ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗದಲ್ಲಿ ಫೆ.14ರಂದು ಕಿಸ್ ಆಫ್ ಲವ್?

|
Google Oneindia Kannada News

ಶಿವಮೊಗ್ಗ, ಜನವರಿ 30 : ಫೆಬ್ರವರಿ 14ರ ಪ್ರೇಮಿಗಳ ದಿನದಂದು ಶಿವಮೊಗ್ಗದಲ್ಲಿ ಕಿಸ್ ಆಫ್ ಲವ್ ಆಯೋಜಿಸಲು ಅನುಮತಿ ಕೇಳಲಾಗಿದೆ. ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದು ಎಂದು ಒತ್ತಾಯಿಸಿವೆ.

'ವಿದ್ಯಾರ್ಥಿ' ಸಂಘಟನೆಯ ಅಧ್ಯಕ್ಷ ವಿನಯ್ ಕೆ.ಸಿ.ರಾಜಾವತ್ ಅವರು ಫೆ.14ರಂದು ಕಿಸ್ ಆಫ್ ಲವ್ ಆಚರಣೆ ಮಾಡಲು ಅನುಮತಿ ನೀಡಬೇಕು. ಗೋಪಿ ವೃತ್ತದಲ್ಲಿ ಕಾರ್ಯಕ್ರಮ ಆಯೋಜಿಸುತ್ತಿದ್ದು, ಕಾರ್ಯಕ್ರಮಕ್ಕೆ ರಕ್ಷಣೆ ನೀಡಬೇಕು ಎಂದು ಎಸ್ಪಿ ರವಿ ಡಿ.ಚೆನ್ನಣ್ಣನವರ್ ಮತ್ತು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ. [ಕಿಸ್ ಆಫ್ ಲವ್ : ವಿದ್ಯಾರ್ಥಿಗಳು ಏನಂತಾರೆ?]

kiss of love

ಕಿಸ್ ಆಫ್ ಲವ್‌ನಂತಹ ಕಾರ್ಯಕ್ರಮ ಆಯೋಜಿಸಲು ಅನುಮತಿ ನೀಡಬಾರದು ಎಂದು ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳ ಒತ್ತಾಯಿಸಿವೆ. ಕಾರ್ಯಕ್ರಮಕ್ಕೆ ಅವಕಾಶ ನೀಡಿದರೆ ಮುಂದೆ ನಡೆಯುವ ಅನಾಹುತಕ್ಕೆ ನಮ್ಮನ್ನು ಹೊಣೆ ಮಾಡಬೇಡಿ ಎಂದು ಭಜರಂಗದಳದ ನಗರ ಸಂಚಾಲಕ ಮಾಲತೇಶ್ ಹೇಳಿದ್ದಾರೆ. [ಕಿಸ್ ಆಫ್ ಲವ್ ಕೇಸಲ್ಲಿ ಟ್ವಿಸ್ಟ್ : ಇದಕ್ಕೆಲ್ಲ ಆತನೇ ಕಾರಣ!]

ಬೆಂಗಳೂರಲ್ಲಿ ಅನುಮತಿ ನೀಡಿರಲಿಲ್ಲ : 2014ರ ನವೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಕಿಸ್ ಆಫ್ ಲವ್ ಆಯೋಜಿಸಲು ಪೊಲೀಸರ ಅನುಮತಿ ಕೇಳಲಾಗಿತ್ತು. ಆದರೆ, ಪೊಲೀಸರು ಅನುಮತಿ ನೀಡಲು ನಿರಾಕರಿಸಿದ್ದರು. ಕಿಸ್‌ ಆಫ್‌ ಲವ್‌ಗೆ ಅನುಮತಿ ನೀಡದಂತೆ ಹಿಂದೂ ಸಂಘಟನೆಗಳು ಪೊಲೀಸರನ್ನು ಒತ್ತಾಯಿಸಿದ್ದವು.

ಕೇರಳದಲ್ಲಿ ಕಿಸ್ ಆಫ್ ಲವ್ ಅಭಿಯಾನದ ರೂವಾರಿಗಳಾದ ರಾಹುಲ್ ಪಶುಪಾಲನ್ ಮತ್ತು ಆತನ ಪತ್ನಿ ರೇಶ್ಮಿ ನಾಯರ್ ಕೆಲವು ದಿನಗಳ ಹಿಂದೆ ವೇಶ್ಯಾವಾಟಿಕೆ ಜಾಲದಲ್ಲಿ ಸಿಕ್ಕಿಬಿದ್ದಿದ್ದಾರೆ. ರೇಶ್ಮಿ ನಾಯರ್ ಗಂಡನ ವಿರುದ್ಧವೇ ಆರೋಪ ಮಾಡಿದ್ದು ಆತನೇ ತನ್ನನ್ನು ವೇಶ್ಯಾವಾಟಿಕೆಗೆ ತಳ್ಳಿದ್ದ ಎಂದು ದೂರಿದ್ದಾಳೆ.

English summary
Shivamogga 'Vidyarthi sangatane' president K.C.Vinay Rajavath submitted a letter to Shivamogga Superintendent of Police Ravi D.Channannavar seeking permission to organize 'Kiss of Love' in city on February 4, 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X