ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮರಗಳಲೆಯಲ್ಲಿ ನೋಡುಗರಿಗೆ ಭಯ, ಅಚ್ಚರಿ ಮೂಡಿಸಿದ ನಾಗಪಾತ್ರಿಯ ದೈವ ಶಕ್ತಿ ಪ್ರದರ್ಶನ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ತೀರ್ಥಹಳ್ಳಿ, ನವೆಂಬರ್ 24: ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ತೀರ್ಥಹಳ್ಳಿ ತಾಲೂಕಿನ ಆರಗ ಅಗ್ರಹಾರ ನಾಗಪಾತ್ರಿ ನಾಗರಾಜ್ ಅವರು ಮಾಧ್ಯಮಗಳ ಮುಂದೆಯೇ ದೈವ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದು, ನೋಡುಗರಿಗೆ ಭಯದ ಜೊತೆಗೆ ಅಚ್ಚರಿ ಮೂಡಿಸಿತು.

ಬಾನವಳ್ಳಿ ಉಣ್ಣಕ್ಕಿ ಉತ್ಸವದಲ್ಲಿ ಅಲುಗಾಡುವ ಹುತ್ತ, ನಾಗಪ್ಪನ ಮಾಯೆಗೆ ಬೆರಗಾದ ಜನಬಾನವಳ್ಳಿ ಉಣ್ಣಕ್ಕಿ ಉತ್ಸವದಲ್ಲಿ ಅಲುಗಾಡುವ ಹುತ್ತ, ನಾಗಪ್ಪನ ಮಾಯೆಗೆ ಬೆರಗಾದ ಜನ

ತೀರ್ಥಹಳ್ಳಿ ತಾಲೂಕಿನ ಗುಡ್ಡೆಕೊಪ್ಪ ಗ್ರಾಮಪಂಚಾಯ್ತಿಯ ಮರಗಳಲೆ ಗ್ರಾಮದ ವೆಂಕಟಪ್ಪ ಪೂಜಾರಿಯವರ ಮಗ ನಾಗಪ್ಪ ಪೂಜಾರಿಯವರ ಮನೆಯ ಹಿಂಭಾಗದ ನಾಗರ ಬನದಲ್ಲಿ ನಾಗಬಿಂಬ ಹೊರತೆಗೆಯುವ ಕಾರ್ಯವನ್ನು ಮಾಧ್ಯಮಗಳ ಮುಂದೆಯೇ ಆರಂಭಿಸಿದರು.

 ಬರದನಾಡಲ್ಲಿ ಉಕ್ಕಿದ ಜಲ, ಸೋಮೇಶ್ವರ ಸ್ವಾಮಿಯ ಶಕ್ತಿಗೆ ಉಘೇ ಎಂದ ಭಕ್ತರು ಬರದನಾಡಲ್ಲಿ ಉಕ್ಕಿದ ಜಲ, ಸೋಮೇಶ್ವರ ಸ್ವಾಮಿಯ ಶಕ್ತಿಗೆ ಉಘೇ ಎಂದ ಭಕ್ತರು

ಪಾತ್ರಿಗಳು ಮೊದಲೇ ಹೇಳಿದಂತೆ ಸ್ಥಳದಲ್ಲಿ ತ್ರಿಶೂಲ ಮತ್ತು ನಾಗರ ಕಲ್ಲು ಸಿಕ್ಕಿದ್ದು ಜನರಲ್ಲಿ ಆಶ್ಚರ್ಯ ಉಂಟು ಮಾಡಿದೆ. ಈ ಹಿಂದೆ ಮರಗಳಲೆಯ ಸಣ್ಣ ಉದ್ಯಮಿ ನಾಗಪ್ಪ ಪೂಜಾರಿಯವರು ತಮ್ಮ ಕುಟುಂಬದ ಸಮಸ್ಯೆ ಹಾಗೂ ವ್ಯಾಪಾರದ ನಷ್ಟದ ಬಗ್ಗೆ ಪಾತ್ರಿಗಳಿಗೆ ತಿಳಿಸಿದ್ದರು.

Nagapatri Nagaraj has shown God strength at maragalale

ಮನೆಯ ಹಿಂಭಾಗದಲ್ಲಿ ನಾಗ ದೋಷ ಇರುವುದಾಗಿ ತಿಳಿಸಿದ್ದರು. ಇಂದು ಆ ನಾಗಬಿಂಬ ಹೊರತೆಗೆಯುವ ಕೆಲಸ ಮಾಡಿದರು. ಈ ದೃಶ್ಯ ನೋಡುಗರಿಗೆ ಭಯ, ಆತಂಕದ ಜತೆಗೆ ಅಚ್ಚರಿಯನ್ನು ಮೂಡಿಸಿತು. ಈ ದೃಶ್ಯವನ್ನು ಸೆರೆಹಿಡಿಯಲು ರಾಜ್ಯದ ಪ್ರತಿಷ್ಠಿತ ಮಾಧ್ಯಮಗಳು ಸ್ಥಳಕ್ಕೆ ಆಗಮಿಸಿದ್ದವು.

English summary
Araga agrahara Nagapatri Nagaraj has shown God strength at maragalale in Thirthahalli taluk. Here's a short news about this
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X