ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುರುಘಾ ಮಠದ ಸ್ವಾಮೀಜಿ ನನಗೆ ದೇವರ ಸಮಾನ: ಕೆಎಸ್ ಈಶ್ವರಪ್ಪ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಸೆಪ್ಟೆಂಬರ್ 3: ಮುರುಘಾ ಮಠದ ಸ್ವಾಮೀಜಿಗಳು ನನಗೆ ದೇವರ ಸಮಾನ, ಅವರ ಮೇಲೆ ಬಂದಿರುವ ಈ ಆರೋಪ ಸುಳ್ಳಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಹೇಳಿದ್ದಾರೆ.

ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಮುರುಘಾ ಮಠದ ಶಿವಮೂರ್ತಿ ಶರಣರನ್ನು ವಿಚಾರಣಗಾಗಿ ಕೋರ್ಟ್ ಪೊಲೀಸ್ ಕಸ್ಟಡಿಗೆ ನೀಡಿದೆ. ಈ ಕುರಿತು ಶಿವಮೊಗ್ಗದಲ್ಲಿ ಮಾತನಾಡಿದ ಕೆಎಸ್ ಈಶ್ವರಪ್ಪ " ಮಠದ ಸ್ವಾಮೀಜಿಗಳು ನನಗೆ ದೇವರ ಸಮಾನ. ಮುರುಘಾ ಶ್ರೀಗಳ ಬಗ್ಗೆ ಈಗಲೂ ಗೌರವ ಇದೆ. ತನಿಖೆಯಲ್ಲಿ ಅವರ ಮೇಲಿರುವ ಆರೋಪ ಸತ್ಯವೋ, ಸುಳ್ಳೋ ಎಂಬುದು ಹೊರಬರಲಿದೆ. ಈಗಲೇ ತೀರ್ಮಾನ ಕೈಗೊಳ್ಳುವುದು ಸರಿಯಲ್ಲ. ಸಾಧು ಸಂತರೆ ಹಿಂದೂ ಧರ್ಮಕ್ಕೆ ಪ್ರೇರಣೆಯಾಗಿದ್ದಾರೆ. ಮುರುಘಾ ಶ್ರೀಗಳ ಮೇಲಿನ ಆರೋಪ ಸುಳ್ಳಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ" ಎಂದರು.

ಪೋಲಿಸ್ ಕಸ್ಟಡಿ ಮುಗಿಯುವವರೆಗೂ ಜಾಮೀನು ಅರ್ಜಿ ಸಲ್ಲಿಸದಿರಲು ಮುರುಘಾ ಶರಣರಿಗೆ ಕೋರ್ಟ್ ಸೂಚನೆಪೋಲಿಸ್ ಕಸ್ಟಡಿ ಮುಗಿಯುವವರೆಗೂ ಜಾಮೀನು ಅರ್ಜಿ ಸಲ್ಲಿಸದಿರಲು ಮುರುಘಾ ಶರಣರಿಗೆ ಕೋರ್ಟ್ ಸೂಚನೆ

ಆದರೆ ಶರಣರ ಬಗ್ಗೆ ಕೇಳಿ ಬರುತ್ತಿರುವ ಆರೋಪದ ಬಗ್ಗೆ ಮಾತನಾಡಲು ನನಗೆ ವಾಕರಿಕೆ ಬರುತ್ತದೆ, ಈ ಪ್ರಕರಣ ಬಗ್ಗೆ ಮಾತನಾಡಲು ನನಗೆ ಮನಸ್ಸಿಲ್ಲ, ಅದರ ಬಗ್ಗೆ ಮಾತನಾಡಿದರೆ ಅನಿಷ್ಟ ಬರುತ್ತದೆ. ನನಗೆ ಮಠಾಧೀಶರು ಎಂದರೆ ದೇವರಿದ್ದ ಹಾಗೆ, ಕೇಸು ನಡೆಯುತ್ತಿರುವುದರಿಂದ ಮಾತನಾಡುವುದು ಸರಿಯಲ್ಲ ಎಂದರು.

Murugha Mutt Seer Equivalent to God for me: KS Eshwarappa

ಶಿವಮೊಗ್ಗ ಶಾಂತವಾಗಿದೆ
ಜನರ ಅಪೇಕ್ಷೆಯಂತೆ ಶಿವಮೊಗ್ಗ ಶಾಂತವಾಗಿದೆ. ರಾಷ್ಟ್ರದ್ರೋಹದ ಚಟುವಟಿಕೆ ನಡೆಸುವವರಿಗೆ ಹುಷಾರ್ ಎಂದು ಎಚ್ಚರಿಕೆ ಕೊಟ್ಟಿದ್ದೇವೆ. ಅವರೆಲ್ಲ ಈಗ ಬಾಲ ಮುದುಡಿಕೊಂಡಿದ್ದಾರೆ. ರಾಷ್ಟ್ರದ್ರೋಹದ ಚಟುವಟಿಕೆ ಮಾಡುವವರನ್ನು ಎಲ್ಲಿ ಇಡಬೇಕೋ ಅಲ್ಲಿ ಇಟ್ಟಿದ್ದೇವೆ. ಅವರೆಲ್ಲ ಈಗ ಜೈಲಿನಲ್ಲಿದ್ದಾರೆ. ಮತ್ತೆ ತಲೆಹರಟೆ ಮಾಡಿದರೆ ಎಲ್ಲಿಡಬೇಕೋ ಅಲ್ಲಿಡುತ್ತೇವೆ ಎಂದರು.

ರಾಜಕೀಯ ಚರ್ಚೆ ಇರಲಿಲ್ಲ
ನರೇಂದ್ರ ಮೋದಿ ಅವರು ಮಂಗಳೂರು ಭೇಟಿ ವೇಳೆ ಭಾಷಣದಲ್ಲಿರಾಜಕೀಯ ಚರ್ಚೆ ಮಾಡಲಿಲ್ಲ. 3800 ಕೋಟಿ ರೂ. ಅಭಿವೃದ್ದಿ ಕಾರ್ಯಗಳ ಬಗ್ಗೆ ಮಾತನಾಡಿದರು. ಕೋರ್ ಕಮಿಟಿ ಸಭೆಯಲ್ಲಿಯು ರಾಜಕೀಯದ ಬಗ್ಗೆ ಚರ್ಚೆ ಮಾಡಲಿಲ್ಲ. ಇಂತಹ ರಾಷ್ಟ್ರಭಕ್ತನನ್ನು ಪಡೆದಿದ್ದು ನಮ್ಮ ಪುಣ್ಯ. ನರೇಂದ್ರ ಮೋದಿ ಅವರು ರಾಜ್ಯಕ್ಕೆ ಬಂದು ಹೋಗಿರುವುದು ನಮಗೆ ಸ್ಪೂರ್ತಿ ಸಿಕ್ಕಂತಾಗಿದೆ ಎಂದರು.

75 ಕೋಟಿ ರೂ. ಖರ್ಚು ಮಾಡಿ ಸಿದ್ದರಾಮೋತ್ಸವಕ್ಕೆ ರಾಜ್ಯದ ವಿವಿಧೆಡೆಯಿಂದ ಜನರನ್ನು ಕರೆದುಕೊಂಡು ಬಂದರು. ಆದರೆ ಬಿಜೆಪಿ ಮಂಗಳೂರಿನಲ್ಲಿ ಕಾರ್ಯಕರ್ತರ ಶಕ್ತಿಯಿಂದ ಜನರು ತಾವಾಗಿಯೆ ಬಂದರು. ಬರಿ ಮಂಗಳೂರಿಲ್ಲಿ ಅಷ್ಟು ದೊಡ್ಡ ಪ್ರಮಾಣದಲ್ಲಿ ಜನ ಸೇರಿದ್ದರು. ಇಂತಹ ಐವತ್ತು ಕಾರ್ಯಕ್ರಮಗಳನ್ನು ನಾವು ಮಾಡುತ್ತೇವೆ. ಬಿಜೆಪಿಗೆ ಜನ ಬೆಂಬಲ ಕೊಡುತ್ತಿರುವುದಕ್ಕೆ ನಿನ್ನೆಯ ಕಾರ್ಯಕ್ರಮ ಸಾಕ್ಷಿಯಾಗಿದೆ. ಮೋದಿ ಎಲ್ಲಿ ಬರುತ್ತಾರೋ ಅಲ್ಲಿ ಜನರ ಸಂಚಲನ ಇರುತ್ತದೆ ಎಂದರು.

English summary
Murugha Mutt's chief Shivamurthi Murugha Sharanru like got to me, said former minister KS Eshwarapp and he urged people to not jump conclusions before investigations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X