ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ : ನೀರಿನ ಕೊರತೆ, ನಗರದಲ್ಲಿ ಜೂ.10ರಿಂದ 2 ದಿನಕ್ಕೊಮ್ಮೆ ನೀರು

|
Google Oneindia Kannada News

ಶಿವಮೊಗ್ಗ, ಜೂನ್ 07 : ಮಲೆನಾಡಿಗೂ ಭೀಕರ ಬರಗಾಲದ ಬಿಸಿ ತಟ್ಟಿದೆ. ಶಿವಮೊಗ್ಗ ನಗರದಲ್ಲಿ ಜೂನ್ 10 ರಿಂದ ಪ್ರತಿದಿನ ನೀರು ಸರಬರಾಜು ಮಾಡುವುದಿಲ್ಲ ಎಂದು ಮಹಾನಗರ ಪಾಲಿಕೆ ಶುಕ್ರವಾರ ಘೋಷಣೆ ಮಾಡಿದೆ.

ಶುಕ್ರವಾರ ಶಿವಮೊಗ್ಗ ಮಹಾನಗರ ಪಾಲಿಕೆ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನಗರದ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಚರ್ಚೆ ನಡೆದಿದೆ. ಪ್ರತಿದಿನದ ಬದಲು ಎರಡು ದಿನಕ್ಕೊಮ್ಮೆ ನಗರಕ್ಕೆ ನೀರು ಪೂರೈಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಕುಡಿಯುವ ನೀರಿನ ಸಮಸ್ಯೆಯೇ ಸಹಾಯವಾಣಿಗೆ ಕರೆ ಮಾಡಿಕುಡಿಯುವ ನೀರಿನ ಸಮಸ್ಯೆಯೇ ಸಹಾಯವಾಣಿಗೆ ಕರೆ ಮಾಡಿ

'ಮಳೆಗಾಲ ಆರಂಭವಾಗುವ ತನಕ ಶಿವಮೊಗ್ಗ ನಗರಕ್ಕೆ ಪ್ರತಿದಿನ ನೀರು ಸರಬರಾಜು ಮಾಡುವುದಿಲ್ಲ. ಎರಡು ದಿನಕ್ಕೊಮ್ಮೆ ನೀರನ್ನು ಬಿಡಲಾಗುತ್ತದೆ. ಜನರು ಸಹಕಾರ ನೀಡಬೇಕು' ಎಂದು ಪಾಲಿಕೆ ಉಪ ಮೇಯರ್ ಚನ್ನಬಸಪ್ಪ ಮನವಿ ಮಾಡಿದರು.

ಬರ : ಕರ್ನಾಟಕದ 1,112 ಹಳ್ಳಿಗೆ ಟ್ಯಾಂಕರ್ ನೀರು ಆಧಾರಬರ : ಕರ್ನಾಟಕದ 1,112 ಹಳ್ಳಿಗೆ ಟ್ಯಾಂಕರ್ ನೀರು ಆಧಾರ

ಶಿವಮೊಗ್ಗ ನಗರಕ್ಕೆ ಗಾಜನೂರಿನಲ್ಲಿರುವ ತುಂಗಾ ಜಲಾಶಯದಿಂದ ನೀರು ಸರಬರಾಜು ಆಗುತ್ತದೆ. ಆದರೆ, ಜಲಾಶಯದಲ್ಲಿ ಪ್ರಸ್ತುತ ಕೇವಲ 1.15 ಟಿಎಂಸಿ ನೀರಿನ ಸಂಗ್ರಹವಿದೆ. ಇದರಲ್ಲಿ 0.9 ಟಿಎಂಟಿಸಿ ನೀರು ಡೆಡ್ ಸ್ಟೋರೇಜ್ ಆಗಿದ್ದು, ಉಳಿದ ನೀರನ್ನು ಮಾತ್ರ ಬಳಸಿಕೊಳ್ಳಬಹುದಾಗಿದೆ.

ಚಂದ್ರಪ್ಪ ಹೇಳಿದ ಬೆಂಗಳೂರು ಬೋರ್‌ ವೆಲ್‌ಗಳ ಕಥೆಚಂದ್ರಪ್ಪ ಹೇಳಿದ ಬೆಂಗಳೂರು ಬೋರ್‌ ವೆಲ್‌ಗಳ ಕಥೆ

ಕುಡಿಯುವ ನೀರಿನ ಕೊರತೆ

ಕುಡಿಯುವ ನೀರಿನ ಕೊರತೆ

'ಮಳೆ ಅಭಾವದಿಂದಾಗಿ ಶಿವಮೊಗ್ಗ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಗಾಜನೂರು ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಕಡಿಮೆಯಾಗಿದ್ದು, ಕುಡಿಯುವ ನೀರಿನ ಸಂಗ್ರಹಣೆ 0.25 ಟಿಎಂಸಿ ಆಗಿದ್ದು, ಪ್ರಸ್ತುತ ನಗರದ ಕುಡಿಯುವ ನೀರಿನ ಅವಶ್ಯಕತೆ 0.2 ಟಿಎಂಸಿ ಇರುವುದರಿಂದ ಮಳೆಗಾಲ ಪ್ರಾರಂಭವಾಗುವವರೆಗೂ ದಿನ ಬಿಟ್ಟು ದಿನ ನೀರು ಸರಬರಾಜು ಮಾಡುವ ಪರಿಸ್ಥಿತಿ ಬಂದಿದೆ' ಎಂದು ಮಹಾನಗರ ಪಾಲಿಕೆ ಉಪ ಮೇಯರ್ ಎಸ್.ಎನ್. ಚನ್ನಬಸಪ್ಪ ಹೇಳಿದರು.

ನೀರನ್ನು ಮಿತವಾಗಿ ಬಳಸಿ

ನೀರನ್ನು ಮಿತವಾಗಿ ಬಳಸಿ

ಜನರು ಕುಡಿಯುವ ನೀರನ್ನು ಅಗತ್ಯಕ್ಕೆ ತಕ್ಕಷ್ಟು ಮಿತವಾಗಿ ಬಳಸಬೇಕು. ಸರಬರಾಜಾಗುವ ನೀರಿನ ನಳಕ್ಕೆ ಹಿಂತಿರುಗಿಸುವ ಕವಾಟ (ನಾನ್ ರಿಟರ್ನ್ ವಾಲ್ವ್) ಕಡ್ಡಾಯವಾಗಿ ಅಳವಡಿಸಬೇಕು, ಕುಡಿಯುವ ನೀರನ್ನು ಗಿಡ ಮರಗಳಿಗೆ ಬಳಸಬಾರದು. ಪಾತ್ರೆ, ಬಟ್ಟೆ, ನೆಲ ಸ್ವಚ್ಚಗೊಳಿಸಿದ ನೀರನ್ನು ಶೇಖರಿಸಿ ಗಿಡಗಳಿಗೆ ಬಳಸಬೇಕು. ಸಿಂಟೆಕ್ಸ್ ತುಂಬಿ ಹರಿಯದಂತೆ ಜಾಗ್ರತೆ ವಹಿಸಬೇಕು ಎಂದು ಮಹಾನಗರ ಪಾಲಿಕೆ ಮನವಿ ಮಾಡಿದೆ.

ನೀರಿನ ಪೂರೈಕೆ ಹೇಗೆ?

ನೀರಿನ ಪೂರೈಕೆ ಹೇಗೆ?

ನಗರದಲ್ಲಿ ಸಂಪ್‌ಗಳಿಲ್ಲದ ಮನೆಗಳಿಗೆ ಹಾಗೂ ಆಸ್ಪತ್ರೆಗಳಿಗೆ ದಿನನಿತ್ಯ ಕುಡಿಯುವ ನೀರಿನ ವ್ಯವಸ್ಥೆಯನ್ನು ಟ್ಯಾಂಕರ್‌ಗಳ ಮೂಲಕ ಅಥವಾ ನಲ್ಲಿಗಳ ಮೂಲಕ ಮಾಡಲಾಗುತ್ತದೆ. ದಿನನಿತ್ಯದ ನೀರಿನ ಬೇಡಿಕೆಗಳಿಗೆ ಸಮೀಪದಲ್ಲಿರುವ ನೀರಿನ ಮೂಲಗಳಾದ ಕೊಳವೆ ಬಾವಿ, ತೆರೆದ ಬಾವಿ, ಚಾನಲ್ ಇತ್ಯಾದಿಗಳನ್ನು ಬಳಕೆ ಮಾಡಬೇಕು ಎಂದು ಮನವಿ ಮಾಡಲಾಗಿದೆ.

ನೀರಿನ ಸೋರಿಕೆ ಕಂಡರೆ ಕರೆ ಮಾಡಿ

ನೀರಿನ ಸೋರಿಕೆ ಕಂಡರೆ ಕರೆ ಮಾಡಿ

ನೀರನ್ನು ಮಿತವಾಗಿ ಬಳಸಬೇಕು ವಾಹನ, ರಸ್ತೆ ಹಾಗೂ ಮನೆಯ ಮುಂದಿನ ಅಂಗಳಗಳನ್ನು ಕುಡಿಯುವ ನೀರಿನಿಂದ ತೊಳೆಯದೇ ಅಗತ್ಯಕ್ಕೆ ತಕ್ಕಂತೆ ನೀರು ಬಳಕೆ ಮಾಡಬೇಕು ಎಂದು ಮಹಾನಗರ ಪಾಲಿಕೆ ಸೂಚಿಸಿದೆ. ನೀರಿನ ಸೋರಿಕೆ ಕಂಡು ಬಂದರೆ ಜಲಮಂಡಳಿ ನಿರ್ವಹಣಾ ಉಪವಿಭಾಗಕ್ಕೆ ತಕ್ಷಣ ಕರೆ ಮಾಡಬೇಕು ಎಂದು ಮನವಿ ಮಾಡಿದೆ.

English summary
Shimoga Mahanagara Palike announced that drinking water will not supply daily in city from Monday, June 10, 2019. Shimoga city facing drinking water crises due to drought.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X