ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶೇಷ ವರದಿ: ಮಲೆನಾಡಿಗರ ಮನೆ ಮಾತಾದ 'ಮಲ್ನಾಡ್ ಪುಟಾಣಿಗಳು' ಯೂಟ್ಯೂಬ್ ಚಾನೆಲ್

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಜುಲೈ 13: 'ಮಲ್ನಾಡ್ ಪುಟಾಣಿಗಳು' ಹೆಸರಿನ ಯೂಟ್ಯೂಬ್ ಚಾನೆಲ್ ಈಗ ಮಲೆನಾಡಿಗರ ಮನೆ ಮಾತಾಗಿದೆ. ಕೆಲವು ವಿಡಿಯೋಗಳು ಲಕ್ಷ ಲಕ್ಷ ವೀವ್ಸ್‌ಗಳನ್ನು ಹೊಂದಿವೆ. ವಿಡಿಯೋ ಅಪ್ಲೋಡ್ ಆಗಿ ಕೆಲವೇ ಗಂಟೆಗಳಲ್ಲಿ ಸಾವಿರಾರು ಮಂದಿ ವಿಡಿಯೋಗಳನ್ನು ನೋಡುತ್ತಿದ್ದಾರೆ. ಲೈಕ್ಸ್ ಜೊತೆಗೆ ಉತ್ತಮ ಕಮೆಂಟ್‌ಗಳನ್ನೂ ನೀಡುತ್ತಿದ್ದಾರೆ.

ಮಲೆನಾಡಿಗರ ಭಾಷಾ ಶೈಲಿಯಲ್ಲಿ ವಿಡಿಯೋಗಳನ್ನು ಮಾಡಲಾಗುತ್ತಿದೆ. ಮಲೆನಾಡಿಗರ ಜೀವನ ಶೈಲಿ, ಮಕ್ಕಳ ಆಟ, ತುಂಟಾಟಗಳು ವಿಡಿಯೋಗಳ ವಿಷಯ ವಸ್ತುಗಳಾಗಿರುತ್ತವೆ. ಗದ್ದೆ ನಾಟಿ, ಹಬ್ಬ, ಜಾತ್ರೆಗಳು, ಜ್ವಲಂತ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುವ ವಿಡಿಯೋಗಳು ಸಿದ್ಧವಾಗುತ್ತಿವೆ.

 ಲಾಕ್‌ಡೌನ್ ಟೈಮಲ್ಲಿ ಶುರುವಾಯ್ತು ಪ್ರಯತ್ನ

ಲಾಕ್‌ಡೌನ್ ಟೈಮಲ್ಲಿ ಶುರುವಾಯ್ತು ಪ್ರಯತ್ನ

ಲಾಕ್‌ಡೌನ್ ಅವಧಿಯಲ್ಲಿ ಒಂದೇ ಕುಟುಂಬದ ಯುವಕರು ಸೇರಿಕೊಂಡು ಈ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಈ ವರ್ಷದ ಮೇ ತಿಂಗಳಲ್ಲಿ ವಿಡಿಯೋಗಳನ್ನು ಅಪ್ಲೋಡ್ ಮಾಡಲು ಶುರು ಮಾಡಿದ್ದಾರೆ. ಅತ್ಯಂತ ಕಡಿಮೆ ಅವಧಿಯಲ್ಲಿ ಈ ಯೂಟ್ಯೂಬ್ ಚಾನೆಲ್, 19 ಸಾವಿರಕ್ಕೂ ಹೆಚ್ಚು ಸಬ್ಸ್ಕ್ರೈಬರ್‌ಗಳು, 14 ಲಕ್ಷಕ್ಕೂ ಹೆಚ್ಚು ವೀವ್ಸ್ ಗಳಿಸಿದೆ.

 ಎಲ್ಲಿ? ಹೇಗೆ ರೆಡಿಯಾಗುತ್ತೆ ವಿಡಿಯೋ?

ಎಲ್ಲಿ? ಹೇಗೆ ರೆಡಿಯಾಗುತ್ತೆ ವಿಡಿಯೋ?

ಮಲ್ನಾಡ್ ಪುಟಾಣಿಗಳು ಯೂಟ್ಯೂಬ್ ಚಾನೆಲ್ ರೆಡಿಯಾಗುವುದ ತೀರ್ಥಹಳ್ಳಿ ತಾಲೂಕಿನ ಸಿರಿಗೆರೆ ಕರಕುಚ್ಚಿ ಗ್ರಾಮದಲ್ಲಿ. ಇಲ್ಲಿನ ಎಂ.ಎನ್.ಕೆ. ನಿತಿನ್, ಎಂ.ಎನ್. ಕ್ಷಮಿತಾ, ದೀಪ್ತಿ, ದೀಪಿಕ್, ನೂತನಾ, ಸಾತ್ವಿಕಾ, ಗ್ರೀಷ್ಮಾ, ಹರ್ಷಿತ್, ಪ್ರೀತಮ್ ಈ ಯೂಟ್ಯೂಬ್ ಚಾನಲ್‌ನ ಹಿಂದಿದ್ದಾರೆ. ಪ್ರತಿದಿನ ಕಾನ್ಸೆಪ್ಟ್ ರೆಡಿ ಮಾಡಿಕೊಂಡು, ವಾಯ್ಸ್ ಓವರ್ ಕೊಟ್ಟು, ಆನಿಮೇಷನ್ ರೆಡಿ ಮಾಡಿ ವಿಡಿಯೋಗಳನ್ನು ಅಪ್ಲೋಡ್ ಮಾಡಲಾಗುತ್ತಿದೆ.

 ವಿದೇಶದಲ್ಲಿರುವ ಮಲೆನಾಡಿಗರಿಗೂ ಅಚ್ಚುಮೆಚ್ಚು

ವಿದೇಶದಲ್ಲಿರುವ ಮಲೆನಾಡಿಗರಿಗೂ ಅಚ್ಚುಮೆಚ್ಚು

"ಮೊದಲು ಸ್ಕ್ರಿಪ್ಟ್ ಮಾಡಿ ವಾಯ್ಸ್ ಕೊಡುತ್ತಿದ್ದೆವು. ಆದರೆ ಸ್ಕ್ರಿಪ್ಟ್‌ನಿಂದಾಗಿ ಭಾಷಾ ಶೈಲಿ ಸುಲಲಿತವಾಗಿ ಬರುತ್ತಿರಲಿಲ್ಲ. ಹಾಗಾಗಿ ಈಗ ಕಾನ್ಸೆಪ್ಟ್ ಸಿದ್ಧಪಡಿಸಿಕೊಂಡು, ನೇರವಾಗಿ ಮಾತನಾಡಿ ವಿಡಿಯೋ ರೆಡಿ ಮಾಡಲಾಗುತ್ತಿದೆ. ವಿದೇಶದಲ್ಲಿರುವ ಮಲೆನಾಡಿಗರು ಕೂಡ ನಮ್ಮ ವಿಡಿಯೋಗಳನ್ನು ನೋಡುತ್ತಿದ್ದಾರೆ,'' ಅನ್ನುತ್ತಾರೆ ಮಲ್ನಾಡ್ ಪುಟಾಣಿ ಟೀಮ್‌ನ ನಿತಿನ್.

 ವಿದೇಶಗಳಲ್ಲೂ ಅಭಿಮಾನಿಗಳು ಸೃಷ್ಟಿ

ವಿದೇಶಗಳಲ್ಲೂ ಅಭಿಮಾನಿಗಳು ಸೃಷ್ಟಿ

ಮಲ್ನಾಡ್ ಪುಟಾಣಿಗಳು ಯೂಟ್ಯೂಬ್ ಚಾನೆಲ್ ಮಲೆನಾಡಿಗರ ಮನೆ ಮಾತಾಗಿದೆ. ವಿಡಿಯೋದಲ್ಲಿ ಕಾಣಿಸುವ ಪಾತ್ರಗಳು ವೀಕ್ಷಕರಿಗೆ ಚಿರಪರಿಚಿತವಾಗಿವೆ. ವಿದೇಶಗಳಲ್ಲೂ ಅಭಿಮಾನಿಗಳು ಸೃಷ್ಟಿಯಾಗಿದ್ದಾರೆ. ಮಲೆನಾಡ ಭಾಷಾ ಶೈಲಿ, ಸಂಸ್ಕೃತಿಯನ್ನು ಡಿಜಿಟಲ್ ಮೀಡಿಯಾ ಮೂಲಕ ಪಸರಿಸುತ್ತಿರುವುದು ಮೆಚ್ಚುಗೆ ಗಳಿಸಿದೆ.

English summary
Same family members created Malnad Putanigalu Youtube Channel in Karakuchi village at Thirthahalli taluk in Shivamogga district during lockdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X