ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೈಚಾರಿಕ ದಿನವಾಗಲಿದೆ ಕುವೆಂಪು ಜನ್ಮದಿನಾಚರಣೆ

|
Google Oneindia Kannada News

ಬೆಂಗಳೂರು, ಡಿ. 30 : ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನವನ್ನು ವೈಚಾರಿಕ ದಿನವನ್ನಾಗಿ ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮಾನವ ಕುಲಕ್ಕೆ ಮಾರ್ಗದರ್ಶನ ನೀಡಿದ ಕುವೆಂಪು ಅವರ ಆದರ್ಶಗಳು ಸಾರ್ವಕಾಲಿಕ. ಈ ಹಿನ್ನೆಲೆಯಲ್ಲಿ ಇನ್ನುಮುಂದೆ ಕುವೆಂಪು ಅವರ ಜನ್ಮದಿನವನ್ನು ವೈಚಾರಿಕ ದಿನವನ್ನಾಗಿ ಸರ್ಕಾರದಿಂದಲೇ ಆಚರಿಸಲಾಗುವುದು ಎಂದು ತಿಳಿಸಿದರು.

ಸೋಮವಾರ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ತೀರ್ಥಹಳ್ಳಿ ತಾಲೂಕಿನ ಕುಪ್ಪಳಿಯಲ್ಲಿ ಆಯೋಜಿಸಿದ್ದ ಕುವೆಂಪು ಅವರ 110ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಕುವೆಂಪು ಅವರ ಪುಣ್ಯಭೂಮಿ ಕವಿಶೈಲ ನಿಜಕ್ಕೂ ಒಂದು ಸ್ಫೂರ್ತಿಧಾಮವಾಗಿದೆ. ಇದನ್ನು ನೋಡುವ ಭಾಗ್ಯ ಇಂದು ತಮಗೆ ಸಿಕ್ಕಿತು ಎಂದು ಹೇಳಿದರು.

Siddaramaiah

ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು, ಇದು ಬದಲಾವಣೆಯ ಕಾಲ. ಕುವೆಂಪು ಅವರ ಆಶಯದಂತೆ ಕುವೆಂಪು ಅವರ ನೆಲವಾದ ಕುಪ್ಪಳಿಯಿಂದಲೇ ಸಾಮಾಜಿಕ ಬದಲಾವಣೆಗೆ ನಾಂದಿಯಾಗಬೇಕು ಎಂದರು. ಜಾತ್ಯತೀತ ವ್ಯವಸ್ಥೆಯಲ್ಲಿ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸಮಾನತೆ ಸಿಗಬೇಕೆಂಬುದು ಕುವೆಂಪು ಅವರ ಆಶಯವಾಗಿತ್ತು ಎಂದು ಕಾಗೋಡು ತಿಮ್ಮಪ್ಪ ತಿಳಿಸಿದರು. [ನಾಡಗೀತೆಗೆ ಕತ್ತರಿ ಪ್ರಯೋಗ ವಾಗಲಿದೆಯೇ?]

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರು ಮಾತನಾಡಿ, ಕನ್ನಡದ ಬಗೆಗಿನ ತಿರಸ್ಕಾರ ಮನೋಭಾವ ಹೋಗಬೇಕಾದರೆ ಮುಂದಿನ ಪೀಳಿಗೆಗೆ ಕುವೆಂಪು ಕುರಿತಾದ ಅಧ್ಯಯನ ಅಗತ್ಯವಾಗಿದೆ ಎಂದರು.

ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಹಂ.ಪ.ನಾಗರಾಜಯ್ಯ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್, ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ, ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Tirthahalli

ಪ್ರೌಢ ಶಾಲೆಗೆ ಯುಆರ್‌ಎ ಹೆಸರು : ತೀರ್ಥಹಳ್ಳಿ ಪಟ್ಟ­ಣದ ಸರ್ಕಾರಿ ಪ್ರೌಢಶಾಲೆಗೆ ಜ್ಞಾನ­ಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಯು.­ಆರ್‌. ಅನಂತಮೂರ್ತಿ ಅವರ ಹೆಸರನ್ನು ಇಡಲಾಗಿದೆ. ಮುಖ್ಯ­ಮಂತ್ರಿ ಸಿದ್ದರಾಮಯ್ಯ ಸೋಮವಾರ ಈ ನಾಮಕರಣ ನೆರವೇರಿಸಿದರು.

English summary
Karnataka Chief Minister Siddaramaiah announced that the government would observe the birth anniversary of Rashtrakavi Kuvempu as Rational Day from next year. CM participated in 110th birth anniversary of the poet, organized by the Rashtrakavi Kuvempu Foundation, at Kuppali in Tirthahalli taluk on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X