ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಕ್ತರಿಗೆ ಸಿಗಂದೂರಿನಿಂದ ಬಂತು ಮತ್ತೊಂದು ಸಂದೇಶ

|
Google Oneindia Kannada News

ಸಾಗರ, ಜೂನ್ 30: ಸಿಗಂದೂರು ದೇವಸ್ಥಾನದಿಂದ ಭಕ್ತರಿಗೆ ಮತ್ತೊಂದು ಸಂದೇಶ ಬಂದಿದೆ. ಕೊರೊನಾ ವೈರಸ್‌ ಹಬ್ಬುತ್ತಿರುವ ಹಿನ್ನಲೆ ಇನ್ನಷ್ಟು ದಿನ ಭಕ್ತರಿಗೆ ದೇವಸ್ಥಾನಕ್ಕೆ ಬಾರದೆ ಇರಲು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ಶರಾವತಿ ಹಿನ್ನೀರು ಪ್ರದೇಶದಲ್ಲಿ ಕೊರೊನಾ ವೈರಸ್‌ ಭೀತಿ ಹೆಚ್ಚಾಗಿದೆ. ಬೆಂಗಳೂರಿನಿಂದ ದೇವಸ್ಥಾನಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿದ್ದು, ಕೊರೊನಾ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಈ ಕಾರಣ ಭಕ್ತರಿಗೆ ದೇವಸ್ಥಾನಕ್ಕೆ ಬರದೆ ಇರುವಂತೆ ಮತ್ತೊಮ್ಮೆ ಆಡಳಿತ ಮಂಡಳಿ ಸೂಚಿಸಿದೆ.

ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕ ಪ್ರವೇಶ ನಿಷೇಧಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕ ಪ್ರವೇಶ ನಿಷೇಧ

ಲಾಕ್‌ಡೌನ್ ಸಡಿಲಿಕೆ ನಂತರ ದೇವಸ್ಥಾನವನ್ನು ತೆರೆದಿಲ್ಲ. ಭಕ್ತರಿಗೆ ಅವಕಾಶ ನೀಡಿಲ್ಲ. ಆದರೂ, ಅನೇಕರು ದೇವಸ್ಥಾನದ ಹೊರಗೆ ಬಂದು, ದೇವರಿಗೆ ನಮಸ್ಕಾರ ಮಾಡಿ ಹೊಗುತ್ತಿದ್ದಾರೆ. ಕೆಲವರು ಈ ಸಮಯದಲ್ಲಿಯೂ ಮೋಜು ಮಸ್ತಿ ಮಾಡಲು ಸಿಗಂದೂರು ಭಾಗಕ್ಕೆ ಬರುತ್ತಿದ್ದಾರೆ. ಇವರಿಗೆ ಕಡಿವಾಣ ಹಾಕಲು ಆಡಳಿತ ಮಂಡಳಿ ಮುಂದಾಗಿದೆ.

No Entry For Devotees To Sigandur Temple

ಮೋಜು ಮಸ್ತಿ ಮಾಡಲು ಸಿಗಂದೂರು ಭಾಗಕ್ಕೆ ಬರುವ ಪ್ರವಾಸಿಗರನ್ನು ನಿಯಂತ್ರಣ ಮಾಡಬೇಕೆದಂದು ದೇವಸ್ಥಾನದ ಆಡಳಿತ ಮಂಡಳಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದೆ. ದೇವರ ದರ್ಶನ ಪಡೆಯಲು ಬರುವವರು ಇನ್ನೂ ಕಾಯಬೇಕು ಎಂದು ತಿಳಿಸಿದ್ದಾರೆ.

English summary
No entry for devotees to sigandur temple due to COVID-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X