ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೋಗಕ್ಕೆ ಭೇಟಿ ನೀಡಲು ಕೋವಿಡ್ ನೆಗೆಟಿವ್ ವರದಿ ಕಡ್ಡಾಯ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಆಗಸ್ಟ್ 04; ಲಾಕ್‌ಡೌನ್ ತೆರವು ಮತ್ತು ಮಳೆಗಾಲ ಶುರುವಾಗುತ್ತಿದ್ದಂತೆ ಶಿವಮೊಗ್ಗ ಜಿಲ್ಲೆಯ ಪ್ರವಾಸಿ ತಾಣಗಳು ಜೀವ ಕಳೆ ಪಡೆದುಕೊಂಡಿದ್ದವು. ಜೋಗ ಜಲಪಾತ ವೀಕ್ಷಣೆಗೆ ಸಾಗರೋಪಾದಿಯಲ್ಲಿ ಜನರು ಬಂದಿದ್ದರು. ಈಗ ಕೋವಿಡ್ ಮೂರನೇ ಅಲೆ ಭೀತಿಯಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡುವವರು ಕೋವಿಡ್ ನೆಗೆಟಿವ್ ರಿಪೋರ್ಟ್ ತರುವುದು ಕಡ್ಡಾಯಗೊಳಿಸಲಾಗಿದೆ.

ಕೋವಿಡ್ ಹರಡುವುದನ್ನು ತಡೆಯಲು ಶಿವಮೊಗ್ಗ ಜಿಲ್ಲಾಧಿಕಾರಿ ಕೆ. ಬಿ. ಶಿವಕುಮಾರ್ ನೂತನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದಾರೆ. ಈ ಪೈಕಿ ಜಿಲ್ಲೆಯೊಳಗೆ ಪ್ರವೇಶ ಪಡೆಯುವವರು, ಪ್ರವಾಸಿ ತಾಣಗಳಿಗೆ ಹೋಗುವವರಿಗೆ ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ.

ದಿಢೀರ್ ಕೋವಿಡ್ ಪರೀಕ್ಷೆ ನಿಲ್ಲಿಸಿದ ದಕ್ಷಿಣ ಕನ್ನಡ ಜಿಲ್ಲಾಡಳಿತ: ಕೇರಳಿಗರ ಆಕ್ರೋಶ!ದಿಢೀರ್ ಕೋವಿಡ್ ಪರೀಕ್ಷೆ ನಿಲ್ಲಿಸಿದ ದಕ್ಷಿಣ ಕನ್ನಡ ಜಿಲ್ಲಾಡಳಿತ: ಕೇರಳಿಗರ ಆಕ್ರೋಶ!

ಕಠಿಣ ನಿರ್ಧಾರ ಏಕೆ; ಕೇರಳದಲ್ಲಿ ಕೋವಿಡ್ ಸೋಂಕು ತೀವ್ರ ಸ್ವರೂಪ ಪಡೆದುಕೊಂಡಿದೆ. ಶಿವಮೊಗ್ಗ ಜಿಲ್ಲೆಯ ಪಕ್ಕದ ಜಿಲ್ಲೆಗಳಾದ ಉಡುಪಿ, ಮಂಗಳೂರಿನಲ್ಲೂ ಸೋಂಕು ವೇಗವಾಗಿ ಹರಡುತ್ತಿದೆ. ಬೆಂಗಳೂರಿನಲ್ಲೂ ಕೋವಿಡ್ ಮತ್ತೆ ಅಬ್ಬರಿಸಲು ಆರಂಭಿಸಿದೆ.

ಮಂಗಳೂರು; ಅದ್ಧೂರಿ ಕಾರ್ಯಕ್ರಮ, ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಮಂಗಳೂರು; ಅದ್ಧೂರಿ ಕಾರ್ಯಕ್ರಮ, ಕೋವಿಡ್ ಮಾರ್ಗಸೂಚಿ ಉಲ್ಲಂಘನೆ

ಉಡುಪಿ, ಮಂಗಳೂರು, ಬೆಂಗಳೂರು ಈ ಭಾಗದಿಂದ ಸಾವಿರಾರು ಜನರು ನಿತ್ಯ ಶಿವಮೊಗ್ಗ ಜಿಲ್ಲೆಗೆ ಆಗಮಿಸುತ್ತಾರೆ. ಹೊರ ರಾಜ್ಯಗಳ ಪ್ರವಾಸಿಗರು ಜೋಗ, ಲಿಂಗನಮಕ್ಕಿ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಈ ಕಠಿಣ ನಿರ್ಧಾರ ಕೈಗೊಂಡಿದೆ.

ಬಳ್ಳಾರಿ; ಕೋವಿಡ್ 3ನೇ ಅಲೆ ತಡೆಗೆ ಜಿಲ್ಲಾಡಳಿತದ ಸಿದ್ಧತೆಗಳು ಬಳ್ಳಾರಿ; ಕೋವಿಡ್ 3ನೇ ಅಲೆ ತಡೆಗೆ ಜಿಲ್ಲಾಡಳಿತದ ಸಿದ್ಧತೆಗಳು

2ನೇ ಅಲೆಯಲ್ಲಿ ನಲುಗಿದ್ದ ಮಲೆನಾಡು

2ನೇ ಅಲೆಯಲ್ಲಿ ನಲುಗಿದ್ದ ಮಲೆನಾಡು

ಕೋವಿಡ್ 2ನೇ ಅಲೆಗೆ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆ ನಲುಗಿತ್ತು. ಹಳ್ಳಿ, ಹಳ್ಳಿಗೂ ಕೋವಿಡ್ ವ್ಯಾಪಕವಾಗಿ ಹರಡಿತ್ತು. ಕೋವಿಡ್ ನಿಯಂತ್ರಣಕ್ಕೆ ತರಲು ಜಿಲ್ಲಾಡಳಿತ ಹರಸಾಹಸ ಪಡುವಂತಾಗಿತ್ತು. ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ, ಬೆಡ್ ಸಮಸ್ಯೆ ಉಂಟಾಗಿತ್ತು. 500ಕ್ಕೂ ಹೆಚ್ಚು ಮಂದಿ ಕೋವಿಡ್‌ಗೆ ಬಲಿಯಾಗಿದ್ದರು. ಇದೇ ಕಾರಣಕ್ಕೆ ಮೂರನೇ ಅಲೆಯನ್ನು ಆರಂಭದಲ್ಲೇ ನಿಯಂತ್ರಣಕ್ಕೆ ತರಲು ಶಿವಮೊಗ್ಗ ಜಿಲ್ಲಾಡಳಿತ ಹೆಜ್ಜೆ ಇರಿಸಿದೆ.

ನೂತನ ಗೈಡ್ ಲೈನ್ಸ್‌ನಲ್ಲಿ ಏನೇನಿದೆ?

ನೂತನ ಗೈಡ್ ಲೈನ್ಸ್‌ನಲ್ಲಿ ಏನೇನಿದೆ?

ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಹೊಸ ಮಾರ್ಗಸೂಚಿಯ ಪ್ರಕಾರ ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆಯನ್ನು ಕಡ್ಡಾಯಗೊಳಿಸಲಾಗಿದೆ.

ಸರ್ಕಾರಿ ಬಸ್ ಅಥವಾ ಖಾಸಗಿ ವಾಹನಗಳ ಮೂಲಕ ಜಿಲ್ಲೆಗೆ ಪ್ರವೇಶ ಪಡೆಯುವವರಿಗೆ ಕೋವಿಡ್ ಪರೀಕ್ಷಾ ವರದಿ ಕಡ್ಡಾಯಗೊಳಿಸಲಾಗಿದೆ. ಎರಡನೇ ಡೋಸ್ ಪಡೆದಿದ್ದರೂ ಜಿಲ್ಲೆಗೆ ಪ್ರವೇಶ ಪಡೆಯುವ 72 ಗಂಟೆ ಮೊದಲು RTPCR ಪರೀಕ್ಷೆ ಮಾಡಿಸಿದ ನೆಗೆಟಿವ್ ರಿಪೋರ್ಟ್ ಹೊಂದಿರಬೇಕು.

ವಸತಿ ವ್ಯವಸ್ಥೆಗೆ ರಿಪೋರ್ಟ್ ಕಡ್ಡಾಯ

ವಸತಿ ವ್ಯವಸ್ಥೆಗೆ ರಿಪೋರ್ಟ್ ಕಡ್ಡಾಯ

ಶಿವಮೊಗ್ಗ ಜಿಲ್ಲೆಗೆ ಆಗಮಿಸಿ ಹೊಟೇಲ್, ಲಾಡ್ಜ್, ಹೋಂ ಸ್ಟೇ, ಇಲಾಖೆಗಳ ವಸತಿ ಗೃಹದಲ್ಲಿ ಉಳಿಯುವ ಪ್ರವಾಸಿಗರಿಗೆ RTPCR ನೆಗೆಟಿವ್ ರಿಪೋರ್ಟ್ ಕಡ್ಡಾಯ. ತಂಗಲು ಬರುವ 72 ಗಂಟೆ ಮೊದಲು ಪರೀಕ್ಷೆ ಮಾಡಿಸಿರಬೇಕು.

ಜೋಗ ಜಲಪಾತ, ಆಗುಂಬೆ, ಬಿ.ಆರ್.ಪಿ, ಹುಲಿ ಮತ್ತು ಸಿಂಹಧಾಮ, ಸಕ್ರೆಬೈಲು ಆನೆ ಬಿಡಾರ ಸೇರಿದಂತೆ ಶಿವಮೊಗ್ಗ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರಿಗೂ RTPCR ನೆಗೆಟಿವ್ ರಿಪೋರ್ಟ್ ಕಡ್ಡಾಯಗೊಳಿಸಲಾಗಿದೆ.

ಮದುವೆ ಸಮಾರಂಭಗಳು

ಮದುವೆ ಸಮಾರಂಭಗಳು

ಜಿಲ್ಲಾಡಳಿತ ಹೊರಡಿಸಿದ ಮಾರ್ಗಸೂಚಿ ಅನ್ವಯ ಮದುವೆ ಸಮಾರಂಭಗಳಲ್ಲಿ ಕೇವಲ 50 ಜನರು ಮಾತ್ರ ಪಾಲ್ಗೊಳ್ಳಬಹುದು.

ಮಂಗಳವಾರದ ವರದಿಯಂತೆ ಶಿವಮೊಗ್ಗದಲ್ಲಿ 26 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 799 ಆಗಿದೆ. ಜಿಲ್ಲೆಯ ಒಟ್ಟು ಪ್ರಕರಣಗಳ ಸಂಖ್ಯೆ 67085. ಇದುವರೆಗೂ ಜಿಲ್ಲೆಯಲ್ಲಿ 65226 ಜನರು ಗುಣಮುಖಗೊಂಡಿದ್ದಾರೆ.

English summary
Shivamogga district administration issued a order that negative Covid test report 72 hours before travel must for tourist who visiting Jog falls and other tourist place in the district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X