ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುವೆಂಪು ವಿವಿ ಪ್ರಭಾರ ಕುಲಪತಿಯಾಗಿ ಎನ್‌.ಎಸ್.ಪಾಟೀಲ್ ನೇಮಕ

|
Google Oneindia Kannada News

ಶಿವಮೊಗ್ಗ, ಜೂನ್ 18 : ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಪ್ರಭಾರ ಕುಲಪತಿಯಾಗಿ ಎನ್.ಎಸ್.ಪಾಟೀಲ್ ಅವರನ್ನು ನೇಮಕ ಮಾಡಲಾಗಿದೆ. ಕುಪತಿಯಾಗಿದ್ದ ಪ್ರೊ.ಜೋಗನ್ ಶಂಕರ್ ಅಧಿಕಾರವನ್ನು ಹಸ್ತಾಂತರ ಮಾಡಿದರು.

ಕುವೆಂಪು ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಪ್ರೊ.ಜೋಗನ್ ಶಂಕರ್ ಅವರ ಅಧಿಕಾರಾವಧಿ ಪೂರ್ಣಗೊಂಡಿದೆ. ಈ ಹಿನ್ನಲೆಯಲ್ಲಿ ಪ್ರಭಾರ ಕುಲಪತಿಯಾಗಿ ಎನ್.ಎಸ್.ಪಾಟೀಲ್ ಅವರನ್ನು ನೇಮಕ ಮಾಡಲಾಗಿದೆ.

ಕುವೆಂಪು ವಿವಿ ನಕಲಿ ಅಂಕಪಟ್ಟಿ ಹಗರಣ, ನಾಲ್ವರು ವಜಾಕುವೆಂಪು ವಿವಿ ನಕಲಿ ಅಂಕಪಟ್ಟಿ ಹಗರಣ, ನಾಲ್ವರು ವಜಾ

ಅಧಿಕಾರ ಸ್ವೀಕಾರ ಮಾಡಿದ ಬಳಿಕ ಮಾತನಾಡಿದ ಎನ್.ಎಸ್.ಪಾಟೀಲ್ ಅವರು, 'ವಿಶ್ವವಿದ್ಯಾಲಯದಲ್ಲಿ ಸಮರ್ಥ ಸಿಬ್ಬಂದಿ ಇದ್ದಾರೆ. ಆಡಳಿತ ಸುಲಲಿತವಾಗಿ ನಡೆಯುತ್ತಿದೆ. ಇದುವರೆಗೂ ವಿವಿಯ ಕಾರ್ಯಸಾಧನೆ ಉನ್ನತ ಮಟ್ಟದಲ್ಲಿದ್ದು, ಅದೇ ಗುಣಮಟ್ಟದಲ್ಲಿ ಮುಂದುವರೆಸುವ ಸವಾಲು ತಮ್ಮ ಮೇಲಿದೆ' ಎಂದರು.

ಮೈಸೂರು ವಿವಿ ಸಬ್ ಡೊಮೈನ್ ಹ್ಯಾಕ್ ಗೆ ವಿಫಲ ಯತ್ನಮೈಸೂರು ವಿವಿ ಸಬ್ ಡೊಮೈನ್ ಹ್ಯಾಕ್ ಗೆ ವಿಫಲ ಯತ್ನ

NS Patil is acting VC for Kuvempu University

ಎನ್.ಎಸ್.ಪಾಟೀಲ್ ಅವರು ಕುವೆಂಪು ವಿಶ್ವವಿದ್ಯಾಲಯದ ಹಿರಿಯ ಡೀನ್ ಮತ್ತು ಶಿಕ್ಷಣಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿದ್ದಾರೆ. ಕರ್ನಾಟಕ ಸರ್ಕಾರ ಶೀಘ್ರದಲ್ಲೇ ವಿಶ್ವವಿದ್ಯಾಲಯಕ್ಕೆ ಕುಲಪತಿ ನೇಮಕ ಮಾಡುವ ನಿರೀಕ್ಷೆ ಇದೆ.

ವಿವಿಗಳಲ್ಲಿ 200 ಪಾಯಿಂಟ್ ರೋಸ್ಟರ್ ವ್ಯವಸ್ಥೆಗೆ ಕೇಂದ್ರದ ಒಪ್ಪಿಗೆವಿವಿಗಳಲ್ಲಿ 200 ಪಾಯಿಂಟ್ ರೋಸ್ಟರ್ ವ್ಯವಸ್ಥೆಗೆ ಕೇಂದ್ರದ ಒಪ್ಪಿಗೆ

ಪ್ರಭಾರ ಕುಲಪತಿಗಳ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಕುಲಸಚಿವ ಭೋಜ್ಯಾನಾಯ್ಕ್, ಪರೀಕ್ಷಾಂಗ ಕುಲಸಚಿವ ಪ್ರೊ.ರಾಜಾ ನಾಯಕ ಮುಂತಾದವರು ಉಪಸ್ಥಿತರಿದ್ದರು.

English summary
N.S.Patil has been appointed as the acting Vice-Chancellor of Kuvempu University, Shivamogga. ‎Prof. Jogan Shankar handover the charge to N.S.Patil.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X