ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಡಿಕೆ ಸ್ಯಾನಿಟೈಸರ್ ಆಯ್ತು; ಅಡಿಕೆಯಿಂದ ಮತ್ತೊಂದು ಹೊಸ ಪ್ರಯೋಗ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಅಕ್ಟೋಬರ್ 14: ಶಿವಮೊಗ್ಗ ಜಿಲ್ಲೆಯ ಮಂಡಗದ್ದೆಯ ಯುವ ಸಂಶೋಧಕ ನಿವೇದನ್ ಸೆಂಪೆ ಅಡಿಕೆಯಿಂದ ಈಗಾಗಲೇ ಅನೇಕ ಪ್ರಯೋಗಗಳನ್ನು ನಡೆಸಿ ಅರೇಕಾ ಟೀ, ಅರೇಕಾ ಸ್ಯಾನಿಟೈಸರ್ ನಂತಹ ಹೊಸ ಪ್ರಯೋಗಗಳನ್ನು ನಡೆಸಿದ್ದು, ಇದೀಗ ಅಡಿಕೆಯಿಂದ ಮತ್ತೊಂದು ಸಂಶೋಧನೆಯನ್ನು ನಡೆಸಿ ಯಶಸ್ವಿಯಾಗಿದ್ದಾರೆ.

ಮಲೆನಾಡಿನ ಯುವ ಸಂಶೋಧಕ ನಿವೇದನ್ ಸೆಂಪೆ ಈಗಾಗಲೇ ಅರೇಕಾ ಟೀ ಮೂಲಕ ಸಾಕಷ್ಟು ಹೆಸರು ಮಾಡಿದ್ದು, ಇದೀಗ ಅರೇಕಾ ಶ್ಯಾಂಪು ತಯಾರು ಮಾಡಿದ್ದಾರೆ.

ಅಡಿಕೆಯಿಂದ ಸ್ಯಾನಿಟೈಸರ್ ತಯಾರಿಕೆ: ಯುವ ಉದ್ಯಮಿ ನಿವೇದನ್ ಹೊಸ ಪ್ರಯೋಗಅಡಿಕೆಯಿಂದ ಸ್ಯಾನಿಟೈಸರ್ ತಯಾರಿಕೆ: ಯುವ ಉದ್ಯಮಿ ನಿವೇದನ್ ಹೊಸ ಪ್ರಯೋಗ

ಮಲೆನಾಡಿನ ಅತೀ ಹೆಚ್ಚು ರೈತರ ಪ್ರಮುಖ ಬೆಳೆಯಾಗಿರುವ ಅಡಿಕೆಗೆ ಕ್ಯಾನ್ಸರ್ ಕಾರಕ ಎಂದು ಪ್ರತಿ ಬಾರಿ ಆತಂಕ ಎದುರಾಗುತ್ತದೆ. ಆದರೆ ನಿವೇದನ್ ಸೆಂಪೆ ಅವರ ಈ ಸಂಶೋಧನೆಯಿಂದ ಅಡಿಕೆ ಬೆಳೆಗಾರರಿಗೆ ಹೊಸ ಚೈತನ್ಯ ನೀಡಿದೆ.

Shivamogga: Nivedan Sempe From Malenadu Creats Arecanut Shampoo

ಈಗಾಗಲೇ ಅಡಿಕೆ ಟೀ ಹಾಗೂ ಸ್ಯಾನಿಟೈಸರ್ ಮಾರುಕಟ್ಟೆಗೆ ಸಿಗುತ್ತಿತ್ತು. ಅರೇಕಾ ಶ್ಯಾಂಪು ಡಿಸೆಂಬರ್ ವೇಳೆಗೆ ಮಾರುಕಟ್ಟೆಗೆ ತರಲು ನಿವೇದನ್ ಸೆಂಪೆ ಮೊದಲಿಗೆ ಸ್ಯಾಶೆ ರೂಪದಲ್ಲಿ 2 ರೂ. ಪ್ಯಾಕ್ ಶ್ಯಾಂಪು ಮಾರುಕಟ್ಟೆಗೆ ಬರಲಿದ್ದು, ನಂತರ ದೊಡ್ಡ ದೊಡ್ಡ ಬಾಟಲ್ ಗಳಲ್ಲಿ ಮಾರುಕಟ್ಟೆಯಲ್ಲಿ ಸಿಗಲಿದೆ ಎಂದು ಯುವ ಸಂಶೋಧಕ ನಿವೇದನ್ ಸೆಂಪೆ ಒನ್ ಇಂಡಿಯಾಕ್ಕೆ ಮಾಹಿತಿ ನೀಡಿದ್ದಾರೆ.

Shivamogga: Nivedan Sempe From Malenadu Creats Arecanut Shampoo

ಅನೇಕ ಬಾರಿ ಅಡಿಕೆ ನಿಷೇಧದ ಕೂಗು ಕೇಳಿ ಬರುತ್ತಿದ್ದು, ಆದರೆ ಇದು ಮಲೆನಾಡಿನ ಪ್ರಧಾನ ಬೆಳೆಯಾಗಿದೆ. ರೈತರಿಗೆ ಸಾಕಷ್ಟು ಪ್ರತಿ ಬಾರಿಯೂ ಆತಂಕ ಮನೆ ಮಾಡಿರುತ್ತದೆ. ರೈತರಿಗೆ ಭರವಸೆಯೇ ಇಲ್ಲದಂತೆ ಆಗಿತ್ತು. ಆದರೆ ನಿವೇದನ್ ಸೆಂಪೆ ಅವರ ಈ ರೀತಿ ಅಡಿಕೆ ಮೂಲಕ ಹೊಸ ಹೊಸ ವಸ್ತುಗಳ ಪ್ರಯೋಗ ಅನ್ವೇಷಣೆ ರೈತರಿಗೆ ಹೊಸ ಭರವಸೆಯನ್ನು ನೀಡುತ್ತಿದೆ ಎಂದರೆ ತಪ್ಪಾಗಲಾರದು.

English summary
Malenadu young researcher Nivedan Sempe has already made quite a name from the Areca Tea and is now preparing the Arecanut Shampoo.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X