ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಾಕ್ ಡೌನ್: ಶಿವಮೊಗ್ಗದಲ್ಲಿ ಅನ್ನಭಾಗ್ಯ ಅಕ್ಕಿ ಕಳ್ಳ ಸಾಗಣೆ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಏಪ್ರಿಲ್ 07: ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆಯಲ್ಲಿ ಇಡೀ ಭಾರತ ಲಾಕ್ ಡೌನ್ ಆಗಿದ್ದು, ಅಕ್ರಮವಾಗಿ ಅಕ್ಕಿ ಸಾಗಿಸುತ್ತಿದ್ದ ವಾಹನಗಳ ಮೇಲೆ ಎಸೆನ್ಷಿಯಲ್ ಸರ್ವೀಸ್ ಎಂದು ಬೋರ್ಡ್ ನಕಲಿ ಬೋರ್ಡ್ ಬಳಸಿ ಅನ್ನಭಾಗ್ಯ ಅಕ್ಕಿ ಕಳ್ಳಸಾಗಣೆ ಮಾಡುತ್ತಿದ್ದ‌ ಕಳ್ಳರನ್ನು ಬಂಧಿಸಿಲಾಗಿದೆ.

ಶಿವಮೊಗ್ಗ ಹೊರವಲಯದ ಕಲ್ಲೂರು ಮಂಡ್ಲಿಯ ಎರಡು ಕಡೆ ಆಹಾರ ಹಾಗೂ ಪೊಲೀಸ್ ಸಿಬ್ಬಂದಿ ದಾಳಿ ನಡೆಸಿ, 300 ಕ್ಕೂ ಹೆಚ್ಚು ಚೀಲ ಅನ್ನಭಾಗ್ಯ ಅಕ್ಕಿ ವಶ ಪಡಿಸಿಕೊಂಡಿದ್ದಾರೆ.

Lockdown: Annabhagya Rice Smuggling In Shivamogga

ಎರಡು ಕಡೆ ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಸಂಗ್ರಹಿಸಿ ಬೇರೆ ಬ್ರಾಂಡ್ ನಲ್ಲಿ ಅಕ್ಕಿ ಮಾರಾಟಕ್ಕೆ ಕಳ್ಳರು ಮುಂದಾಗಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ‌ ನಡೆಸಿದ ಆಹಾರ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಗಳು, ಈ ‌ದಾಳಿ ವೇಳೆ ಐದು ವಾಹನಗಳ ವಶ ಪಡಿಸಿಕೊಂಡಿದ್ದಾರೆ.

Lockdown: Annabhagya Rice Smuggling In Shivamogga

ವಾಹನಗಳ ಮೇಲೆ ಕೋವಿಡ್19 ಎಸೆನ್ಷಿಯಲ್ ಸರ್ವೀಸ್ ಎಂದು ನಕಲಿ ಬೋರ್ಡ್ ಹಾಕಿರುವ ಕದೀಮರು‌ ಕಳ್ಳಸಾಗಣೆ ಮಾಡುತ್ತಿದ್ದರು.

English summary
Thieves have been arrested for smuggling rice into a vehicle using a board duplicate board called the Corona Essential Service In Shivamogga District.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X