ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ; ಆಸ್ತಿ ತೆರಿಗೆ ಪಾವತಿಗೆ ಹೊಸ ವ್ಯವಸ್ಥೆ

|
Google Oneindia Kannada News

ಶಿವಮೊಗ್ಗ, ಜೂನ್ 07; ಕೋವಿಡ್ ಹರಡುವಿಕೆ ನಿಯಂತ್ರಣಕ್ಕಾಗಿ ಸರ್ಕಾರ ಜೂನ್ 14ರ ತನಕ ಲಾಕ್‌ಡೌನ್ ವಿಸ್ತರಣೆ ಮಾಡಿದೆ. ಇದರಿಂದಾಗಿ ಶಿವಮೊಗ್ಗ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ 2021-22ನೇ ಸಾಲಿನ ಆಸ್ತಿ ತೆರಿಗೆ ಪಾವತಿಸಲು ಜನರು ಕಚೇರಿಗೆ ಬರಲು ಅವಕಾಶವಿಲ್ಲ.

ಆಸ್ತಿ ತೆರಿಗೆದಾರರು ಇರುವ ಸ್ಥಳಕ್ಕೇ ಪಾಲಿಕೆಯ ಕರ ವಸೂಲಿಗಾರರು ಬಂದು ಇಡಿಸಿ ಯಂತ್ರಗಳ ಮೂಲಕ ಆಸ್ತಿ ತೆರಿಗೆಯನ್ನು ಕಟ್ಟಿಸಿಕೊಳ್ಳುವ ವ್ಯವಸ್ಥೆಯನ್ನು ಮಾಡಲಾಗಿದೆ. ಲಾಕ್‌ಡೌನ್ ಅಂತ್ಯಗೊಂಡ ಬಳಿಕ ಪಾಲಿಕೆ ಆವರಣದಲ್ಲಿಯೇ ಕೌಂಟರ್‌ಗಳನ್ನು ತೆರೆಯಲಾಗುತ್ತದೆ.

ಹೊಸಪೇಟೆ; ಕೋವಿಡ್ ಪರಿಸ್ಥಿತಿ ನಡುವೆ ತೆರಿಗೆ ಹೆಚ್ಚಳದ ಬಿಸಿ ಹೊಸಪೇಟೆ; ಕೋವಿಡ್ ಪರಿಸ್ಥಿತಿ ನಡುವೆ ತೆರಿಗೆ ಹೆಚ್ಚಳದ ಬಿಸಿ

ಸರ್ಕಾರದ 30/6/2021ರ ಆದೇಶದ ಅನ್ವಯ ಆಸ್ತಿ ತೆರಿಗೆ ಪಾವತಿ ಮೇಲಿನ ಶೇ 5ರ ತೆರಿಗೆ ರಿಯಾಯಿತಿ ಸೌಲಭ್ಯದ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಜನರು ಈ ರಿಯಾಯಿತಿ ಸೌಲಭ್ಯವನ್ನು ಪಡೆದು ಆಸ್ತಿ ತೆರಿಗೆ ಪಾವತಿಸಬಹುದು.

ಆದಾಯ ತೆರಿಗೆ ಪಾವತಿಗೆ ಹೊಸ ವೆಬ್‌ತಾಣ ಏಕೆ? ಏನು? ಎತ್ತ? ಆದಾಯ ತೆರಿಗೆ ಪಾವತಿಗೆ ಹೊಸ ವೆಬ್‌ತಾಣ ಏಕೆ? ಏನು? ಎತ್ತ?

shivamogga

ಲಾಕ್‌ಡೌನ್ ಹಿನ್ನಲೆಯಲ್ಲಿ ಜನರು ಆಸ್ತಿ ತೆರಿಗೆಯನ್ನು ಮಹಾನಗರಪಾಲಿಕೆ ವೆಬ್‍ಸೈಟ್ ಮುಖಾಂತರ ಸಹ ಪಾವತಿ ಮಾಡಬಹುದು. ಯುಪಿಐ ಮೊಬೈಲ್ ಆ್ಯಪ್‍ಗಳಾದ ಪೇಟಿಎಂ, ಫೋನ್‍ ಪೇ, ಗೂಗಲ್ ಪೇ ಇತರೆ ಮೂಲಕ ಸಹ ತೆರಿಗೆ ಪಾವತಿ ಮಾಡಲು ಅವಕಾಶವಿದೆ.

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಕೊನೆ ದಿನಾಂಕ ವಿಸ್ತರಣೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಕೊನೆ ದಿನಾಂಕ ವಿಸ್ತರಣೆ

ಪಾಲಿಕೆಯಿಂದ ನೇಮಕವಾದ ಕರ ವಸೂಲಿಗಾರರು ಮನೆ ಮನೆಗೆ ತೆರಳಿ ತೆರಿಗೆಯನ್ನು ಪಡೆದು ರಸೀದಿಯನ್ನು ನೀಡಲಿದ್ದಾರೆ. ಆದ್ದರಿಂದ ಮಾಲೀಕರು ಇದರ ಸದುಪಯೋಗ ಪಡೆದು ಆಸ್ತಿ ತೆರಿಗೆ ಪಾವತಿಸಿ ಪಾಲಿಕೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಲಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಒಂದು ವಾರದಿಂದ ಸಂಪೂರ್ಣ ಲಾಕ್‌ಡೌನ್ ಜಾರಿಯಲ್ಲಿತ್ತು. ಪ್ರಸ್ತುತ ಸಂಪೂರ್ಣ ಲಾಕ್‌ಡೌನ್ ಅಂತ್ಯಗೊಂಡಿದ್ದು, ಜೂನ್ 14ರ ತನಕ ಸರ್ಕಾರ ಘೋಷಣೆ ಮಾಡಿರುವ ಲಾಕ್‌ಡೌನ್ ನಿಯಮಗಳು ಜಾರಿಯಲ್ಲಿರಲಿವೆ.

English summary
Shivamogga city corporation allowed people to pay property tax in home during the time of lockdown. Officials will come to home to collect tax.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X