• search
 • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶಿವಮೊಗ್ಗ ಉಪ ಚುನಾವಣೆ : ಮಧು ಬಂಗಾರಪ್ಪ ಬಹಿರಂಗ ಪತ್ರ

|
   Shimoga Lok Sabha By-elections Results 2018 : ಮಧು ಬಂಗಾರಪ್ಪ ಬರೆದಿದ್ದಾರೆ ಬಹಿರಂಗ ಪತ್ರ

   ಶಿವಮೊಗ್ಗ, ನವೆಂಬರ್ 08 : ಶಿವಮೊಗ್ಗ ಲೋಕಸಭಾಸ ಕ್ಷೇತ್ರದ ಉಪ ಚುನಾವಣೆಯಲ್ಲಿ ಮುಗಿದಿದೆ. ಜೆಡಿಎಸ್-ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪ ಅವರು ಸಾಮಾಜಿಕ ಜಾಲತಾಣದ ಮೂಲಕ ಜನರಿಗೆ ಧನ್ಯವಾದ ಅರ್ಪಿಸಿದ್ದಾರೆ.

   ತಮ್ಮ ಫೇಸ್‌ಬುಕ್‌ ಪುಟ Madhu.bangarappaji ಯಲ್ಲಿ ಅವರು ಕಾಂಗ್ರೆಸ್, ಜೆಡಿಎಸ್ ನಾಯಕರಿಗೆ, ಕ್ಷೇತ್ರದ ಕಾರ್ಯಕರ್ತರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. 'ನನ್ನ ಮೇಲೆ ನಂಬಿಕೆ ಇಟ್ಟು ಸ್ಪರ್ಧಿಸಲು ಅವಕಾಶ ನೀಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

   ಶಿವಮೊಗ್ಗ ಉಪ ಚುನಾವಣೆ : ಯಾವ ಕ್ಷೇತ್ರದಲ್ಲಿ ಯಾರಿಗೆ ಎಷ್ಟು ಮತ?ಶಿವಮೊಗ್ಗ ಉಪ ಚುನಾವಣೆ : ಯಾವ ಕ್ಷೇತ್ರದಲ್ಲಿ ಯಾರಿಗೆ ಎಷ್ಟು ಮತ?

   ಜೆಡಿಎಸ್-ಕಾಂಗ್ರೆಸ್ ಪಕ್ಷಗಳ ಹಿರಿಯರು, ಮುಖಂಡರು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಎಲ್ಲಾ ಅಧ್ಯಕ್ಷರು, ಪದಾಧಿಕಾರಿಗಳು, ಜನಪ್ರತಿನಿಧಿಗಳು, ಕಾರ್ಯಕರ್ತರು ಮತ್ತು ನೆಚ್ಚಿನ ಮತದಾರರೆಲ್ಲರಿಗೂ ನನ್ನ ಮನಃಪೂರ್ವಕ ಧನ್ಯವಾದಗಳು. ನಿಮ್ಮ ಪ್ರೀತಿ, ಅಭಿಮಾನ, ನಂಬಿಕೆ, ವಿಶ್ವಾಸಕ್ಕೆ ನಾನೆಂದೂ ಚಿರರುಣಿ ಎಂದು ಬರೆದಿದ್ದಾರೆ.

   ಶಿವಮೊಗ್ಗ ಉಪ ಚುನಾವಣೆ : ಯಾವ ಕ್ಷೇತ್ರದಲ್ಲಿ ಯಾರಿಗೆ ಎಷ್ಟು ಮತ?ಶಿವಮೊಗ್ಗ ಉಪ ಚುನಾವಣೆ : ಯಾವ ಕ್ಷೇತ್ರದಲ್ಲಿ ಯಾರಿಗೆ ಎಷ್ಟು ಮತ?

   ಶಿವಮೊಗ್ಗ ಲೋಕಸಭಾ ಉಪ ಚುನಾವಣೆಯಲ್ಲಿ ಬಿಜೆಪಿಯ ಬಿ.ವೈ.ರಾಘವೇಂದ್ರ ಗೆಲುವು ಸಾಧಿಸಿದ್ದರು. 4,91,158 ಮತಗಳನ್ನು ಪಡೆದು ಮಧು ಬಂಗಾರಪ್ಪ ಅವರು ಸೋಲು ಅನುಭವಿಸಿದ್ದರು.

   ಮಧು ಬಂಗಾರಪ್ಪಗೆ ಸಚಿವ ಸ್ಥಾನ, ಇದು ದೇವೇಗೌಡರ ಹೊಸ ತಂತ್ರಮಧು ಬಂಗಾರಪ್ಪಗೆ ಸಚಿವ ಸ್ಥಾನ, ಇದು ದೇವೇಗೌಡರ ಹೊಸ ತಂತ್ರ

   ಮಧು ಬಂಗಾರಪ್ಪ ಹೇಳಿದ್ದೇನು?

   ಮಧು ಬಂಗಾರಪ್ಪ ಹೇಳಿದ್ದೇನು?

   ನನ್ನ ಮೇಲೆ ನಂಬಿಕೆಯಿಟ್ಟು ಶಿವಮೊಗ್ಗ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷದ ಮೈತ್ರಿಕೂಟದ ಅಭ್ಯರ್ಥಿಯಾಗಿ ನನ್ನನ್ನು ಆಯ್ಕೆ ಮಾಡಿ,ಈ ಲೋಕಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದ, ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳು.

   ಹಲವು ನಾಯಕರಿಗೆ ಧನ್ಯವಾದ

   ಹಲವು ನಾಯಕರಿಗೆ ಧನ್ಯವಾದ

   ವಿಶೇಷವಾಗಿ ನನ್ನ ಮಾರ್ಗದರ್ಶಕರು, ಹಿರಿಯರು, ನನ್ನ ತಂದೆ ಸಮಾನರು, ಮಾಜಿ ಪ್ರಧಾನಿಗಳಾದ ಜೆಡಿಎಸ್ ಪಕ್ಷದ ರಾಷ್ಟೀಯ ಅಧ್ಯಕ್ಷರಾದ ದೇವೇಗೌಡಜೀಯವರೇ, ಬಂಗಾರಪ್ಪಜೀಯವರ ಒಡನಾಡಿಗಳಾದ ಹಿರಿಯರು, ನನ್ನ ತಂದೆ ಸಮಾನರಾದ ಮಾಜಿ ಮಂತ್ರಿಗಳಾದ ಕಾಗೋಡು ತಿಮ್ಮಪ್ಪಾಜೀಯವರೇ,ನನ್ನ ಅಣ್ಣನ ಸಮಾನರಾದ ಕರ್ನಾಟಕದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಹೆಚ್.ಡಿ. ಕುಮಾರಸ್ವಾಮಿ ಯವರೇ, ನನ್ನ ಅಣ್ಣನ ಸಮಾನರಾದ ಕರ್ನಾಟಕ ಸರ್ಕಾರದ ಜಲಸಂಪನ್ಮೂಲ ಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರೇ, ಹಿರಿಯರು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.

   ಕಾಂಗ್ರೆಸ್ ನಾಯಕರಿಗೆ ಧನ್ಯವಾದ

   ಕಾಂಗ್ರೆಸ್ ನಾಯಕರಿಗೆ ಧನ್ಯವಾದ

   ಹಿರಿಯರು ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ಶ್ರೀ ಮಲ್ಲಿಕಾರ್ಜುನ ಖರ್ಗೆಯವರೇ, ಕರ್ನಾಟಕ ಸರ್ಕಾರದ ಮಂತ್ರಿಗಳಾದ ಜಮೀರ್ ಅಹ್ಮದ್ ರವರೇ, ಮಾಜಿ ಸಚಿವರಾದ ಕಿಮ್ಮನೇ ರತ್ನಾಕರ್ ರವರೇ,ಮಾಜಿ ಶಾಸಕರಾದ ಬೈಂದೂರಿನ ಗೋಪಾಲ ಪೂಜಾರಿಯವರೇ, ಶಿವಮೊಗ್ಗ ಗ್ರಾಮಾಂತರದ ಮಾಜಿ ಶಾಸಕರಾದ ನನ್ನ ಅಕ್ಕನ ಸಮಾನರಾದ ಶಾರದಾ ಪೂರ್ಯನಾಯ್ಕರವರೇ, ಹಿರಿಯರಾದ ಭದ್ರಾವತಿಯ ಮಾಜಿ ಶಾಸಕರಾದ ಅಪ್ಪಾಜಿಗೌಡರವರೇ, ಶಾಸಕರಾದ ಬಿ.ಕೆ.ಸಂಗಮೇಶ್ವರರವರೇ, ಮಂಜುನಾಥ್ ಭಂಡಾರೀಯವರೇ
   ಸಾಗರದ ಮಾಜಿ ಶಾಸಕರಾದ ಗೋಪಾಲಕೃಷ್ಣರವರೇ, ಎಮ್.ಎಲ್.ಸಿ.ಗಳಾದ ಆರ್.ಪ್ರಸನ್ನ ಕುಮಾರ್ ರವರೇ, ಶಿವಮೊಗ್ಗದ ಮಾಜಿ ಶಾಸಕರಾದ ಕೆ.ಬಿ.ಪ್ರಸನ್ನ ಕುಮಾರ್ ರವರೇ, ತೀ.ನಾ.ಶ್ರೀನಿವಾಸ್ ರವರೇ, ಆರ್.ಎಂ.ಮಂಜುನಾಥಗೌಡರವರೇ, ಶಿಕಾರಿಪುರದ ಗೋಣಿ ಮಾಲತೇಶ್ ರವರೇ,ಹೆಚ್.ಟಿ. ಬಳಿಗಾರ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.

   ನಿಮ್ಮ ಪ್ರೀತಿ ಅಭಿಮಾನಕ್ಕೆ ಚಿರರುಣಿ

   ನಿಮ್ಮ ಪ್ರೀತಿ ಅಭಿಮಾನಕ್ಕೆ ಚಿರರುಣಿ

   ಎಲ್ಲಾ ಜೆಡಿಎಸ್ - ಕಾಂಗ್ರೆಸ್ ಪಕ್ಷಗಳ ಹಿರಿಯರು, ಮುಖಂಡರು, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಎಲ್ಲಾ ಅಧ್ಯಕ್ಷರು, ಪದಾಧಿಕಾರಿಗಳು, ಜನಪ್ರತಿನಿಧಿಗಳು, ಕಾರ್ಯಕರ್ತರು ಮತ್ತು ನೆಚ್ಚಿನ ಮತದಾರರೆಲ್ಲರಿಗೂ ನನ್ನ ಮನಃಪೂರ್ವಕ ಧನ್ಯವಾದಗಳು ಎಂದು ಮಧು ಬಂಗಾರಪ್ಪ ನಿಮ್ಮ ಪ್ರೀತಿ, ಅಭಿಮಾನ, ನಂಬಿಕೆ, ವಿಶ್ವಾಸಕ್ಕೆ ನಾನೆಂದೂ ಚಿರರುಣಿ ಎಂದು ಹೇಳಿದ್ದಾರೆ.

   English summary
   BJP candidate B.Y.Raghavendra won the Shivamogga Lok Sabha By election 2018. JD(S)-Congress candidate Madhu Bangarapap in his face book post thanked the all leaders and voters for supporting him.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X