ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತೀರ್ಥಹಳ್ಳಿ; ಕೋವಿಡ್ ಸೋಂಕಿತರ ಅಂತ್ಯ ಸಂಸ್ಕಾರಕ್ಕೆ ವಿನೂತನ ಪ್ರಯತ್ನ

|
Google Oneindia Kannada News

ಶಿವಮೊಗ್ಗ, ಆಗಸ್ಟ್ 26 : ಕರ್ನಾಟಕದಲ್ಲಿ ಇದುವರೆಗೂ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 4958. ಕೋವಿಡ್‌ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರದ ವಿಚಾರದಲ್ಲಿ ಹಲವು ಚರ್ಚೆಗಳು ನಡೆದಿವೆ. ಕುಟುಂಬಸ್ಥರೇ ಶವವನ್ನು ಪಡೆಯದ ಘಟನೆಗಳು ನಮ್ಮ ಮುಂದಿವೆ.

Recommended Video

ಕೊನೆಗೂ Africa , Polioದಿಂದ ಮುಕ್ತ | Oneindia Kannada

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ಸಮಾನ ಮಾನಸ್ಕರು ಸೇರಿ ವಿನೂತನ ಪ್ರಯತ್ನ ಮಾಡಿದ್ದಾರೆ. ಕೋವಿಡ್‌ನಿಂದ ಜನರು ಮೃತಪಟ್ಟರೆ ಅಂತ್ಯ ಸಂಸ್ಕಾರ ಮಾಡಲು ತಂಡ ರಚನೆ ಮಾಡಲಾಗಿದೆ. ಕೋವಿಡ್‌ ಸೋಂಕಿತರ ಕುಟುಂಬದವರು ಅಂತ್ಯಕ್ರಿಯೆ ನಡೆಸಲು ನಿರಾಕರಿಸಿದರೆ ಈ ತಂಡ ಅವರ ಧರ್ಮದ ನಿಯಮದಂತೆ ಅಂತ್ಯ ಸಂಸ್ಕಾರ ಮಾಡುತ್ತದೆ.

24 ಗಂಟೆಗಳಲ್ಲೇ 60975 ಜನಕ್ಕೆ ಕೊವಿಡ್-19 ಸೋಂಕು, 848 ಮಂದಿ ಸಾವು!24 ಗಂಟೆಗಳಲ್ಲೇ 60975 ಜನಕ್ಕೆ ಕೊವಿಡ್-19 ಸೋಂಕು, 848 ಮಂದಿ ಸಾವು!

ಸೊಪ್ಪುಗುಡ್ಡೆ ರಾಘವೇಂದ್ರ ನೇತೃತ್ವದ ಈ ತಂಡ ರಚನೆಗೊಂಡು ಸುಮಾರು 10 ದಿನಗಳು ಕಳೆದಿವೆ. 7 ರಿಂದ 8 ಜನ ಸಮಾನ ಮಾನಸ್ಕರು ಸೇರಿ ರಚನೆ ಮಾಡಿದ ತಂಡವಿದಾಗಿದೆ. ಈಗಾಗಲೇ ಕೋವಿಡ್ ಸೋಂಕಿತರ ಎರಡು ಶವಗಳ ಅಂತ್ಯ ಸಂಸ್ಕಾರವನ್ನು ಈ ತಂಡ ಮಾಡಿದೆ.

 ಕಾಂಗ್ರೆಸ್ ನಾಯಕಿ ಮಗಳ ಸಾವು; ತಂದೆಯಿಂದ ದೂರು ಕಾಂಗ್ರೆಸ್ ನಾಯಕಿ ಮಗಳ ಸಾವು; ತಂದೆಯಿಂದ ದೂರು

ಒನ್ ಇಂಡಿಯಾ ಕನ್ನಡದ ಜೊತೆ ಸೊಪ್ಪುಗುಡ್ಡೆ ರಾಘವೇಂದ್ರ ಈ ತಂಡದ ಬಗ್ಗೆ ಮಾತನಾಡಿದರು. "ಕೋವಿಡ್‌ನಿಂದ ಜನರು ಮೃತಪಟ್ಟರೆ ಕೆಲವು ಪ್ರಕರಣಗಳಲ್ಲಿ ಅಂತ್ಯ ಸಂಸ್ಕಾರ ಮಾಡಲು ಕುಟುಂಬದವರು ಹಿಂದೇಟು ಹಾಕುತ್ತಾರೆ. ಅಂತಹ ಸಂದರ್ಭದಲ್ಲಿ ನಾವು ಅವರ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ಮಾಡುತ್ತೇವೆ" ಎಂದು ಹೇಳಿದರು.

ಕೆಲವು ಕೋವಿಡ್ ಕೇರ್ ಸೆಂಟರ್‌ ಮುಚ್ಚಲಿದೆ ಬಿಬಿಎಂಪಿ ಕೆಲವು ಕೋವಿಡ್ ಕೇರ್ ಸೆಂಟರ್‌ ಮುಚ್ಚಲಿದೆ ಬಿಬಿಎಂಪಿ

ಸಂಪ್ರದಾಯದಂತೆ ಶವ ಸಂಸ್ಕಾರ

ಸಂಪ್ರದಾಯದಂತೆ ಶವ ಸಂಸ್ಕಾರ

"ಇಷ್ಟು ದಿನ ಜಿಲ್ಲಾ ಆಸ್ಪತ್ರೆಯಲ್ಲಿ ಶವಗಳನ್ನು ಕೊಡುತ್ತಿರಲಿಲ್ಲ. ಈಗ ಕೊಡುತ್ತಿದ್ದಾರೆ, ನಾವು ಕುಟುಂಬ ಸದಸ್ಯರಿಗೆ ಅಂತ್ಯ ಸಂಸ್ಕಾರ ಮಾಡಲು ಮನವಿ ಮಾಡುತ್ತೇವೆ. ಅವರು ನಿರಾಕರಿಸಿದರೆ ಮಾತ್ರ ನಾವು ಶವ ಸಂಸ್ಕಾರ ಮಾಡುತ್ತೇವೆ" ಎಂದು ಸೊಪ್ಪುಗುಡ್ಡೆ ರಾಘವೇಂದ್ರ ವಿವರಿಸಿದರು.

ಸಮಾನ ಮನಸ್ಕರ ತಂಡ

ಸಮಾನ ಮನಸ್ಕರ ತಂಡ

"ನಮ್ಮದು ಸಮಾನ ಮನಸ್ಕರ ತಂಡ ಕೋವಿಡ್ ಆರಂಭವಾದ ಸಂದರ್ಭದಲ್ಲಿ ನಾವು ಅಗತ್ಯವಿರುವ ಜನರಿಗೆ ಆಹಾರದ ಪೊಟ್ಟಣಗಳನ್ನು ಹಂಚಿಕೆ ಮಾಡುತ್ತಿದ್ದೆವು. ಇದೇ ತಂಡ ಈಗ ಅಂತ್ಯ ಸಂಸ್ಕಾರ ಮಾಡುವ ಕಾರ್ಯವನ್ನು ಮಾಡುತ್ತಿದೆ. ಈಗಾಗಲೇ 2 ಅಂತ್ಯ ಸಂಸ್ಕಾರಗಳನ್ನು ಮಾಡಿದ್ದೇವೆ" ಎಂದು ಸೊಪ್ಪುಗುಡ್ಡೆ ರಾಘವೇಂದ್ರ ವಿವರಿಸಿದರು.

ನಾವು ಮುಂಜಾಗ್ರತೆ ಕೈಗೊಂಡಿದ್ದೇವೆ

ನಾವು ಮುಂಜಾಗ್ರತೆ ಕೈಗೊಂಡಿದ್ದೇವೆ

"ನಾವು ಕುಟುಂಬದವರಿಗೆ ಪಿಪಿಇ ಕಿಟ್ ನೀಡಿ ಅಂತ್ಯ ಸಂಸ್ಕಾರ ಮಾಡಲು ಅವಕಾಶ ನೀಡುತ್ತೇವೆ. ಅವರು ನಿರಾಕರಿಸಿದರೆ ಮಾತ್ರ ನಾವು ಮಾಡುತ್ತೇವೆ. ನಾವು ಸಹ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಅಂತ್ಯ ಸಂಸ್ಕಾರ ಮಾಡುತ್ತೇವೆ" ಎಂದು ಸೊಪ್ಪುಗುಡ್ಡೆ ರಾಘವೇಂದ್ರ ಹೇಳಿದರು.

ಜನರು, ಶಾಸಕರ ಶ್ಲಾಘನೆ

ಜನರು, ಶಾಸಕರ ಶ್ಲಾಘನೆ

ಸಮಾನ ಮನಸ್ಕರು ಸೇರಿ ಮಾಡುತ್ತಿರುವ ಕಾರ್ಯಕ್ಕೆ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಸೇರಿದಂತೆ ಹಲವಾರು ಜನರು ಮೆಚ್ಚುಗೆ ಸೂಚಿಸಿದ್ದಾರೆ. ಇಂತಹ ಕಾರ್ಯಗಳು ಬೇರೆಯವರಿಗೂ ಮಾದರಿಯಾಗಲಿ ಎಂಬುದು ನಮ್ಮ ಹಾರೈಕೆಯಾಗಿದೆ. ಆಗಸ್ಟ್ 25ರ ವರದಿಯಂತೆ ಶಿವಮೊಗ್ಗ ಜಿಲ್ಲೆಯಲ್ಲಿನ ಕೋವಿಡ್ ಸೋಂಕಿತರ ಒಟ್ಟು ಸಂಖ್ಯೆ 6729.

English summary
Like minded people team formed in Shivamogga district Thirthahalli to perform last rites of the COVID victim body. Raghavendra Soppugudde leading the team.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X