ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಿಂದೂ ಮೂಲವಾದಿಗಳಿಂದ ಸಂವಿಧಾನಕ್ಕೆ ಆತಂಕ: ಡಾ. ಮನಿಷಾ ಎಚ್ಚರಿಕೆ

|
Google Oneindia Kannada News

ಶಿವಮೊಗ್ಗ, ಮಾರ್ಚ್ 08: ಬಲಪಂಥೀಯ ಹಿಂದುತ್ವ ಶಕ್ತಿಗಳ ಅಬ್ಬರದಿಂದ ಗೌರಿ ಲಂಕೇಶ್, ಕಲ್ಬುರ್ಗಿ, ಪಾನ್ಸಾರೆ ಸೇರಿದಂತೆ ಮುಸ್ಲಿಂ, ಕ್ರಿಶ್ಚಿಯನ್ನರು, ದಲಿತರು ದಾಳಿಗೊಳಗಾಗುತ್ತಿದಾರೆ ಎಂದು ನಮಗೆ ಅನ್ನಿಸಬಹುದು ಆದರೆ ಅವರ ಟಾರ್ಗೆಟ್ ನಿಜವಾಗಿಯೂ ನಮ್ಮ ಸಂವಿಧಾನವೇ ಆಗಿದೆ ಎಂದು ಚಿಂತಕಿ ಡಾ.ಮನಿಷಾ ಗುಪ್ತಾ ಕರೆ ನೀಡಿದರು.

ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯಸಭೆಯಲ್ಲಿ ಇವರಿಗೆ ಬಹುಮತ ಬಂದ ತಕ್ಷಣ ಸಂವಿಧಾವನ್ನು ಉಲ್ಲಂಘಿಸಿ ಹಿಂದೂ ಧಾರ್ಮಿಕ ಮೂಲಭೂತವಾದವನ್ನು ಹೇರಲು ಸಿದ್ದರಾಗಿದ್ದಾರೆ.

ಹೀಗೆ ಅದರೆ ಕೆಲ ಮುಸ್ಲಿಂ, ಕ್ರಿಶ್ಚಿಯನ್, ಬುದ್ದಿಸ್ಟ್, ಜ್ಯೂವಿಕ್ ಮೂಲಭೂತವಾದಿ ದೇಶಗಳ ಪರಿಸ್ಥಿತಿ ನಮ್ಮ ಕಣ್ಣ ಮುಂದಿದೆ. ಆ ಪರಿಸ್ಥಿತಿ ನಮಗೆ ಬರಬಾರದು ಎಂದು ಹೇಳಿದರು.
ಹಾಗಾಗಿ ಸಂವಿಧಾನದಲ್ಲಿ ಧರ್ಮಕ್ಕೆ ಆಸ್ಪದವಿರಬಾರದು. ನಾನು ಬದುಕಿರುವವರೆಗೂ ಸಂವಿಧಾನವನ್ನು ಬದಲಿಸಕ್ಕೆ, ತಿರುಚಲಿಕ್ಕೆ ಬಿಡುವುದಿಲ್ಲ ಅದು ನನ್ನ ಶವದ ಮೇಲೆಯೇ ಎಂದು ನಾವು ಶಪಥ ಮಾಡಬೇಕು ಎಂದರು.

Manisha Gupta warns Hindu Fundamentals target constitution

ಮಹಿಳಾ ದಿನಾಚರಣೆ ಎಂದರೇನು? ಇದನ್ನು ಯಾವ ರೀತಿ ನಾವು ಅರ್ಥ ಮಾಡಿಕೊಳ್ಳುತ್ತೇವೆ. ವಜ್ರಾಭರಣಗಳ ಮೇಲೆ ಶೇ. 25 ಡಿಸ್ಕೌಂಟ್ ಸಿಗುವುದೇ? ಇಲ್ಲ ನಾವು ಫೇರ್ ಅಂಡ್ ಲವ್ಲಿ ಹಚ್ಚುವುದೆ? ಇಲ್ಲ ದುಡಿಯುವ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ, ಕೆಲಸದ ಅವಧಿ ಕಡಿಮೆ ಮಾಡಿ 12 ಗಂಟೆಗೆ ಸೀಮಿತಗೊಳಿಸಲು, ಶೋಷಣೆ ತಪ್ಪಿಸಲು ನಿರಂತರವಾಗಿ ಹೋರಾಡಿ ಜಯಶಾಲಿಯಾದ ದಿನ, ಈ ಮುಷ್ಕರ ಯಶ್ವಸಿಯಾಗಲು ಕಾರಣವೆಂದರೆ ಎಲ್ಲಾ ವರ್ಗದ ಮಹಿಳೆಯರು ಒಟ್ಟಾಗಿ ಹೋರಾಡಿದ್ದರಿಂದಲೇ ಅಗಿದೆ ಎಂದರು.

ಇಂದಿನ ನಮ್ಮ ಮುಂದಿರುವ ಸವಾಲುಗಳು ಯಾವುವು? ಮಹಿಳಾ ಚಳವಳಿ ಪ್ರಭುತ್ವಕ್ಕೆ, ಮಾರುಕಟ್ಟೆಗೆ ಉಪಯೋಗ ವಾಗಬಾರದು ಬದಲಿಗೆ ಶೋಷಿತರಿಗೆ ದನಿಯಾಗಬೇಕು ಮತ್ತು ಮಹಿಳಾ ಚಳವಳಿಗೆ ಲಾಭವಾಗುವಂತೆ ನಾವು ಮಾಡಬೇಕು. ಎಲ್ಲಾ ಚಳವಳಿಯಲ್ಲಿಯೂ ಸ್ತ್ರೀವಾದ, ಹೋರಾಟವೂ ಅದರ ಮುಖ್ಯಧಾರೆಯಾಗುವುದು ಹೇಗೆ ಎಂದು ಚಿಂತಿಸಬೇಕಿದೆ ಎಂದು ಹೇಳಿದರು.

English summary
Progressive thinker Dr. Manisha Gupta warned that Hindu fundamentalism is leading to country in the line of islamic fundamental country and these force wants to change the constitution. She was addressing international women's Day in Shivamogga on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X