ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತವರಿನಲ್ಲಿಯೇ ಯಡಿಯೂರಪ್ಪಗೆ ಆಘಾತ: ಶಿಕಾರಿಪುರ ಪುರಸಭೆ ಕಾಂಗ್ರೆಸ್ ಪಾಲು

|
Google Oneindia Kannada News

Recommended Video

ತಮ್ಮ ಸ್ವಂತ ಕ್ಷೇತ್ರ ಶಿಕಾರಿಪುರದಲ್ಲಿ ಬಿ ಎಸ್ ಯಡಿಯೂರಪ್ಪಗೆ ಭಾರಿ ಮುಖಭಂಗ

ಶಿವಮೊಗ್ಗ, ಜೂನ್ 3: ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಮಗನ ಬಿ.ವೈ. ರಾಘವೇಂದ್ರ ಅವರ ಭರ್ಜರಿ ಗೆಲುವು ಹಾಗೂ ರಾಜ್ಯದಿಂದ 25 ಸಂಸದರು ಸಂಸತ್ ಪ್ರವೇಶಿಸಿದ ಖುಷಿಯಲ್ಲಿದ್ದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಗೆ ಭಾರಿ ಆಘಾತ ಎದುರಾಗಿದೆ.

ಬಿಜೆಪಿ ಮತಗಳು ಪ್ರಬಲವಾಗಿರುವ ಭದ್ರಕೋಟೆ ಸ್ವಕ್ಷೇತ್ರದಲ್ಲಿಯೇ ಅವರಿಗೆ ಮುಖಭಂಗ ಉಂಟಾಗಿದೆ. ಶಿಕಾರಿಪುರ ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಿದೆ.

ಸ್ಥಳೀಯ ಸಂಸ್ಥೆಗಳ ಚುನಾವಣೆ: ಗೆದ್ದು ಬೀಗಿದ ಕಾಂಗ್ರೆಸ್‌ ಸ್ಥಳೀಯ ಸಂಸ್ಥೆಗಳ ಚುನಾವಣೆ: ಗೆದ್ದು ಬೀಗಿದ ಕಾಂಗ್ರೆಸ್‌

ಪುರಸಭೆಯ 23 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕೇವಲ ಎಂಟು ವಾರ್ಡ್‌ಗಳಲ್ಲಿ ಜಯಗಳಿಸಲಷ್ಟೇ ಬಿಜೆಪಿ ಶಕ್ತವಾಗಿದೆ. ಇದರಿಂದ ಯಡಿಯೂರಪ್ಪ ಮತ್ತು ಬಿವೈ ರಾಘವೇಂದ್ರ ಅವರಿಗೆ ಮುಜುಗರ ಉಂಟಾಗಿದೆ.

ಶಿಕಾರಿಪುರ ಪುರಸಭೆ, ಸಾಗರ ನಗರಸಭೆ, ಹೊಸನಗರ, ಶಿರಾಳಕೊಪ್ಪ ಮತ್ತು ಸೊರಬ ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆ ನಡೆದಿತ್ತು. ಈ ಚುನಾವಣೆಗಳ ಮತದಾನದ ಎಣಿಕೆ ಸೋಮವಾರ ಬೆಳಿಗ್ಗೆ ಆರಂಭವಾಗಿತ್ತು. ಒಟ್ಟು 94 ವಾರ್ಡ್‌ಗಳಲ್ಲಿ 314 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

ಪುರಸಭೆ ಕಾಂಗ್ರೆಸ್ ತೆಕ್ಕೆಗೆ

ಪುರಸಭೆ ಕಾಂಗ್ರೆಸ್ ತೆಕ್ಕೆಗೆ

ಬಿಜೆಪಿಯ ಭದ್ರಕೋಟೆ ಎಂದೇ ಪರಿಗಣಿಸಲಾಗಿರುವ ಶಿಕಾರಿಪುರದಲ್ಲಿ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಾವುಟ ಹಾರಾಡಿದೆ. 23 ವಾರ್ಡ್‌ಗಳ ಪೈಕಿ, ಕಾಂಗ್ರೆಸ್ 12 ವಾರ್ಡ್‌ಗಳಲ್ಲಿ ಜಯಭೇರಿ ಬಾರಿಸಿದೆ. ಇನ್ನು ಮೂರು ವಾರ್ಡ್‌ಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆಲುವು ಕಂಡಿದ್ದಾರೆ. ಈ ಮೂಲಕ ಕಾಂಗ್ರೆಸ್ ಪುರಸಭೆಯ ಅಧಿಕಾರವನ್ನು ತನ್ನ ಕೈವಶ ಮಾಡಿಕೊಂಡಿದೆ.

ಸಾಗರದಲ್ಲಿ ಬಿಜೆಪಿ ಪತಾಕೆ

ಸಾಗರದಲ್ಲಿ ಬಿಜೆಪಿ ಪತಾಕೆ

ಸಾಗರ ನಗರಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಗೆದ್ದುಬೀಗಿದೆ. ಇಲ್ಲಿ 31 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 16ರಲ್ಲಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದಿದೆ. ಉಳಿದಂತೆ ಕಾಂಗ್ರೆಸ್ 9 ಕಡೆ ಗೆಲುವು ಕಂಡಿದ್ದರೆ, ಜೆಡಿಎಸ್ 1 ಮತ್ತು ಪಕ್ಷೇತರರು 5 ವಾರ್ಡ್‌ಗಳಲ್ಲಿ ಜಯಗಳಿಸಿದ್ದಾರೆ.

ಎಲ್ಲದಕ್ಕೂ ಮೋದಿ ಮೋದಿ ಅಂದರೆ ರಾಜ್ಯ ಬಿಜೆಪಿಗೆ ಆಗೋದು ಇದೇ ಗತಿ! ಎಲ್ಲದಕ್ಕೂ ಮೋದಿ ಮೋದಿ ಅಂದರೆ ರಾಜ್ಯ ಬಿಜೆಪಿಗೆ ಆಗೋದು ಇದೇ ಗತಿ!

ಮಧು ಬಂಗಾರಪ್ಪಗೆ ಮುಖಭಂಗ

ಮಧು ಬಂಗಾರಪ್ಪಗೆ ಮುಖಭಂಗ

ಸೊರಬ ಪಟ್ಟಣ ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅತ್ಯಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ವಿಧಾನಸಭೆ ಚುನಾವಣೆಯ, ಲೋಕಸಭೆ ಉಪ ಚುನಾವಣೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದ ಜೆಡಿಎಸ್‌ನ ಮಧು ಬಂಗಾರಪ್ಪ ಅವರಿಗೆ ಗೆಲುವಿನ ಭರವಸೆ ದೊರಕಿಲ್ಲ. ಸೊರಬ ಪಟ್ಟಣ ಪಂಚಾಯಿತಿಯಲ್ಲಿ 12 ಸ್ಥಾನಗಳ ಪೈಕಿ ಬಿಜೆಪಿ 6, ಕಾಂಗ್ರೆಸ್ 4 ಮತ್ತು ಜೆಡಿಎಸ್ 1 ಕ್ಷೇತ್ರಗಳಲ್ಲಿ ಗೆದ್ದಿದ್ದರೆ, ಇನ್ನೊಂದು ಸ್ಥಾನದಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

ಹೊಸನಗರದಲ್ಲಿ ಮೈತ್ರಿಗೆ ಮೇಲುಗೈ

ಹೊಸನಗರದಲ್ಲಿ ಮೈತ್ರಿಗೆ ಮೇಲುಗೈ

ಹೊಸನಗರ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಜಯಗಳಿಸುವ ಮೂಲಕ ಅಧಿಕಾರದ ಗದ್ದುಗೆ ಏರಿದೆ. ಇಲ್ಲಿನ 11 ವಾರ್ಡ್‌ಗಳ ಪೈಕಿ ಏಳು ವಾರ್ಡ್‌ಗಳಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಗಳು ಗೆದ್ದಿದ್ದಾರೆ. ಬಿಜೆಪಿ ಅಭ್ಯರ್ಥಿಗಳು ನಾಲ್ಕು ಕಡೆ ಗೆದ್ದಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್‌ ಕ್ರಮವಾಗಿ ನಾಲ್ಕು ಹಾಗೂ ಮೂರು ವಾರ್ಡ್‌ಗಳಲ್ಲಿ ಗೆಲುವು ಕಂಡಿವೆ.

ಸ್ಥಳೀಯ ಸಂಸ್ಥೆಗಳ ಚುನಾವಣೆ 2019 : ಸಂಪೂರ್ಣ ಫಲಿತಾಂಶ ಸ್ಥಳೀಯ ಸಂಸ್ಥೆಗಳ ಚುನಾವಣೆ 2019 : ಸಂಪೂರ್ಣ ಫಲಿತಾಂಶ

ಶಿರಾಳಕೊಪ್ಪದಲ್ಲಿಯೂ ಕಹಿ

ಶಿರಾಳಕೊಪ್ಪದಲ್ಲಿಯೂ ಕಹಿ

ಶಿರಾಳಕೊಪ್ಪ ಪಟ್ಟಣ ಪಂಚಾಯಿಗೆ ನಡೆದ ಚುನಾವಣೆಯಲ್ಲಿ ಸಹ ಬಿಜೆಪಿ ಸೋಲಿನ ಕಹಿ ಅನುಭವಿಸಿದೆ. 17 ವಾರ್ಡ್‌ಗಳ ಪೈಕಿ ಬಿಜೆಪಿ ಕೇವಲ ಎರಡು ಕಡೆ ಗೆದ್ದಿದೆ. ಕಾಂಗ್ರೆಸ್ 7 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದ್ದರೆ, ಜೆಡಿಎಸ್ 3 ಕಡೆ ಗೆದ್ದಿದೆ. ಇನ್ನು 5 ವಾರ್ಡ್‌ಗಳು ಪಕ್ಷೇತರರ ಪಾಲಾಗಿವೆ.

English summary
Local body polls: BJP leader BS Yeddyurappa faced a shock in Shikaripur Purasabhe elections as Congress come to power.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X