ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಈಶ್ವರಪ್ಪ ಸಭೆಯಲ್ಲಿ ಆಯನೂರು ಮಂಜುನಾಥ್ ಅಸಮಾಧಾನ!

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಆಗಸ್ಟ್ 09; ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಸಚಿವ ಕೆ. ಎಸ್. ಈಶ್ವರಪ್ಪ ನೇತೃತ್ವದ ಸಭೆಯಲ್ಲೇ ವಿಧಾನ ಪರಿಷತ್ ಸದಸ್ಯ, ಬಿಜೆಪಿ ನಾಯಕ ಆಯನೂರು ಮಂಜುನಾಥ್ ಅಸಮಾಧಾನ ವ್ಯಕ್ತಪಡಿಸಿದರು. ಸಭಾಂಗಣದಿಂದ ಹೊರನಡೆಯಲು ಯತ್ನಿಸಿದರು.

ಸೋಮವಾರ ಶಿವಮೊಗ್ಗದಲ್ಲಿ ಸಚಿವ ಕೆ. ಎಸ್. ಈಶ್ವರಪ್ಪ ಮುಂದೆಯೇ ಅವರದ್ದೇ ಪಕ್ಷದ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಭೆಯಿಂದ ಹೊರನಡೆಯಲು ಮುಂದಾಗಿದ್ದಾರೆ. ಇದರಿಂದ ಕೆಲಕಾಲ ಗೊಂದಲದ ವಾತಾವರಣವೂ ನಿರ್ಮಾಣವಾಯಿತು.

 ಯತ್ನಾಳ್ ವಿರುದ್ಧ ಪಕ್ಷ ಶಿಸ್ತು ಕ್ರಮ ಕೈಗೊಳ್ಳಬೇಕು; ಆಯನೂರು ಮಂಜುನಾಥ್ ಯತ್ನಾಳ್ ವಿರುದ್ಧ ಪಕ್ಷ ಶಿಸ್ತು ಕ್ರಮ ಕೈಗೊಳ್ಳಬೇಕು; ಆಯನೂರು ಮಂಜುನಾಥ್

ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಪ್ರವಾಹ ಮತ್ತು ಕೋವಿಡ್ ನಿರ್ವಹಣೆ ಕುರಿತು ಸಭೆ ನಡೆಯುತಿತ್ತು. ಈ ವೇಳೆ ತಮಗೆ ಅವಮಾನ ಆಗುತ್ತಿರುವ ಕುರಿತು ವಿಧಾನ ಪರಿಷತ್ ಸದಸ್ಯ ಆಯನೂರು ಮುಂಜುನಾಥ್ ಅಸಮಾಧಾನ ಹೊರ ಹಾಕಿದರು. ವೇದಿಕೆ ಮೇಲೆ ಕುಳಿತಿದ್ದ ಅವರು ಕುರ್ಚಿಯಿಂದ ಮೇಲೆದ್ದು ಸಭಾಂಗಣದ ಮುಂದೆ ಬಂದು ನಿಂತು ಆಕ್ರೋಶ ವ್ಯಕ್ತಪಡಿಸಿದರು.

ಬೊಮ್ಮಾಯಿ ಸಂಪುಟ ಸೇರಿದ ಕೆ. ಎಸ್. ಈಶ್ವರಪ್ಪ ಪರಿಚಯ ಬೊಮ್ಮಾಯಿ ಸಂಪುಟ ಸೇರಿದ ಕೆ. ಎಸ್. ಈಶ್ವರಪ್ಪ ಪರಿಚಯ

Shivamogga MLC Ayanur Manjunath Upset With Officials

ಅಸಮಾಧಾನಕ್ಕೆ ಕಾರಣವೇನು?; ಶಿವಮೊಗ್ಗ ಜಿಲ್ಲೆಯಲ್ಲಿ ನಡೆಯುವ ಯಾವುದೇ ಪ್ರಮುಖ ಸಭೆಗಳ ಕುರಿತು ಮಾಹಿತಿ ಒದಗಿಸುತ್ತಿಲ್ಲ. ಇನ್ನು, ಜಿಲ್ಲೆಯಲ್ಲಿ ಬಿಡುಗಡೆಯಾಗುತ್ತಿರುವ ಅನುದಾನಗಳ ಕುರಿತು ಮಾಹಿತಿ ನೀಡುತ್ತಿಲ್ಲ. ವಿಧಾನ ಪರಿಷತ್ ಸದಸ್ಯರು ಕೂಡ ಶಾಸಕರೇ. ಅವರಿಗೂ ಮಾಹಿತಿ ನೀಡಬೇಕು. ಮಾಹಿತಿ ಒದಗಿಸದೇ ಇರುವುದು ಅವಮಾನ ಎಂದು ಸಿಟ್ಟಾದರು.

ಬೆಂಗಳೂರು-ಶಿವಮೊಗ್ಗ ನಡುವೆ ಮತ್ತೊಂದು ರೈಲು; ವೇಳಾಪಟ್ಟಿ ಬೆಂಗಳೂರು-ಶಿವಮೊಗ್ಗ ನಡುವೆ ಮತ್ತೊಂದು ರೈಲು; ವೇಳಾಪಟ್ಟಿ

ವಿಧಾನ ಪರಿಷತ್ ಸದಸ್ಯರನ್ನು ಕಡೆಗಣಿಸುತ್ತಿರುವ ಕುರಿತು ಆಯನೂರು ಮಂಜುನಾಥ್ ಅಸಮಾಧಾನ ವ್ಯಕ್ತಪಡಿಸಿದರೆ ವಿಧಾನ ಪರಿಷತ್ ಸದಸ್ಯರಾದ ರುದ್ರೇಗೌಡ ಮತ್ತು ಆರ್. ಪ್ರಸನ್ನ ಕುಮಾರ್ ಬೆಂಬಲ ವ್ಯಕ್ತಪಡಿಸಿದರು.

ಸಭೆಯ ಕುರ್ಚಿಯಿಂದ ಎದ್ದು ಸಭಾಂಗಣದ ಮುಂದೆ ಬಂದು ನಿಂತರು. ಈ ವೇಳೆ ಜಿಲ್ಲಾಧಿಕಾರಿ ಕೆ. ಬಿ. ಶಿವಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒ ವೈಶಾಲಿ ಸಮಾಧನಪಡಿಸಲು ಯತ್ನಿಸಿದರು. ಆದರೆ ತಣ್ಣಗಾಗದ ಆಯನೂರು ಮಂಜುನಾಥ್ ಇನ್ನು ಮುಂದೆ ಎಲ್ಲಾ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು. ಒಂದು ವೇಳೆ ಮಾಹಿತಿ ನೀಡದಿದ್ದರೆ ಆಯಾ ಸಭೆಗೆ ಹೋಗಿ ಗಲಾಟೆ ಮಾಡುತ್ತೇವೆ. ಆಗ ನೀವೆಲ್ಲ ನಮ್ಮ ಪರವಾಗಿ ಇರಬೇಕಾಗುತ್ತದೆ ಎಂದು ಎಚ್ಚರಿಸಿದರು.

ಇದೇ ಮೊದಲಲ್ಲ; ವಿಧಾನ ಪರಿಷತ್ ಸದಸ್ಯರುಗಳನ್ನು ಸಭೆಗೆ ಕರೆಯದಿರುವುದು, ಆಮಂತ್ರಣ ಪತ್ರಿಕೆಗಳಲ್ಲಿ ಹೆಸರು ಪ್ರಕಟಿಸದಿರುವ ಬಗ್ಗೆ ಈ ಹಿಂದೆಯೂ ಅಸಮಾಧಾನ ವ್ಯಕ್ತವಾಗಿತ್ತು. ವಿಧಾನ ಪರಿಷತ್ ಸದಸ್ಯರನ್ನು ಉಳಿದ ಶಾಸಕರ ಮಾದರಿಯಲ್ಲೇ ಪರಿಗಣಿಸಬೇಕು ಎಂದು ಆಗ್ರಹಿಸಿದ್ದರು.

ಈ ಸಂಬಂಧ ಹಕ್ಕು ಬಾಧ್ಯತಾ ಸಮಿತಿವರೆಗೂ ವಿಚಾರ ಕೊಂಡೊಯ್ದಿದ್ದರು. ಒಮ್ಮೆ ಮಹಾನಗರ ಪಾಲಿಕೆ ಆಯುಕ್ತರು ಸೇರಿದಂತೆ ಅಲ್ಲಿಯ ಅಧಿಕಾರಿಗಳ ವಿರುದ್ಧ ಹಕ್ಕು ಭಾದ್ಯತಾ ಸಮಿತಿ ವಿಚಾರಣೆಯಾಗುವಂತಾಗಿತ್ತು.

ಚಾಕುವಿನಿಂದ ಇರಿದು ಕೊಲೆ; ಕ್ಷುಲಕ ವಿಚಾರಕ್ಕೆ ಯುವಕನಿಗೆ ಚಾಕುವಿನಿಂದ ಹಲ್ಲೆ ಮಾಡಲಾಗಿದೆ. ಗಂಭೀರ ಗಾಯಗೊಂಡಿದ್ದ ಯುವಕ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಕೊಲೆಯಾದ ಯುವಕನನ್ನು ರಾಹಿಲ್ (25) ಎಂದು ಗುರುತಿಸಲಾಗಿದೆ. ಅಪಘಾತ ಪ್ರಕರಣ ಸಂಬಂಧ ನಡೆದ ಗಲಾಟೆ ಕೊಲೆಗೆ ಕಾರಣ ಎಂದು ಹೇಳಲಾಗುತ್ತಿದೆ. ಶಿವಮೊಗ್ಗ ನಗರದ ಟ್ಯಾಂಕ್ ಮೊಹಲ್ಲಾದ ಮೂರನೇ ತಿರುವಿನಲ್ಲಿ ಸೋಮವಾರ ಈ ಘಟನೆ ನಡೆದಿದೆ.

ಟ್ಯಾಂಕ್ ಮೊಹಲ್ಲಾದ ರಸ್ತೆಯಲ್ಲಿ ರಾಹಿಲ್ ತನ್ನ ಬೈಕ್‌ನಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಬಾಲಕನೊಬ್ಬ ಬೈಕ್‌ಗೆ ಗುದ್ದಿದ್ದಾನೆ. ಘಟನೆಯಲ್ಲಿ ರಾಹಿಲ್‌ಗೆ ಗಾಯವಾಗಿತ್ತು. ಹಾಗಾಗಿ ಬಾಲಕನ ಮನೆಗೆ ತೆರಳಿ ಚಿಕಿತ್ಸೆ ಕೊಡಿಸುವಂತೆ ಕೇಳಿದ್ದಾನೆ. ಈ ವೇಳೆ ಬಾಲಕನ ತಂದೆ ಮತ್ತು ರಾಹಿಲ್ ಮಧ್ಯೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿದ್ದಾರೆ.

ಚಾಕು ಹಿಡಿದು ಕಾದಿದ್ದ ಅಣ್ಣ; ಈ ವಿಚಾರ ಸಂಬಂಧ ಬಾಲಕನ ಅಣ್ಣ ಅಸ್ಗರ್ ಖಾನ್ ಸಿಟ್ಟಾಗಿದ್ದು ಇವತ್ತು ಬೆಳಗ್ಗೆ ಲಷ್ಕರ್ ಮೊಹಲ್ಲಾದಲ್ಲಿ ಚಾಕುವಿನಿಂದ ರಾಹಿಲ್ ಮೇಲೆ ಹಲ್ಲೆ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ರಾಹಿಲ್‌ನನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಮಾರ್ಗ ಮಧ್ಯೆ ರಾಹಿಲ್ ಮೃತಪಟ್ಟಿದ್ದಾನೆ. ವಿಚಾರ ತಿಳಿಯುತ್ತಿದ್ದಂತೆ ಕೋಟೆ ಠಾಣೆ ಪೊಲೀಸರು ಅಸ್ಗರ್ ಖಾನ್‌ನನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

English summary
BJP leader and MLC Ayanur Manjunath on Monday upset with officials in Shivamogga DC office meeting. Minister K. S. Eashwarappa also present in the meeting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X