ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೋವಾಗೆ ಹೋಗುವ ಶಾಸಕರೇ ಎಚ್ಚರ; ರಾಜಶೇಖರ ಮುಲಾಲಿ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಮಾರ್ಚ್ 10; " ಬೆಳಗಾವಿ ಅಧಿವೇಶನಕ್ಕೆ ಬರುವ ಶಾಸಕರು ಗೋವಾಗೆ ಹೋಗಬಾರದು" ಎಂದು ಸಾಮಾಜಿಕ ಕಾರ್ಯಕರ್ತ ರಾಜಶೇಖರ ಮುಲಾಲಿ ಎಚ್ಚರಿಕೆ ನೀಡಿದರು.

ಬುಧವಾರ ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, "ಅಧಿವೇಶನಕ್ಕೆ ಬರುವ ಶಾಸಕರು ಸಮಯ ಇದೆ ಎಂದು ಗೋವಾಗೆ ಹೋಗುತ್ತಾರೆ. ಆ ರೀತಿ ಹೋಗಬಾರದು, ಮುಂದೆ ಸಮಸ್ಯೆ ಆಗಬಹುದು" ಎಂದರು.

'ಸಿಡಿ' ಪ್ರಕರಣಕ್ಕೆ ಮಹತ್ವದ ತಿರುವು; 'ಸಿಡಿ' ಪ್ರಕರಣದ ಸಂತ್ರಸ್ತ ಯುವತಿ ಈಗೆಲ್ಲಿದ್ದಾರೆ?'ಸಿಡಿ' ಪ್ರಕರಣಕ್ಕೆ ಮಹತ್ವದ ತಿರುವು; 'ಸಿಡಿ' ಪ್ರಕರಣದ ಸಂತ್ರಸ್ತ ಯುವತಿ ಈಗೆಲ್ಲಿದ್ದಾರೆ?

"ನನ್ನ ಬಳಿ 19 ಸಿಡಿಗಳಿವೆ ಎಂದು ಎಲ್ಲಿಯೂ ಹೇಳಿಲ್ಲ. ಅದೆಲ್ಲ ಮಾಧ್ಯಮಗಳ ಸೃಷ್ಟಿ. ಈ ಸಂಬಂಧ ಮಹಿಳೆಯೊಬ್ಬರು ಬೆಂಗಳೂರು ಕಬ್ಬನ್ ಪಾರ್ಕ್‌ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಹಿನ್ನೆಲೆ ಪೊಲೀಸರು ವಾಟ್ಸಪ್ ಮೂಲಕ ನೊಟೀಸ್ ನೀಡಿದ್ದಾರೆ" ಎಂದು ಹೇಳಿದರು.

ಮಹಾನ್ ನಾಯಕನಿಂದ ಈ ಷಡ್ಯಂತ್ರ ನಡೆದಿದೆ: ರಮೇಶ್ ಜಾರಕಿಹೊಳಿಮಹಾನ್ ನಾಯಕನಿಂದ ಈ ಷಡ್ಯಂತ್ರ ನಡೆದಿದೆ: ರಮೇಶ್ ಜಾರಕಿಹೊಳಿ

MLAs Who Visiting Goa Should Be Careful Says RTI Activist Rajashekar Mulali

ಜಾರಕಿಹೊಳಿ ವಿರುದ್ಧ ಷಡ್ಯಂತ್ರ; ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ ರಾಜಶೇಖರ ಮುಲಾಲಿ, "ಸಿಡಿ ವಿಚಾರ ದೊಡ್ಡ ಷಡ್ಯಂತ್ರವಾಗಿದೆ. ರಮೇಶ್ ಜಾರಕಿಹೊಳಿ ಅವರ ವಿರುದ್ಧ ಈ ಷಡ್ಯಂತ್ರ ನಡೆದಿದೆ" ಎಂದರು.

 ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣ; ಬಾಲಚಂದ್ರ ಜಾರಕಿಹೊಳಿ ತುರ್ತು ಸುದ್ದಿಗೋಷ್ಠಿ ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣ; ಬಾಲಚಂದ್ರ ಜಾರಕಿಹೊಳಿ ತುರ್ತು ಸುದ್ದಿಗೋಷ್ಠಿ

"ಹಾದಿ ಬೀದಿಯಲ್ಲಿ ಹೋಗುವವರು ಆರ್‌ಟಿಐ ಮೂಲಕ ಮಾಹಿತಿ ಕೇಳುತ್ತಿದ್ದಾರೆ" ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸದನದಲ್ಲಿ ಹೇಳಿದ್ದಾರೆ. "ಹಾದಿ, ಬೀದಿಯಲ್ಲಿ ಹೋಗುವವರು ಮಾತ್ರವಲ್ಲ, ದನ ಕಾಯುವವರು, ಅನಕ್ಷರಸ್ಥರು ಕೂಡ ಮಾಹಿತಿ ಕೇಳಬಹುದು. ಅದಕ್ಕೆ ಅವಕಾಶ ಇದೆ. ಸಿಎಂ ತಮ್ಮ ಹೇಳಿಕೆ ಹಿಂಪಡೆಯಬೇಕು" ಎಂದು ಮುಲಾಲಿ ಆಗ್ರಹಿಸಿದರು.

English summary
Karnataka MLA's who visiting Goa during Belagavi assembly session should be careful said RTI activist Rajashekar Mulali.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X