ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾಗರದಲ್ಲಿ ಯುವಕನಿಗೆ ಜ್ವರ: ನಿಪಾಹ್ ಭೀತಿ

|
Google Oneindia Kannada News

ಶಿವಮೊಗ್ಗ, ಮೇ 24: ರಾಜ್ಯದ ಕೆಲವು ಗಡಿಭಾಗಗಳಲ್ಲಿ ಕಾಣಿಸಿಕೊಂಡಿದ್ದ ನಿಪಾಹ್ ವೈರಸ್ ಭೀತಿ ಈಗ ಮಲೆನಾಡಿಗೂ ಆವರಿಸಿದೆ.

ಸಾಗರ ತಾಲ್ಲೂಕಿನ ಶಿರವಂತೆ ಗ್ರಾಮದ ಯುವಕ ಮಿಥುನ್ ಅವರು ಎರಡು ದಿನಗಳಿಂದ ಜ್ವರದಿಂದ ಬಳಲುತ್ತಿದ್ದು, ಅವರಿಗೆ ನಿಪಾಹ್ ವೈರಸ್ ತಗಲಿರುವ ಬಗ್ಗೆ ವೈದ್ಯರು ಶಂಕೆ ವ್ಯಕ್ತಪಡಿಸಿದ್ದಾರೆ. ಮಿಥುನ್ ಅವರ ರಕ್ತದ ಮಾದರಿಯನ್ನು ಪಡೆದುಕೊಂಡು ಪರೀಕ್ಷೆಗಾಗಿ ಪುಣೆಯಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ನಿಪಾಹ್ ಚಿಕಿತ್ಸೆ, ಮುನ್ನೆಚ್ಚರಿಕೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್ನಿಪಾಹ್ ಚಿಕಿತ್ಸೆ, ಮುನ್ನೆಚ್ಚರಿಕೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್

ಮಿಥುನ್ ಅವರು ಕೆಲವು ದಿನಗಳ ಹಿಂದಷ್ಟೇ ಕೇರಳಕ್ಕೆ ಪ್ರವಾಸಕ್ಕೆ ಹೋಗಿ ಬಂದಿದ್ದರು ಎನ್ನಲಾಗಿದೆ. ಅವರಿಗೆ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿದ್ದರೂ, ದಾಖಲಾಗಿಲ್ಲ ಎಂದು ವೈದ್ಯರು ಹೇಳಿದ್ದಾರೆ.

nipah virus suspect found in sagar taluk

ತಾಲ್ಲೂಕಿನ ಮರತ್ತೂರು ಗ್ರಾಮದ ಬಾವಿಯಲ್ಲಿ ಸತ್ತು ಬಿದ್ದಿರುವ ಎರಡು ಬಾವಲಿಗಳು ಪತ್ತೆಯಾಗಿರುವುದರಿಂದ ಸ್ಥಳೀಯರಲ್ಲಿ ಭೀತಿ ಹೆಚ್ಚಾಗಿದೆ. ಇಬ್ಬರು ಸ್ಥಳೀಯ ನಿವಾಸಿಗಳ ರಕ್ತದ ಮಾದರಿಯನ್ನು ಸಹ ಪುಣೆಗೆ ರವಾನಿಸಲಾಗಿದೆ.

ಶಾಲೆಯ ಬಳಿ 18 ಮೃತ ಬಾವಲಿಗಳು ಪತ್ತೆ: ನಿಪಾಹ್ ವೈರಸ್ ಭೀತಿಶಾಲೆಯ ಬಳಿ 18 ಮೃತ ಬಾವಲಿಗಳು ಪತ್ತೆ: ನಿಪಾಹ್ ವೈರಸ್ ಭೀತಿ

ಫ್ರೂಟ್ ಬ್ಯಾಟ್ಸ್ ಎಂಬ ಬಾವಲಿಗಳಿಂದ ಹರಡುವ ಈ ವೈರಸ್ ಮನುಷ್ಯ ಮತ್ತು ಪ್ರಾಣಿಗಳಲ್ಲಿ ಕಂಡುಬರುತ್ತಿದೆ. ಈ ರೋಗಕ್ಕೆ ಇದುವರೆಗೂ ಯಾವುದೇ ರೀತಿಯ ಪರಿಣಾಮಕಾರಿ ಚಿಕಿತ್ಸೆ ಕಂಡುಹಿಡಿಯಲು ಸಾಧ್ಯವಾಗಿಲ್ಲ.

English summary
Doctors has sent the blood samples of a youth to Pune lab suspecting nipah virus attack. Resident of Sagar taluk of shivamogga district, Mithun is suffering from fever from two days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X