾನಿಸಿದೆ.

ಈ ಯೋಜನೆಯಲ್ಲಿ ಯುವಕರುಗಳ ಹೊಸ ವಿಚಾರಗಳನ್ನು ಅಳವಡಿಸಿಕೊಳ್ಳಲು ಅವಕಾಶವಾಗುವುದಲ್ಲದೇ, ಹಲವು ಪ್ರಕಾರಗಳ ಉದ್ಯೋಗಾವಕಾಶಕ್ಕೂ ಅರ್ಹತೆ ಪಡೆಯಬಹುದಾಗಿದೆ.

Online Application Invite In Shivamogga Smart City Project

ಆಸಕ್ತರು http://internship.aict-indi.org ರಲ್ಲಿ ಅಕ್ಟೋಬರ್ 15ರೊಳಗಾಗಿ ಅರ್ಜಿ ಸಲ್ಲಿಸುವಂತೆ ಶಿವಮೊಗ್ಗ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರ ಚಿದಾನಂದ ಎಸ್. ವಟಾರೆ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ ಸ್ಮಾರ್ಟ್ ಸಿಟಿ ಜಾಲತಾಣದಲ್ಲಿ ಅಥವಾ ಶಿವಮೊಗ್ಗ ಸ್ಮಾಟ್ ಸಿಟಿ ಕಚೇರಿಯನ್ನು ಖುದ್ದಾಗಿ ಸಂಪರ್ಕಿಸಬಹುದಾಗಿದೆ.

English summary
Applications are invited from Technical Graduates at Shivamogga Smart City Limited in collaboration with All India Technical Education Committee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X