• search
  • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾತ್ರಿ ಕರ್ಫ್ಯೂ; ಪೆಟ್ರೋಲ್ ಬಂಕ್ 8 ಗಂಟೆಗೆ ಬಂದ್

|

ಶಿವಮೊಗ್ಗ, ಏಪ್ರಿಲ್ 21; ಕರ್ನಾಟಕ ಸರ್ಕಾರ ಕೋವಿಡ್ ಸೋಂಕು ಹರಡುವಿಕೆ ತಡೆಯಲು ರಾತ್ರಿ ಕರ್ಫ್ಯೂ ಘೋಷಣೆ ಮಾಡಿದೆ. ರಾತ್ರಿ 9 ರಿಂದ ಬೆಳಗ್ಗೆ 6 ಗಂಟೆಯ ತನಕ ಕರ್ಫ್ಯೂ ರಾಜ್ಯಾದ್ಯಂತ ಜಾರಿಯಲ್ಲಿರುತ್ತದೆ.

ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯದ ಕರ್ಫ್ಯೂ ಹಿನ್ನಲೆಯಲ್ಲಿ ಪೆಟ್ರೋಲ್ ಬಂಕ್‌ಗಳು ಬೆಳಗ್ಗೆ 6 ರಿಂದ ರಾತ್ರಿ 8ರ ತನಕ ಕಾರ್ಯ ನಿರ್ವಹಣೆ ಮಾಡಲಿವೆ. ಶನಿವಾರ ಮತ್ತು ಭಾನುವಾರ ಸಂಪೂರ್ಣ ಬಂದ್ ಮಾಡಲು ತೀರ್ಮಾನಿಸಿವೆ.

ಹದಿನೈದು ದಿನಗಳ ನಂತರ ಮತ್ತೆ ತಗ್ಗಿದ ಪೆಟ್ರೋಲ್, ಡೀಸೆಲ್ ಬೆಲೆಹದಿನೈದು ದಿನಗಳ ನಂತರ ಮತ್ತೆ ತಗ್ಗಿದ ಪೆಟ್ರೋಲ್, ಡೀಸೆಲ್ ಬೆಲೆ

ಹೊಸ ಮಾರ್ಗಸೂಚಿಯ ಅನ್ವಯ ಶಿವಮೊಗ್ಗ ಜಿಲ್ಲಾ ಡೀಲರ್ಸ್ ಪೆಟ್ರೊಲಿಯಮ್ ಅಸೋಸಿಯೇಷನ್ ಕರ್ಫ್ಯೂ ಅವಧಿಯಲ್ಲಿ ಪೆಟ್ರೋಲ್ ಬಂಕ್ ಕಾರ್ಯಾಚರಣೆಯನ್ನು ಬಂದ್ ಮಾಡಲಿದೆ.

ಕೊರೊನಾ ಕರ್ಫ್ಯೂ: ಹೊಸ ಕಠಿಣ ಮಾರ್ಗಸೂಚಿ ಪ್ರಕಟ, ಏನಿರುತ್ತೆ? ಏನಿರಲ್ಲ?ಕೊರೊನಾ ಕರ್ಫ್ಯೂ: ಹೊಸ ಕಠಿಣ ಮಾರ್ಗಸೂಚಿ ಪ್ರಕಟ, ಏನಿರುತ್ತೆ? ಏನಿರಲ್ಲ?

ಪ್ರತಿ ದಿನ ಬೆಳಗ್ಗೆ 6 ರಿಂದ ರಾತ್ರಿ 8ರ ತನಕ ಪೆಟ್ರೋಲ್ ಬಂಕ್‍ ಕಾರ್ಯ ನಿರ್ವಹಣೆ ಮಾಡಲಿದೆ. ಶನಿವಾರ ಹಾಗೂ ಭಾನುವಾರ ಸಂಪೂರ್ಣ ಚಟುವಟಿಕೆ ಸ್ಥಗಿತಗೊಳಿಸಲು ಶಿವಮೊಗ್ಗ ಜಿಲ್ಲಾ ಅಸೋಸಿಯೇಷನ್ ನಿರ್ಧರಿಸಿದೆ.

 ಕೋವಿಡ್ ಬಾಧಿತ ರಾಜ್ಯಗಳಿಗೆ ರಿಲಯನ್ಸ್‌ನಿಂದ ಆಮ್ಲಜನಕ ಪೂರೈಕೆ ಕೋವಿಡ್ ಬಾಧಿತ ರಾಜ್ಯಗಳಿಗೆ ರಿಲಯನ್ಸ್‌ನಿಂದ ಆಮ್ಲಜನಕ ಪೂರೈಕೆ

ಶಿವಮೊಗ್ಗ ಜಿಲ್ಲಾ ಡೀಲರ್ಸ್ ಪೆಟ್ರೋಲ್ ಅಸೋಸಿಯೇಷನ್ ಕಾರ್ಯದರ್ಶಿ ಡಿ. ಎಸ್. ಅರುಣ್ ಈ ಕುರಿತು ಮಾಹಿತಿ ನೀಡಿದ್ದಾರೆ. "ರಾತ್ರಿ 8ಕ್ಕೆ ಬಂಕ್ ಬಂದ್ ಮಾಡುವುದರಿಂದ ಬಂಕ್‍ಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಒಂದು ಗಂಟೆ ಅವಧಿಯಲ್ಲಿ ಮನೆ ತಲುಪಲು ಸಾಧ್ಯವಾಗಲಿದೆ. ಆದ್ದರಿಂದ ಕರ್ಫ್ಯೂ ಅವಧಿಯ ಒಂದು ಗಂಟೆ ಮೊದಲೇ ಬಂಕ್ ಬಂದ್ ಮಾಡಲಾಗುವುದು" ಎಂದು ಹೇಳಿದ್ದಾರೆ.

English summary
Karnataka government announced night curfew till May 4, 2021. Petrol bunk in Shivamogga to close on 8 PM. Night curfew will begin at 9 pm and continue till 6 am.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X