ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಎಂ ತವರೂರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಂಚಲನ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಜುಲೈ 16: ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಶಿಕಾರಿಪುರ ಪ್ರವಾಸ ಕೈಗೊಂಡಿದ್ದು, ಬೇಗೂರು ಮರಡಿ ತಾಂಡಾದಲ್ಲಿ ಲಂಬಾಣಿ ಸಮುದಾಯದವರ ಜೊತೆಗೆ ಸಂವಾದ ನಡೆಸಿದರು. ಈ ವೇಳೆ ಹಲವು ವಿಚಾರಗಳನ್ನು ಪ್ರಸ್ತಾಪಿಸಿದರು.

ಡಿಕೆಶಿ ಏನೇನು ಹೇಳಿದರು?
"ಅರಣ್ಯ ಹಕ್ಕು ಕಾಯಿದೆಗೆ ತಿದ್ದುಪಡಿ ತರುವುದಕ್ಕೆ ಕಂದಾಯ ಭೂಮಿ ಅರಣ್ಯ ಇಲಾಖೆಗೆ ಇಂಡೀಕರಣ ಮಾಡಿರುವುದರ ವಿರುದ್ಧ ಕೇಂದ್ರ, ರಾಜ್ಯದಲ್ಲಿ ಹೋರಾಟ ಮಾಡಿ ರೈತರಿಗೆ ಅನುಕೂಲ ಕಲ್ಪಿಸುವುದಕ್ಕೆ ಕಾಂಗ್ರೆಸ್ ಕ್ರಮ ಕೈಗೊಳ್ಳುತ್ತದೆ.''

 ನಳಿನ್ ಕುಮಾರ್ ಕಟೀಲ್‌ರನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿದ ಡಿ.ಕೆ. ಶಿವಕುಮಾರ್ ನಳಿನ್ ಕುಮಾರ್ ಕಟೀಲ್‌ರನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿದ ಡಿ.ಕೆ. ಶಿವಕುಮಾರ್

ಸಹೋದರನ ಮೂಲಕ ಸಂಸತ್‌ನಲ್ಲಿ ಧ್ವನಿ
"ಅರಣ್ಯ ಹಕ್ಕು ಕಾಯಿದೆಯಲ್ಲಿ ಮೂರು ತಲೆಮಾರಿನ ದಾಖಲೆ ನೀಡಬೇಕು ಎನ್ನುವ ಕಾರಣಕ್ಕೆ ದೊಡ್ಡ ಪ್ರಮಾಣದ ಬಡವರಿಗೆ ಭೂಮಿ ಹಕ್ಕು ಸಿಗಲು ಸಾಧ್ಯವಾಗಿಲ್ಲ. ಅದು ಕಡಿಮೆ ಮಾಡುವುದಕ್ಕೆ ಸಹೋದರ ಸುರೇಶ್ ಮೂಲಕ ಸಂಸತ್‌ನಲ್ಲಿ ಧ್ವನಿಯೆತ್ತುವುದಲ್ಲದೆ ಪಕ್ಷದ ಮೂಲಕವೂ ಕೇಂದ್ರದ ಮೇಲೆ ಒತ್ತಡ ಹೇರಲಾಗುವುದು.''

Shivamogga: KPCC President DK Shivakumar Talks With Lambani Community In Shikaripura

ರಾಜ್ಯದಲ್ಲೂ ಹೋರಾಟದ ಭರವಸೆ
"ಕಂದಾಯ ಭೂಮಿ ಇಂಡೀಕರಣ ಮೂಲಕ ಅರಣ್ಯ ಇಲಾಖೆಗೆ ಹೋಗಿರುವುದು ಸರಿಯಲ್ಲ. ಈ ಎರಡು ಕಾರಣಕ್ಕೆ ವಸತಿ ಪ್ರದೇಶದಲ್ಲಿನ ಜನರಿಗೆ ಮನೆಗೆ ಹಕ್ಕು ಪತ್ರ, ಉಳುಮೆ ಮಾಡಿರುವ ರೈತರಿಗೆ ಜಮೀನಿನ ಹಕ್ಕುಪತ್ರ ಸಿಗುತ್ತಿಲ್ಲ."

"ಬಹುತೇಕ ತಾಂಡಾ ವಸತಿ ಪ್ರದೇಶ ಅರಣ್ಯ ಭೂಮಿಯಲ್ಲಿದ್ದು, ಅವುಗಳ ಸಕ್ರಮಗೊಳಿಸಿ ಕಂದಾಯ ಗ್ರಾಮ ಮಾಡುವುದಕ್ಕೆ ಕಾಯಿದೆಯಲ್ಲಿ ತಿದ್ದುಪಡಿ ತರುವುದಕ್ಕೆ ರಾಜ್ಯದಲ್ಲೂ ಹೋರಾಟ ಮಾಡಲಾಗುವುದು. ಈಗಿನ ಸಮಸ್ಯೆಗೆ ಯಾವುದೇ ಪಕ್ಷ ಕಾರಣವಾಗಿದೆ ಎಂದು ದೂರುವ ಬದಲು ಸಮಸ್ಯೆ ಪರಿಹಾರ ಆಗಬೇಕು ಅದಕ್ಕಾಗಿ ಕೆಲಸ ಮಾಡುತ್ತೇನೆ. ಸಮಸ್ಯೆ ಪರಿಹಾರಕ್ಕೆ ನಮ್ಮ ಪಕ್ಷದೊಳಗಿನ ಅನುಭವಿ ನಾಯಕರ ಜೊತೆ ಚರ್ಚಿಸುತ್ತೇನೆ,'' ಎಂದರು.

Shivamogga: KPCC President DK Shivakumar Talks With Lambani Community In Shikaripura

ಲಂಬಾಣಿ ಜನರೊಂದಿಗೆ ಬೆಳೆದೆ
ಸಣ್ಣ ವಯಸ್ಸಿನಲ್ಲಿ ಲಂಬಾಣಿ ಜನರೊಂದಿಗೆ ಬೆಳೆದವನು ನಾನು. ಅವರ ಕಷ್ಟಕ್ಕೆ ಧ್ವನಿಯಾಗಬೇಕು ಅವರ ಸಮಸ್ಯೆ ಹತ್ತಿರದಿಂದ ಅರಿಯಬೇಕು ಎನ್ನುವ ಕಾರಣಕ್ಕೆ ಪ್ರವಾಸ ಮಾಡುತ್ತಿದ್ದೇನೆ. ಸಭೆಯಲ್ಲಿ ನಮ್ಮ ಪಕ್ಷದ ರಾಜಕೀಯ ಧ್ವಜ ಹಾಕಿಲ್ಲ. ಯಾವುದೇ ಮುಖಂಡರನ್ನು ಕೂರಿಸಿಲ್ಲ. ವೇದಿಕೆಯಲ್ಲಿ ಸಮಸ್ಯೆ ಹೇಳುವವರೂ ಯಾವುದೇ ವ್ಯಕ್ತಿ, ಸರಕಾರ ದೂಷಿಸುವುದಕ್ಕೆ ಅವಕಾಶ ನೀಡದೆ ಸಮಸ್ಯೆ ಹೇಳಿಕೊಳ್ಳಬಹುದು,'' ಎಂದು ತಳಿಸಿದರು.

ಲಂಬಾಣಿ ಸಮುದಾಯದ ಜನರ ಕಷ್ಟ, ನಷ್ಟದ ಕುರಿತು ಹಲವರು ಸಂವಾದದಲ್ಲಿ ತಿಳಿಸಿದರು. ಹೊಸೂರು ಚಂದ್ರು, ತರಲಘಟ್ಟ ಮಂಜುನಾಯ್ಕ, ಕುಮಾರನಾಯ್ಕ, ರಾಘು ಬೇಗೂರು, ಹೇಮಾನಾಯ್ಕ, ಉಮೇಶ್ ಮಾರವಳ್ಳಿ, ನಾಗಿಬಾಯಿ ಮತ್ತಿತರರು ಡಿ.ಕೆ. ಶಿವಕುಮಾರ್‌ ಅವರೊಂದಿಗೆ ಸಂವಾದದಲ್ಲಿ ಭಾವಹಿಸಿದರು. ಗ್ರಾಮಕ್ಕೆ ಆಗಮಿಸಿದ ಡಿ.ಕೆ. ಶಿವಕುಮಾರ್‌ರಿಗೆ ಆರತಿ ಬೆಳಗಿ, ಲಂಬಾಣಿ ನೃತ್ಯದ ಮೂಲಕ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು.

ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್, ಕಾಂಗ್ರೆಸ್ ಮುಖಂಡರಾದ ರುದ್ರಪ್ಪ ಲಮಾಣಿ, ಜಿಲ್ಲಾಧ್ಯಕ್ಷ ಎಚ್.ಎಸ್. ಸುಂದರೇಶ್, ತೀ.ನಾ. ಶ್ರೀನಿವಾಸ್, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಪ್ರಕಾಶ್ ರಾಥೋಡ್, ಮಂಜುನಾಥ ಭಂಡಾರಿ ಮತ್ತಿತರರು ಇದ್ದರು.

English summary
KPCC President D.K Shivakumar tour to Shikaripur and interacted with the Lambani community at Begur Maradi Tanda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X