ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪರೀಕ್ಷಾ ಶುಲ್ಕ ಪಾವತಿ, ಪರೀಕ್ಷೆ ಕುರಿತಂತೆ ಕುವೆಂಪು ವಿವಿಯಿಂದ ಮಹತ್ವದ ಪ್ರಕಟಣೆ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಜೂನ್ 24: ಕೊರೊನಾ ವೈರಸ್ ಕಾರಣದಿಂದ ಎಲ್ಲಾ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಈ ನಡುವೆ ಕುವೆಂಪು ವಿಶ್ವವಿದ್ಯಾಲಯದ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಸೆಮಿಸ್ಟರ್ ಪರೀಕ್ಷಾ ಶುಲ್ಕ ಭರಿಸಲು ನೀಡಲಾಗಿದ್ದ ಕೊನೆಯ ದಿನಾಂಕವನ್ನು ಜುಲೈ 7 ರ ವರೆಗೆ ವಿಸ್ತರಿಸಲಾಗಿದೆ.

ವಿಶ್ವವಿದ್ಯಾಲಯದ ಎಲ್ಲ ಸ್ನಾತಕೋತ್ತರ ಪದವಿ ಪರೀಕ್ಷೆಗಳಿಗೆ ಶುಲ್ಕ ಭರಿಸಲು ಜೂನ್ 23 ರಂದು ಕೊನೆಯ ದಿನವಾಗಿತ್ತು. ಇದೀಗ ‌ವಿದ್ಯಾರ್ಥಿಗಳಿಗೆ ಯಾವುದೇ ವಿಳಂಬ ಶುಲ್ಕವಿಲ್ಲದೆ ಪರೀಕ್ಷಾ ಶುಲ್ಕ ಭರಿಸಲು ಜುಲೈ 7 ರ ವರೆಗೆ ಕಾಲಾವಕಾಶ ನೀಡಲಾಗಿದೆ.

ಕಲ್ಲೊಡ್ಡು ಬದಲು ಪರ್ಯಾಯ ನೀರಾವರಿ ಯೋಜನೆ: ಬಿ.ವೈ ರಾಘವೇಂದ್ರಕಲ್ಲೊಡ್ಡು ಬದಲು ಪರ್ಯಾಯ ನೀರಾವರಿ ಯೋಜನೆ: ಬಿ.ವೈ ರಾಘವೇಂದ್ರ

ಇನ್ನುಳಿದಂತೆ ಬಿ.ಎ, ಬಿ.ಎಸ್ಸಿ, ಬಿ.ಕಾಂ, ಬಿಬಿಎಂ, ಬಿಬಿಎ, ಬಿಟಿಎ, ಬಿಸಿಎ, ಬಿಎಸ್ ಡಬ್ಲ್ಯೂ, ಬಿ.ಎಸ್ಸಿ (ಆನರ್ಸ್), ಬಿ.ಎಡ್, ಹಾಗೂ ಬಿಪಿಎಡ್ ಸ್ನಾತಕ ಪದವಿಗಳ ಪರೀಕ್ಷೆಗೆ ಶುಲ್ಕ ಭರಿಸಲು ಈಗಾಗಲೇ ಅವಧಿ ಮುಕ್ತಾಯವಾಗಿದ್ದು, ಇದುವರೆಗೂ ಶುಲ್ಕ ಪಾವತಿಸದ ವಿದ್ಯಾರ್ಥಿಗಳು ಕೂಡ ಜುಲೈ 7 ರ ವರೆಗೆ ಪರೀಕ್ಷಾ ಶುಲ್ಕ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಪರೀಕ್ಷಾಂಗ ಕುಲಸಚಿವ ಪ್ರೊ.ಎಂ ವೆಂಕಟೇಶ್ವರಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Kuvempu University Released Notification Regarding Exam And Exam Fee Payment

ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ)ದ ನಿಬಂಧನೆಗಳಿಗೆ ಒಳಪಟ್ಟು ಪರೀಕ್ಷಾ ಶುಲ್ಕ ಪಾವತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಯಾವುದೇ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ ಭರಿಸಲು ತಾಂತ್ರಿಕ ಅಥವಾ ಇನ್ನಿತರೆ ಸಮಸ್ಯೆಗಳಿದ್ದಲ್ಲಿ ವಿವಿಯ ಪರೀಕ್ಷಾಂಗ ಕುಲಸಚಿವರ ಅನುಮತಿಯ ಮೇರೆಗೆ ಪರೀಕ್ಷಾ ಶುಲ್ಕ ಪಾವತಿಸಬಹುದು ಎಂದು ತಿಳಿಸಿದ್ದಾರೆ.

ತುಂಗಾ ಜಲಾಶಯ ಭರ್ತಿಗೆ 1 ಅಡಿ ಬಾಕಿ; 2000 ಕ್ಯೂಸೆಕ್ ನೀರು ನದಿಗೆತುಂಗಾ ಜಲಾಶಯ ಭರ್ತಿಗೆ 1 ಅಡಿ ಬಾಕಿ; 2000 ಕ್ಯೂಸೆಕ್ ನೀರು ನದಿಗೆ

ಪರೀಕ್ಷೆಗಳನ್ನು ನಡೆಸಲು ಕುವೆಂಪು ವಿಶ್ವವಿದ್ಯಾಲಯ ಸಂಪೂರ್ಣ ಸನ್ನದ್ಧವಾಗಿದೆ. ಸರ್ಕಾರದ ಸೂಚನೆ ಬಂದ ಬಳಿಕ ವಿದ್ಯಾರ್ಥಿಗಳಿಗೆ ಸೂಕ್ತ ಕಾಲಾವಕಾಶ ನೀಡಿ ಪರೀಕ್ಷೆಗಳನ್ನು ನಡೆಸಲಾಗುವುದು. ಆದ್ದರಿಂದ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕವನ್ನು ಎಂದಾದರೂ ಪಾವತಿಸಲೇಬೇಕು.

Kuvempu University Released Notification Regarding Exam And Exam Fee Payment

ಈ ವಿಷಯದಲ್ಲಿ ಯಾವುದೇ ರೀತಿಯ ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಏಪ್ರಿಲ್-ಮೇ ತಿಂಗಳಲ್ಲಿ ಪರೀಕ್ಷೆ ನಡೆಯಬೇಕಿತ್ತು. ಆದರೆ ಈಗ ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ಪರೀಕ್ಷೆ ನಡೆಯುವ ಸಾಧ್ಯತೆ ಇದ್ದು, ಡಿಗ್ರಿ 2, 4, 6 ನೇ ಸೆಮಿಸ್ಟರ್ ಪರೀಕ್ಷೆ ನಡೆಯಬೇಕಿದೆ. ಸೆಮಿಸ್ಟರ್ ಮುಂದೆ ಹೋದರೆ ಮುಂದಿನ ವರ್ಷದ ಶೈಕ್ಷಣಿಕ ಅವಧಿಯು ಮುಂದೆ ಹೋಗಲಿದೆ. ಏನಾದರೂ ಆಗಲಿ ವಿದ್ಯಾರ್ಥಿಗಳು ತಮ್ಮ ಸಿದ್ಧತೆ ತಾವು ಮಾಡಿಕೊಂಡರೆ ಒಳಿತು.

English summary
The deadline for undergraduate and postgraduate students of the University of Kuvempu to pay the semester exam fee has been extended to July 7.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X