ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು-ಶಿವಮೊಗ್ಗ-ಮಂತ್ರಾಲಯ ಬಸ್: ಸಮಯ, ಮಾರ್ಗದ ಮಾಹಿತಿ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಜನವರಿ 12: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹಾಗೂ ಮಂಗಳೂರು ವಿಭಾಗದಿಂದ ಜನವರಿ 14 ರಂದು ಮಂಗಳೂರು-ಉಡುಪಿ-ಮಂತ್ರಾಲಯ ನಾನ್ ಎಸಿ ಸ್ಲೀಪರ್ ಬಸ್ ಸಂಚಾರ ಸೌಲಭ್ಯವನ್ನು ಆರಂಭಿಸುತ್ತಿದೆ.

ಈ ಬಸ್ ಮಂಗಳೂರಿನಿಂದ ಸಂಜೆ 3.30ಕ್ಕೆ ಹೊರಟು ಉಡುಪಿ-ಕುಂದಾಪುರ-ಹಾಲಾಡಿ-ಸಿದ್ಧಾಪುರ-ಮಾಸ್ತಿಕಟ್ಟೆ-ತೀರ್ಥಹಳ್ಳಿ-ಶಿವಮೊಗ್ಗಕ್ಕೆ ರಾತ್ರಿ 9.15ಕ್ಕೆ ತಲುಪುತ್ತದೆ.

ಬೆಂಗಳೂರು-ತಿರುಪತಿ ಪ್ಯಾಕೇಜ್ ಘೋಷಣೆ ಮಾಡಿದ ಕೆಎಸ್ಆರ್‌ಟಿಸಿಬೆಂಗಳೂರು-ತಿರುಪತಿ ಪ್ಯಾಕೇಜ್ ಘೋಷಣೆ ಮಾಡಿದ ಕೆಎಸ್ಆರ್‌ಟಿಸಿ

ಶಿವಮೊಗ್ಗದಿಂದ 9.45ಕ್ಕೆ ಹೊರಟು ಚನ್ನಗಿರಿ-ಹೊಳಲ್ಕೆರೆ-ಚಿತ್ರದುರ್ಗ-ಚಳ್ಳಕೆರೆ-ರಾಂಪುರ-ಬಳ್ಳಾರಿ-ಅಲೂರು-ಅಧೋನಿ-ಮಾಧವರಂ ಮಾರ್ಗವಾಗಿ ಮಂತ್ರಾಲಯಕ್ಕೆ ಬುಧವಾರ ಬೆಳಿಗ್ಗೆ 6.20ಕ್ಕೆ ತಲುಪುವುದು.

 Mangaluru-Shivamogga-Mantralaya KSRTC Bus: Time And Route Information

ಅದೇ ರೀತಿ ಮಂತ್ರಾಲಯದಿಂದ ಮರು ಪ್ರಯಾಣ ಬೆಳೆಸುವ ಬಸ್ ಸಂಜೆ 5.30ಕ್ಕೆ ಹೊರಟು ಮಂಗಳೂರಿಗೆ ಮರುದಿನ ಬೆಳಗ್ಗೆ 8.40ಕ್ಕೆ ತಲುಪುವುದು ಎಂದು ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈಶಾನ್ಯ ಸಾರಿಗೆಯಿಂದ ನಾನ್ ಎಸಿ ಸ್ಲೀಪರ್ ಬಸ್‍ ಟಿಕೆಟ್ ದರ ಆಫರ್ಈಶಾನ್ಯ ಸಾರಿಗೆಯಿಂದ ನಾನ್ ಎಸಿ ಸ್ಲೀಪರ್ ಬಸ್‍ ಟಿಕೆಟ್ ದರ ಆಫರ್

ಈ ಸಾರಿಗೆಗೆ ಅವತಾರ್ ವ್ಯವಸ್ಥೆ ಮೂಲಕ ಮುಂಗಡ ಆಸನ ಕಾಯ್ದಿರಿಸುವ ವ್ಯವಸ್ಥೆ ಇದ್ದು, ಸಾರ್ವಜನಿಕರು ಈ ಸಾರಿಗೆಯ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಗಳೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.

English summary
The Mangaluru-Udupi-Mantralaya non-AC sleeper bus service is being launched by the Karnataka State Road Transport Corporation and Mangaluru Division on January 14.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X