ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಂಡ ಕಂಡವರನ್ನೆಲ್ಲಾ ಅಪ್ಪ, ಅಣ್ಣ ಅನ್ನೋ ಮಧು: ಕುಮಾರ್ ಬಂಗಾರಪ್ಪ ವಾಗ್ದಾಳಿ

|
Google Oneindia Kannada News

Recommended Video

ಕಂಡ ಕಂಡವರನ್ನೆಲ್ಲಾ ಅಪ್ಪ, ಅಣ್ಣ ಅನ್ನೋ ಮಧು: ಕುಮಾರ್ ಬಂಗಾರಪ್ಪ ವಾಗ್ದಾಳಿ..! | Oneindia Kannada

ಶಿವಮೊಗ್ಗ, ಮಾರ್ಚ್ 21: ಬಹುತೇಕ ಬಿಜೆಪಿಯಿಂದ ಬಿ ವೈ ರಾಘವೇಂದ್ರ ಮತ್ತು ಸಮ್ಮಿಶ್ರ ಸರಕಾರದಿಂದ ಮಧು ಬಂಗಾರಪ್ಪ ಅಭ್ಯರ್ಥಿಗಳೆಂದು ಫೈನಲ್ ಆದ ನಂತರ, ಶಿವಮೊಗ್ಗ ಲೋಕಸಭಾ ಚುನಾವಣಾ ಆಖಾಡ ರಂಗೇರಿದೆ.

ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಬಿಜೆಪಿ ಮುಖಂಡ ಮತ್ತು ಸೊರಬ ಶಾಸಕ ಕುಮಾರ್ ಬಂಗಾರಪ್ಪ, ಸಹೋದರ ಮಧು ವಿರುದ್ದ ಅಕ್ಷರಸಃ ಹರಿಹಾಯ್ದಿದ್ದಾರೆ. ಇರುವ ಒಬ್ಬ ಸಹೋದರನನ್ನು 'ಅಣ್ಣ' ಎನ್ನಲಾಗದವರು, ಊರಿನವರೆನ್ನೆಲ್ಲಾ ಅಣ್ಣ ಎಂದು ಕರೆಯುತ್ತಿದ್ದಾರೆಂದು ಟೀಕಿಸಿದ್ದಾರೆ.

ಕಾಂಗ್ರೆಸ್ ಮುಖಂಡ ಡಿ ಕೆ ಶಿವಕುಮಾರ್ ಅವರನ್ನು 'ಏ ನೀವು ಪ್ರಚಾರಕ್ಕೆ ಬರಲೇ ಬೇಕು' ಎಂದು ಮಾಧ್ಯಮದವರ ಮೂಲಕ ಹೇಳುವ ಮಧು, ಏನು ಡಿಕೆಶಿ ಅವರಿಗೆ ಬೆದರಿಕೆಯೊಡ್ಡುತ್ತಿದ್ದಾರಾ ಎಂದು ಕುಮಾರ್ ಪ್ರಶ್ನಿಸಿದ್ದಾರೆ.

'ನೂರು ಡಿಕೆಶಿ ಬಂದರೂ ಶಿವಮೊಗ್ಗದಲ್ಲಿ ಬಿಜೆಪಿ ಸೋಲಿಸಲು ಸಾಧ್ಯವಿಲ್ಲ' 'ನೂರು ಡಿಕೆಶಿ ಬಂದರೂ ಶಿವಮೊಗ್ಗದಲ್ಲಿ ಬಿಜೆಪಿ ಸೋಲಿಸಲು ಸಾಧ್ಯವಿಲ್ಲ'

ಯಡಿಯೂರಪ್ಪ ಮತ್ತು ಡಿ ಕೆ ಶಿವಕುಮಾರ್ ಅವರ ದೋಸ್ತಿ ಬೇರೆ, ಚುನಾವಣಾ ಅಖಾಡವೇ ಬೇರೆ. ಡಿಕೆಶಿ ಅಣ್ಣ, ಪ್ರಚಾರಕ್ಕೆ ಖಂಡಿತ ಬರುತ್ತಾರೆ ಎಂದು ಮಧು ಬಂಗಾರಪ್ಪ ಎರಡು ದಿನದ ಹಿಂದೆ ಹೇಳಿಕೆಯನ್ನು ನೀಡಿದ್ದರು. ಇದಕ್ಕೆ ತಿರುಗೇಟು ನೀಡಿದ, ಕುಮಾರ್ ಬಂಗಾರಪ್ಪನವರ ವಾಗ್ದಾಳಿಯ ಪರಿ.. ಮುಂದೆ ಓದಿ..

ಡಿ ಕೆ ಶಿವಕುಮಾರ್ ಅವರಿಗೆ ಬಳ್ಳಾರಿಯ ಉಸ್ತುವಾರಿ

ಡಿ ಕೆ ಶಿವಕುಮಾರ್ ಅವರಿಗೆ ಬಳ್ಳಾರಿಯ ಉಸ್ತುವಾರಿ

ಕಳೆದ ಬಾರಿ ಕಾಂಗ್ರೆಸ್ ಪಕ್ಷ ಡಿ ಕೆ ಶಿವಕುಮಾರ್ ಅವರಿಗೆ ಬಳ್ಳಾರಿಯ ಉಸ್ತುವಾರಿಯನ್ನು ವಹಿಸಿದ್ದರಿಂದ ಉಪಚುನಾವಣೆಯ ಸಂದರ್ಭದಲ್ಲಿ ಶಿವಮೊಗ್ಗಕ್ಕೆ ಬರಲು ಅವರಿಗೆ ಸಾಧ್ಯವಾಗಿರಲಿಲ್ಲ. ಯಡಿಯೂರಪ್ಪ ಮತ್ತು ಡಿಕೆಶಿ ನಡುವೆ ಹಳೆಯ ದೋಸ್ತಿಯಿದ್ದು, ಅವರು ಶಿವಮೊಗ್ಗಕ್ಕೆ ಬರುವುದು ಅನುಮಾನ ಅಂತ ಸಾರ್ವಜನಿಕ ವಲಯದಲ್ಲಿ ಚರ್ಚೆ ಆಗುತ್ತಿದೆ. ಆದರೆ, ಚುನಾವಣೆಯೇ ಬೇರೆ, ದೋಸ್ತಿಯೇ ಬೇರೆ ಎಂದು ಮಧು ಬಂಗಾರಪ್ಪ ಹೇಳಿಕೆಯನ್ನು ನೀಡಿದ್ದರು.

'ಮಧು ಬಂಗಾರಪ್ಪ ನನ್ನ ಮೊಮ್ಮಗ ಇದ್ದ ಹಾಗೆ, ಅವರ ಗೆಲುವಿಗೂ ಶಕ್ತಿ ಮೀರಿ ಶ್ರಮಿಸುತ್ತಿದ್ದೇನೆ' 'ಮಧು ಬಂಗಾರಪ್ಪ ನನ್ನ ಮೊಮ್ಮಗ ಇದ್ದ ಹಾಗೆ, ಅವರ ಗೆಲುವಿಗೂ ಶಕ್ತಿ ಮೀರಿ ಶ್ರಮಿಸುತ್ತಿದ್ದೇನೆ'

ಕಂಡ ಕಂಡವರನ್ನು ಅಣ್ಣ ಅಪ್ಪ ಅಂತಾ ಕರಿಯುವ ಮಧು

ಕಂಡ ಕಂಡವರನ್ನು ಅಣ್ಣ ಅಪ್ಪ ಅಂತಾ ಕರಿಯುವ ಮಧು

ನನಗೆಲ್ಲರೂ ಹಿರಿಯ ಅಣ್ಣನೇ ಎಂದು ಹೇಳಿರುವ ಮಧು ಬಂಗಾರಪ್ಪನವರನ್ನು ಪ್ರಶ್ನಿಸಿರುವ ಕುಮಾರ್, ಒರಿಜಿನಲ್ ಹಿರಿಯ ಅಣ್ಣನಿಗೆ ಏನು ಮಾಡಿದ್ದಾರೆ ಎನ್ನುವ ಗಮನ ಅವರಿಗಿಲ್ಲ. ಅಣ್ಣ ಅಪ್ಪ ಎನ್ನುವ ಪದಕ್ಕೆ ಅರ್ಥ ಇಲ್ಲದೇ ಇರುವ ರೀತಿಯಲ್ಲಿ ಕಂಡ ಕಂಡವರನ್ನು ಅಣ್ಣ ಅಪ್ಪ ಅಂತಾ ಕರೀತಾರೆ - ಕುಮಾರ್ ಬಂಗಾರಪ್ಪ.

ದೇವೇಗೌಡರು ಅವರಿಗೆ ಅಪ್ಪನ ಸಮನಾಗಿ ಬಂದು ಬಿಟ್ಟಿದ್ದಾರೆ

ದೇವೇಗೌಡರು ಅವರಿಗೆ ಅಪ್ಪನ ಸಮನಾಗಿ ಬಂದು ಬಿಟ್ಟಿದ್ದಾರೆ

ಕಾಗೋಡು ತಿಮ್ಮಪ್ಪ ಅವರನ್ನು ನನ್ನ ತಂದೆಗೆ ಸಮ ಎಂದು ಹೇಳುತ್ತಿದ್ದ ಮಧು ಬಂಗಾರಪ್ಪ ಈಗ ಡಿ ಕೆ ಶಿವಕುಮಾರ್ ಹಿಂದೆ ಬಿದ್ದಿದ್ದಾರೆ. ಈಗ ಸನ್ಮಾನ್ಯ ದೇವೇಗೌಡರು ಅವರಿಗೆ ಅಪ್ಪನ ಸಮನಾಗಿ ಬಂದು ಬಿಟ್ಟಿದ್ದಾರೆ. ಕುಮಾರಸ್ವಾಮಿಯವನ್ನು ಅಣ್ಣ ಅನ್ನುತ್ತಿದ್ದರು. ಈಗ ಮಂಡ್ಯದಲ್ಲಿ ಫೈಟ್ ಇರುವುದನ್ನು ನೋಡಿ, ಕುಮಾರಸ್ವಾಮಿ ಬದಲು ಡಿಕೆಶಿಯವರನ್ನು ಅಣ್ಣ ಎನ್ನಲು ಶುರುಮಾಡಿದ್ದಾರೆ - ಕುಮಾರ್ ಬಂಗಾರಪ್ಪ

ಬಳ್ಳಾರಿಯಲ್ಲಿ ಡಿಕೆಶಿ ಮ್ಯಾಜಿಕ್ ಮಾಡಿದ್ರು ಎಂದು ಶಿವಮೊಗ್ಗದಲ್ಲಿ ಸಾಧ್ಯವಿಲ್ಲ

ಬಳ್ಳಾರಿಯಲ್ಲಿ ಡಿಕೆಶಿ ಮ್ಯಾಜಿಕ್ ಮಾಡಿದ್ರು ಎಂದು ಶಿವಮೊಗ್ಗದಲ್ಲಿ ಸಾಧ್ಯವಿಲ್ಲ

ಮಧು ಬಂಗಾರಪ್ಪ ಬಳಸುವ ಪದ ರಾಜಕಾರಣದಿಂದ ದೂರ ಇರತಕ್ಕಂತಹ ಪದಗಳನ್ನು ಬಳಸುತ್ತಾರೆ. ಬಳ್ಳಾರಿಯಲ್ಲಿ ಡಿಕೆಶಿ ಮ್ಯಾಜಿಕ್ ಮಾಡಿದ್ರು ಎಂದು ಶಿವಮೊಗ್ಗದಲ್ಲಿ ಮಾಡಲು ಸಾಧ್ಯವಿಲ್ಲ. ಕ್ಷೇತ್ರದ ಹಾಲೀ ಸಂಸದ ಬಿ ವೈ ರಾಘವೇಂದ್ರ ಬಹಳಷ್ಟು ಅಭಿವೃದ್ದಿ ಕೆಲಸಗಳನ್ನು ಮಾಡಿದ್ದಾರೆ - ಕುಮಾರ್ ಬಂಗಾರಪ್ಪ.

ಜಿಲ್ಲೆಯ ಅನೇಕ ನೀರಾವರಿ ಯೋಜನೆ

ಜಿಲ್ಲೆಯ ಅನೇಕ ನೀರಾವರಿ ಯೋಜನೆ

ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲು ಮಾರ್ಗವನ್ನು ಎರಡೇ ತಿಂಗಳಲ್ಲಿ ನಮ್ಮ ಸಂಸದರು ಮಂಜೂರು ಮಾಡಿಕೊಂಡು ಬಂದಿದ್ದಾರೆ. ನಿತಿನ್ ಗಡ್ಕರಿಯವರನ್ನು ಭೇಟಿ ಸಿಗಂಧೂರು ರಸ್ತೆ ಮತ್ತು ಸೇತುವೆ ನಿರ್ಮಾಣಕ್ಕೆ ಹಣ ಮಂಜೂರು ಮಾಡಿಕೊಂಡು ಬಂದಿದ್ದಾರೆ. ಜಿಲ್ಲೆಯ ಅನೇಕ ನೀರಾವರಿ ಯೋಜನೆಗಳಿಗೆ, ಡಿಕೆ ಶಿವಕುಮಾರ್ ಅವರ ಬಳಿ, ಯಡಿಯೂರಪ್ಪನವರ ಜೊತೆ, ರಾಘವೇಂದ್ರ ಹೋಗಿರುವುದು ಗೊತ್ತೇ ಇದೆ. ಹಾಗಾಗಿ, ನಮ್ಮ ಅಭ್ಯರ್ಥಿ ಈ ಚುನಾವಣೆ ಗೆಲ್ಲುವುದರಲ್ಲಿ ಸಂಶಯವೇ ಬೇಡ ಎಂದು ಕುಮಾರ್ ಬಂಗಾರಪ್ಪ ಹೇಳಿದ್ದಾರೆ.

English summary
Loksabha elections 2019 - Shivamogga. BJP Leader and Soraba MLA Kumar Bangarappa lambasts his brother and JDS candidate Madhu Bangarappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X