ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ; ಮೆಡಿಕಲ್ ಸೀಟು ಕೊಡಿಸುವುದಾಗಿ 1 ಲಕ್ಷ ರೂ. ವಂಚನೆ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಜನವರಿ 10: ಕೆಲಸ ಕೊಡಿಸುವುತ್ತೇವೆ, ಇಂಜಿನಿಯರಿಂಗ್ ಸೀಟ್ ಕೊಡಿಸುತ್ತೇವೆ, ಮೆಡಿಕಲ್ ಸೀಟು ಕೊಡಿಸುತ್ತೇವೆ ಎಂದು ವಂಚಿಸುವ ಪ್ರಕರಣಗಳು ನಡೆಯುತ್ತಲೇ ಇದೆ. ಭದ್ರಾವತಿಯಲ್ಲಿಯೂ ಇಂತಹ ಪ್ರಕರಣ ಬೆಳಕಿಗೆ ಬಂದಿದೆ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಭೂತನಗುಡಿಯ ನಿವಾಸಿ ರಫೀಕ್ ಅಹ್ಮದ್ ಪುತ್ರನಿಗೆ ಮೆಡಿಕಲ್ ಸೀಟು ಕೊಡಿಸುವುದಾಗಿ ಕೋಲ್ಕತ್ತಾ ಮೂಲದ ವ್ಯಕ್ತಿಯೊಬ್ಬ ವಂಚನೆ ಮಾಡಿದ್ದಾನೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಾಗಿದೆ.

ಮೆಡಿಕಲ್ ಸೀಟು ದಂಧೆ ಪ್ರಕರಣ, ರಾಧಿಕಾ ಕುಮಾರಸ್ವಾಮಿ ವಿವಾದಮೆಡಿಕಲ್ ಸೀಟು ದಂಧೆ ಪ್ರಕರಣ, ರಾಧಿಕಾ ಕುಮಾರಸ್ವಾಮಿ ವಿವಾದ

6 ಲಕ್ಷ ರೂ. ಹಣಕ್ಕೆ ಮೆಡಿಕಲ್ ಸೀಟು ಕೊಡಿಸುವುದಾಗಿ ನಂಬಿಸಿದ್ದ ಕೋಲ್ಕತ್ತಾ ಮೂಲದ ರಿತೇಷ್ ಅಗರ್ವಾಲ್ ರಫೀಕ್ ಅಹ್ಮದ್ ಅವರಿಂದ 1 ಲಕ್ಷ ರೂ. ಹಣ ಮುಂಗಡವಾಗಿ ಪಡೆದಿದ್ದರು. ಮುಖ ಪರಿಚಯವೇ ಇಲ್ಲದ ವ್ಯಕ್ತಿಗೆ ಆನ್‌ಲೈನ್ ಮೂಲಕ ಹಣವನ್ನು ವರ್ಗಾವಣೆ ಮಾಡಿದ್ದರು.

ಮೆಡಿಕಲ್ ಸೀಟ್‌ ಬ್ಲಾಕ್ ಮಾಡುವ ಹೊಸ ದಾರಿಯಿದು ! ಮೆಡಿಕಲ್ ಸೀಟ್‌ ಬ್ಲಾಕ್ ಮಾಡುವ ಹೊಸ ದಾರಿಯಿದು !

Medical Seat Aspirants Cheated In Bhadravathi

ಹಣ ವರ್ಗಾವಣೆ ಮಾಡಿದ ಬಳಿಕ ರಫೀಕ್ ಅಹ್ಮದ್‌ಗೆ ಈ ಕುರಿತು ಅನುಮಾನ ಬಂದಿದೆ. ಆದ್ದರಿಂದ, ಅವರು ಓಲ್ಡ್ ಟೌನ್ ಪೊಲೀಸ್ ಠಾಣೆಯಲ್ಲಿ ರಿತೇಷ್ ಅಗರ್ವಾಲ್ ವಿರುದ್ಧ ದೂರು ನೀಡಿದ್ದಾರೆ.

 ಚಿತ್ರದುರ್ಗಕ್ಕೆ ದೀಪಾವಳಿ ಗಿಫ್ಟ್: ಮೆಡಿಕಲ್ ಕಾಲೇಜು ಸ್ಥಾಪನೆಗೆ ಗ್ರೀನ್ ಸಿಗ್ನಲ್ ಚಿತ್ರದುರ್ಗಕ್ಕೆ ದೀಪಾವಳಿ ಗಿಫ್ಟ್: ಮೆಡಿಕಲ್ ಕಾಲೇಜು ಸ್ಥಾಪನೆಗೆ ಗ್ರೀನ್ ಸಿಗ್ನಲ್

ಮೆಡಿಕಲ್ ಸೀಟು ಕೊಡಿಸುವುದು, ಸೀಟು ಬ್ಲಾಕ್ ಮಾಡಿಸುವುದು ದೊಡ್ಡ ದಂಧೆಯಾಗಿದೆ. ಪ್ರಕರಣವನ್ನು ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

English summary
Kolkatha based men who promised a medical seat and cheated the aspirant of Rs 1 lakh. Complaint field in Bhadravathi Old town police station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X