ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮಮ್ಮನ ಏಟು ತಿಂದೇ ಈ ಮಟ್ಟಕ್ಕೆ ಬಂದೆ ಎಂದ ಈಶ್ವರಪ್ಪ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

Recommended Video

ನಮ್ಮ ಅಮ್ಮ ಸರಿಯಾಗಿ ಕೆನ್ನೆಗೆ ಬಾರಿಸಿದ್ರು ಎಂದ ಈಶ್ವರಪ್ಪ. | K.S.eshwarappa

ಶಿವಮೊಗ್ಗ, ಸೆಪ್ಟೆಂಬರ್ 18: "ನಾನು ಎಸ್ಸೆಸ್ಸೆಲ್ಸಿಯಲ್ಲಿ ಫೇಲಾದಾಗ ನನ್ನ ಅಮ್ಮ ನನಗೆ ಕಪಾಳಕ್ಕೆ ಹೊಡೆದಿದ್ದರು" ಎಂದು ಸಚಿವ ಕೆ.ಎಸ್. ಈಶ್ವರಪ್ಪ ಸಮಸ್ಯೆ ಕುರಿತು ಮನವಿ ನೀಡಲು ಬಂದಿದ್ದ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಬುದ್ಧಿಮಾತು ಹೇಳಿದ್ದಾರೆ.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಭೆ ಮುಗಿಸಿ ಹೊರಬಂದ ಸಚಿವ ಈಶ್ವರಪ್ಪನವರ ಬಳಿ ಬಂದ ಹಾಸ್ಟೆಲ್ ವಿದ್ಯಾರ್ಥಿಗಳು ತಮ್ಮ ಸಮಸ್ಯೆ ಬಗೆಹರಿಸಿಕೊಡುವಂತೆ ಮನವಿ ಮಾಡಿದರು. ಪ್ರತಿಭಟನೆ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.

"ಸಿದ್ದರಾಮಯ್ಯ ವಡ್ಡ ದಡ್ಡ" ಎಂದು, ತಕ್ಷಣ ವರಸೆ ಬದಲಿಸಿದ ಈಶ್ವರಪ್ಪ

ವಿದ್ಯಾರ್ಥಿಗಳನ್ನು ಮೂಲ ಹಾಸ್ಟೆಲ್ ನಿಂದ ಸ್ಥಳಾಂತರ ಮಾಡಿ ಬೇರೆಡೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಮೂಲ ಹಾಸ್ಟೆಲ್ ಗೆ ಸ್ಥಳಾಂತರ ಮಾಡುವಂತೆ ವಿದ್ಯಾರ್ಥಿಗಳು ಮನವಿ ಮಾಡಿದರು.

KS Eshwarappa Visited Hostel In Shivamogga And Spoke With Students

ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಈಶ್ವರಪ್ಪ, "ನೀವಿದ್ದ ಹಾಸ್ಟೆಲ್ ಕಟ್ಟಡ ಶಿಥಿಲಗೊಂಡಿದೆ. ಅದಕ್ಕಾಗಿ ಅಧಿಕಾರಿಗಳು ಹೊಸ ಕಟ್ಟಡಕ್ಕೆ ಕಳುಹಿಸಿಕೊಟ್ಟಿದ್ದಾರೆ. ನೀವಿದ್ದ ಕಟ್ಟಡದಲ್ಲಿ ಅವಘಡ ಸಂಭವಿಸಿದರೆ ಯಾರು ಜವಾಬ್ದಾರಿ?" ಎಂದು ಹೇಳಿದರು.

ಬಿಜೆಪಿಗೆ ಮತ ಹಾಕದ ಮುಸ್ಲಿಮರು ದೇಶದ್ರೋಹಿಗಳು ಎಂದ ಈಶ್ವರಪ್ಪಬಿಜೆಪಿಗೆ ಮತ ಹಾಕದ ಮುಸ್ಲಿಮರು ದೇಶದ್ರೋಹಿಗಳು ಎಂದ ಈಶ್ವರಪ್ಪ

ವಿದ್ಯಾರ್ಥಿಗಳ ಓದಿಗೆ ಸಂಬಂಧಿಸಿದಂತೆ ಬುದ್ಧಿ ಹೇಳಿ, "ನಾನು ಎಸ್ಸೆಸ್ಸೆಲ್ಸಿ ಫೇಲಾದಾಗ ನನಗೂ ನಮ್ಮಮ್ಮ ಕಪಾಳಕ್ಕೆ ಹೊಡೆದು ಬುದ್ಧಿವಾದ ಹೇಳಿ ಶಾಲೆಗೆ ಕಳುಹಿಸಿದ್ದರು. ಈ ಕಾರಣದಿಂದಲೇ ನಾನು ಇಂದು ಈ ಸ್ಥಾನದಲ್ಲಿದ್ದೇನೆ. ನಿಮ್ಮ ಬಗ್ಗೆ ನಿಮ್ಮ ಪೋಷಕರು ನಂಬಿಕೆಯಿಂದ ಹಾಸ್ಟೆಲ್ ನಲ್ಲಿ ಬಿಟ್ಟಿದ್ದಾರೆ. ಕೆಲದಿನಗಳ ಮಟ್ಟಿಗೆ ನೀವು ಅದೇ ಹಾಸ್ಟೇಲ್ ನಲ್ಲಿ ಇರಿ" ಎಂದು ಹೇಳಿ ಶೀಘ್ರವೇ ಸಮಸ್ಯೆ ಬಗೆಹರಿಸುವುದಾಗಿ ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು.

English summary
"My mother slapped me when I failed in sslc exam. Thats the reason i came to this level" said minister K.S.eshwarappa to the hostel students in shivamogga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X