• search
 • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಫ್ಘಾನಿಸ್ತಾನ ತಾಲಿಬಾನ್ ವಶ, ಕೋಡಿಮಠಶ್ರೀಗಳ ಭವಿಷ್ಯ ನಿಜವಾಯ್ತು

By ಒನ್ಇಂಡಿಯಾ ಡೆಸ್ಕ್
|
Google Oneindia Kannada News

ಶಿವಮೊಗ್ಗ, ಆಗಸ್ಟ್ 31: ''ಜಗತ್ತಿನಲ್ಲಿ ಒಂದು ದೇಶ ಭೂಪಟದಿಂದ ಅಳಿಸಿಹೋಗಲಿದೆ ಎಂದು 2 ವರ್ಷಗಳ ಹಿಂದೆ ಭವಿಷ್ಯ ನುಡಿದಿದ್ದೆ. ಅದರಂತೆ ಇಂದು ಅಫ್ಘಾನಿಸ್ತಾನ ತಾಲಿಬಾನ್ ವಶವಾಗುತ್ತಿದೆ'' ಎಂದು ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದ್ದಾರೆ.

ಸದ್ಯ ಶಿವಮೊಗ್ಗ ಜಿಲ್ಲಾ ಪ್ರವಾಸದಲ್ಲಿರುವ ಶ್ರೀಗಳು ಜಡೆ ಸಂಸ್ಥಾನದ ಮಠದ ಜಗದ್ಗುರು ಕೆಂಪಿನ ಸಿದ್ದವೃಷಭೇಂದ್ರ ಸ್ವಾಮೀಜಿ ಕರ್ತೃ ಗದ್ದುಗೆಗೆ ಭೇಟಿ ನೀಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕೊರೊನಾವೈರಸ್, ರಾಜಕೀಯ, ನೈಸರ್ಗಿಕ ವಿಕೋಪದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ ಜಲಪ್ರಳಯದಿಂದ ಜನರು ತತ್ತರಿಸಲಿದ್ದಾರೆ ಎಂದು ಎಚ್ಚರಿಸಿದ್ದಾರೆ. ಮಳೆ ಹೆಚ್ಚಾಗಲು ಏನು ಕಾರಣ ಎಂಬುದನ್ನು ವಿವರಿಸಿ, ಕುಂಭ ರಾಶಿಯಲ್ಲಿ ಗುರು ಪ್ರವೇಶಿಸುವುದರಿಂದ ಮಳೆ ಹೆಚ್ಚು ಬೀಳಲಿದೆ. ಕಾರ್ತಿಕ ಮಾಸದವರೆಗೂ ನೆರೆ, ಮತ್ತಿತರ ವಿಕೋಪಗಳಿಂದ ಜನ ತತ್ತರಿಸಲಿದ್ದಾರೆ. ಅಕಾಲಿಕ ಮಳೆ, ನೆರೆ, ಬರದಿಂದ ಜನ ತತ್ತರಿಸಲಿದ್ದು, ಪ್ರಕೃತಿ ವಿಕೋಪಕ್ಕೆ ಸಿದ್ಧರಾಗಬೇಕಿದೆ ಎಂದರು.

ದೇಶಕ್ಕೆ ಕೊರೊನಾ ಹಾವಳಿ: ಕೋಡಿಶ್ರೀಗಳು ನುಡಿದಿದ್ದ ಭವಿಷ್ಯ ಸತ್ಯವಾಯಿತು ನೋಡಿ..ದೇಶಕ್ಕೆ ಕೊರೊನಾ ಹಾವಳಿ: ಕೋಡಿಶ್ರೀಗಳು ನುಡಿದಿದ್ದ ಭವಿಷ್ಯ ಸತ್ಯವಾಯಿತು ನೋಡಿ..

ಇನ್ನು ರಾಜಕೀಯದ ಬಗ್ಗೆ ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಡೆತಡೆಗಳು ಎದುರಾದರೂ, ಯಾವುದೇ ಅಡ್ಡಿಯಿಲ್ಲದೆ, ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು, ಆಡಳಿತ ಮುಂದುವರೆಸಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಪ್ರಕೃತಿಯಿಂದಲೇ ಔಷಧಿ ದೊರೆಯಲಿದೆ

ಪ್ರಕೃತಿಯಿಂದಲೇ ಔಷಧಿ ದೊರೆಯಲಿದೆ

ಪ್ರಕೃತಿ ಕೊಟ್ಟಿರುವ ರೋಗಕ್ಕೆ ಪ್ರಕೃತಿಯಿಂದಲೇ ಔಷಧಿ ದೊರೆಯಲಿದೆ ಎಂದು ಹೇಳಿದ್ದಾರೆ. ಪ್ರತಿಯೊಬ್ಬರು ಅವರವರ ಇಷ್ಟದೇವರ ಪ್ರಾರ್ಥನೆ ಸಲ್ಲಿಸಬೇಕು. ಮನೆಯಲ್ಲಿ ಮಾವು, ಬೇವು, ಬೇಟೆ ಸೊಪ್ಪು ಇಡಬೇಕು. ರಾತ್ರಿ ಮಲಗುವಾಗ ಬಿಲ್ವಪತ್ರೆ ತಲೆಗೆ ಸುತ್ತಿ ಮಲಗಬೇಕು. ಗೃಹದಲ್ಲಿ ನಿತ್ಯ ದೀಪ ಉರಿಸಬೇಕು. ಕೋರೋನಾ ಮೇ ತಿಂಗಳಲ್ಲಿ ನಿರ್ನಾಮವಾಗಲಿದೆ. ಸ್ವಲ್ಪ ಎಚ್ಚರ ತಪ್ಪಿದರೂ ವರ್ಷಪೂರ್ತಿ ಇರಲಿದೆ ಎಂದು ಶ್ರೀಗಳು ಹೇಳಿದರು.

ಭಾರತಕ್ಕೆ ಯಾವುದೇ ಧಕ್ಕೆ ಇಲ್ಲ

ಭಾರತಕ್ಕೆ ಯಾವುದೇ ಧಕ್ಕೆ ಇಲ್ಲ

ಮುಂದಿನ 5 ವರ್ಷಗಳವರೆಗೂ ಕೊರೊನಾ ಸಂಪೂರ್ಣ ನಾಶವಾಗುವುದಿಲ್ಲ, ಆದರೆ, ಜಗತ್ತನ್ನು ತೀವ್ರವಾಗಿ ಕಾಡುತ್ತಿರುವ ಕೊರೋನಾ ವ್ಯಾಧಿಯಿಂದ‌‌ ಭಾರತಕ್ಕೆ ಯಾವುದೇ ಧಕ್ಕೆ ಇಲ್ಲ ಎಂದು ಅರಸೀಕೆರೆ ತಾಲೂಕಿನ ಕೋಡಿಮಠ ಶ್ರೀಗಳು ಭವಿಷ್ಯ ನುಡಿದಿದ್ದಾರೆ.

ಕೊರೊನಾ ರೋಗದಿಂದ ಬಲಿಯಾದವರಿಗಿಂತ ಭಯಕ್ಕೆ ಮೃತಪಟ್ಟವರೇ ಅಧಿಕ. ವೈರಸ್ ಸೋಂಕಿಗೆ ಹೆದರದೆ ಧೈರ್ಯದಿಂದ ಎಲ್ಲವನ್ನು ಎದುರಿಸುವ ಶಕ್ತಿ ಬೆಳೆಸಿಕೊಳ್ಳಬೇಕು, ಸ್ವಚ್ಛತೆ, ಒಳ್ಳೆ ಚಿಂತನೆಯನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಹೊಸ ಶಾಸನ ಬರುವ ನಿರೀಕ್ಷೆಯಿದೆ

ಹೊಸ ಶಾಸನ ಬರುವ ನಿರೀಕ್ಷೆಯಿದೆ

ದೇಶದಲ್ಲಿ ಹೊಸ ಶಾಸನ ಬರುವ ನಿರೀಕ್ಷೆಯಿದೆ ಇದು ಜನವಿರೋಧಿ ಯಾಗಬಾರದು ಇದರಿಂದ ದೇಶದ ನಾಯಕನಿಗೆ ಕಂಟಕವಾಗಲಿದೆ. ಬರುವ ಶಾಸನಗಳನ್ನು ಅರಸ ಅರಿತು ಮಾಡಿದರೆ ಒಳಿತು. ಅತೃಪ್ತ ಪ್ರಜೆಗಳು ಅರಸನ ವಿರುದ್ಧ ದಂಗೆ ಏಳಬಹುದು. ಅರಸು ಪಟ್ಟಕ್ಕೂ ಭಂಗವಾಗುವ ಲಕ್ಷಣವಿದೆ. ಶಾಸನಗಳು ಮಾರಕ, ಪೂರಕವಾಗಲಿವೆ ಎಂದು ಭವಿಷ್ಯ ನುಡಿದಿದ್ದರು.

ಪಂಚಭೂತಗಳಿಂದ ತೊಂದರೆ ಆಗಲಿದೆ

ಪಂಚಭೂತಗಳಿಂದ ತೊಂದರೆ ಆಗಲಿದೆ

2021ರ ಜುಲೈ ತಿಂಗಳಿನಲ್ಲಿ ಕೋಡಿಮಠದ ಶ್ರೀಗಳು ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಈಚಲು ಬೆಟ್ಟದಲ್ಲಿ ಭೂದೇವಿ ದೇವಸ್ಥಾನದ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಅಂದು ಮಾತನಾಡಿ, ''ಈ ಸಂವತ್ಸರದಲ್ಲಿ ಪ್ರೇತ ಕಾಣೆಯಾಗುತ್ತಾನೆ, ಪಂಚಭೂತಗಳಿಂದ ತೊಂದರೆ ಆಗಲಿದೆ. ಆಗಸ್ಟ್ ಮೂರನೇ ವಾರದಿಂದ ರೋಗ- ರುಜಿನಗಳು ಹೆಚ್ಚಾಗಲಿದೆ. ಜನವರಿಯವರೆಗೂ ರೋಗ ಬಾಧೆ ಇರಲಿದೆ. ಜನ ಭೀತಿಯಿಂದ ಸಾಯುತ್ತಿದ್ದಾರೆ ಹೊರತು, ಕಾಯಿಲೆಯಿಂದ ಸಾಯುವುದಿಲ್ಲ,'' ಎಂದಿದ್ದರು.

ಮನುಷ್ಯ ದೈವಶಕ್ತಿಗಿಂತ ದೊಡ್ಡವನಲ್ಲ

ಮನುಷ್ಯ ದೈವಶಕ್ತಿಗಿಂತ ದೊಡ್ಡವನಲ್ಲ

"ಮದ್ದಿಲ್ಲದ ಕಾಯಿಲೆಗೆ ಸಾವಿರ ಸಾವಿರ ಜನರು ಸಾವನ್ನಪ್ಪುತ್ತಾರೆ. ಎದುರಾಗುವ ಕಾಯಿಲೆ ಬರೀ ಮನುಷ್ಯನಿಗೆ ಸೀಮಿತವಲ್ಲ. ಮುಂದಿನ ದಿನಗಳಲ್ಲಿ ಜಡತ್ವದ ವಸ್ತುಗಳಿಗೂ ಆವರಿಸಬಹುದು. ಔಷಧಗಳು ರೋಗ ನಿರೋಧಕ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಮನುಷ್ಯ ಎಣ್ಣೆ ಇಲ್ಲದ ದೀಪವನ್ನು ಉರಿಸಿದ್ದಾನೆ. ಹಕ್ಕಿಗಳು ರೆಕ್ಕೆಯಿಲ್ಲದೇ ಹಾರಾಡಿವೆ. ಮನುಷ್ಯ ದೈವಶಕ್ತಿಗಿಂತ ದೊಡ್ಡವನಲ್ಲ" ಎಂದಿದ್ದ ಕೋಡಿಶ್ರೀಗಳು.

ಭಾರತೀಯರು ಈ ರೋಗಕ್ಕೆ ಹೆದರುವ ಅವಶ್ಯಕತೆ ಇಲ್ಲ

ಭಾರತೀಯರು ಈ ರೋಗಕ್ಕೆ ಹೆದರುವ ಅವಶ್ಯಕತೆ ಇಲ್ಲ

"ದೈವೀ ಶಕ್ತಿ ಕೋಪಿಸಿಕೊಂಡರೆ, ಅನಾಹುತ ನಡೆಯುತ್ತದೆ. ಮನುಷ್ಯನ ಯಾವ ಪ್ರಯತ್ನವೂ ಫಲವನ್ನು ನೀಡುವುದಿಲ್ಲ. ಸಹಸ್ರ ಸಹಸ್ರ ವರುಷಗಳಿಂದ ಋಷಿ, ಮುನಿ, ಯೋಗಿಗಳು ಜಪತಪದಿಂದ ರಕ್ಷಣೆ ಮಾಡುತ್ತಾ ಬಂದಿರುವ ಭೂಮಿ ನಮ್ಮದು. ಹೀಗಾಗಿ ಭಾರತೀಯರು ಈ ರೋಗಕ್ಕೆ ಹೆದರುವ ಅವಶ್ಯಕತೆ ಇಲ್ಲ" ಎಂದು ಕೋಡಿಶ್ರೀಗಳು ಹೇಳಿದ್ದರು.

   ಅಫ್ಘಾನ್ ಬಿಕ್ಕಟ್ಟು ಭಾರತಕ್ಕೆ ಭದ್ರತೆಯ ಪ್ರಶ್ನೆ ಎದುರಾಗಿದೆ! | Oneindia Kannada
   English summary
   Kodimutt Seer Prediction on Afghanistan comes true as it is now under Taliban, Seer also predicts about Coronavirus, Floods and natural calamities.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X