• search
  • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶಿವಮೊಗ್ಗ; ಪ್ರವಾಸಿಗರನ್ನು ಸೆಳೆಯಲು ಮತ್ತಷ್ಟು ಯೋಜನೆ

By ಶಿವಮೊಗ್ಗ ಪ್ರತಿನಿಧಿ
|

ಶಿವಮೊಗ್ಗ, ಡಿಸೆಂಬರ್ 16: " ಶಿವಮೊಗ್ಗ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಆರಂಭವಾಗಿರುವ ಕ್ರಾಂತಿಗೆ ಪೂರಕವಾಗಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗುತ್ತದೆ" ಎಂದು ಸಂಸದ ಬಿ. ವೈ. ರಾಘವೇಂದ್ರ ಹೇಳಿದ್ದಾರೆ.

ಬುಧವಾರ ಅವರು ನಗರದ ಹೊರವಲಯದಲ್ಲಿರುವ ತ್ಯಾವರೆಕೊಪ್ಪದ ಹುಲಿ-ಸಿಂಹಧಾಮಕ್ಕೆ ಭೇಟಿ ನೀಡಿದರು. "120 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಯೋಜನೆಗಳ ಕಾಮಗಾರಿ ನಡೆಯುತ್ತಿದೆ" ಎಂದು ತಿಳಿಸಿದರು.

ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮಕ್ಕೆ ಅತಿಥಿಗಳ ಆಗಮನತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮಕ್ಕೆ ಅತಿಥಿಗಳ ಆಗಮನ

"ಹುಲಿ-ಸಿಂಹಧಾಮದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದಿಂದ 5 ಕೋಟಿ ರೂ., ಕೇಂದ್ರ ಮೃಗಾಲಯ ಪ್ರಾಧಿಕಾರದಿಂದ 6 ಕೋಟಿ ರೂ. ಹಾಗೂ ಮೈಸೂರು ಮೃಗಾಲಯ ಪ್ರಾಧಿಕಾರದಿಂದ 2 ಕೋಟಿ ರೂ. ಅನುದಾನ ತರಲಾಗಿದೆ" ಎಂದು ವಿವರಣೆಯನ್ನು ನೀಡಿದರು.

ಶಿವಮೊಗ್ಗ; ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಿದವರಿಗೆ ಸಂಕಷ್ಟಶಿವಮೊಗ್ಗ; ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಿದವರಿಗೆ ಸಂಕಷ್ಟ

"ತ್ಯಾವರೆಕೊಪ್ಪದಲ್ಲಿ ಪಕ್ಷಿಗಳಿಗೆ ಪ್ರತ್ಯೇಕ ಸುಸಜ್ಜಿತವಾದ ಕ್ಯಾಬಿನ್ ನಿರ್ಮಾಣವಾಗುತ್ತಿದೆ. ಅಭಿವೃದ್ಧಿ ಕಾರ್ಯದ ನಂತರ ಹಲವು ಪ್ರಾಣಿಗಳನ್ನು ತರಿಸಲಾಗುತ್ತದೆ. ಕಾಡು ಕೋಣಕ್ಕೆ ಪ್ರತ್ಯೇಕ ಸಫಾರಿ ನಿರ್ಮಾಣವಾಗುತ್ತಿದ್ದು, ನೀರಾನೆ ಸೇರಿದಂತೆ ಹಲವು ಪ್ರಾಣಿಗಳು ಇಲ್ಲಿಗೆ ಆಗಮಿಸಲಿವೆ" ಎಂದು ಹೇಳಿದರು.

ಶಿವಮೊಗ್ಗ; ತೀರ್ಥಹಳ್ಳಿ ಬಳಿ ಲಾರಿ ಪಲ್ಟಿ; 10 ಹಸು ಸಾವು ಶಿವಮೊಗ್ಗ; ತೀರ್ಥಹಳ್ಳಿ ಬಳಿ ಲಾರಿ ಪಲ್ಟಿ; 10 ಹಸು ಸಾವು

"ಸಕ್ರೆಬೈಲು ಆನೆ ಶಿಬಿರದ ಅಭಿವೃದ್ಧಿಗಾಗಿ 20 ಕೋಟಿ ರೂ. ಅನುದಾನ ನೀಡಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಇಲ್ಲಿರುವ ನೈಸರ್ಗಿಕ ದ್ವೀಪಕ್ಕೆ ತೆರಳುವ ಮಾರ್ಗ ನಿರ್ಮಾಣ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ, ಜಂಗಲ್ ಲಾಡ್ಜ್‌ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳು ನಡೆಯಲಿವೆ" ಎಂದು ಸಂಸದರು ಮಾಹಿತಿ ನೀಡಿದರು.

"ಶಿವಮೊಗ್ಗ ಜಿಲ್ಲೆಯಲ್ಲಿ ಈಗಾಗಲೇ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿ ಪರ್ವ ಆರಂಭವಾಗಿದೆ. ಜಿಲ್ಲೆಯಲ್ಲಿ ದೇಶದಲ್ಲೇ ಪ್ರವಾಸೋದ್ಯಮ ಆಕರ್ಷಣೀಯ ಕೇಂದ್ರವನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ" ಎಂದರು.

English summary
More development works will taken in 120 hectares of land in Tyavarekoppa Lion and Tiger safari, Shivamogga said BY Raghavendra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X