• search
  • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಫ್ಲಾಪ್ ಆಪರೇಷನ್‌ ಡಾಕ್ಟರೇಟ್‌ ಯಡಿಯೂರಪ್ಪಗೆ ಕೊಡಬೇಕು: ಮಧು ಬಂಗಾರಪ್ಪ

By ಶಿವಮೊಗ್ಗ ಪ್ರತಿನಿಧಿ
|

ಶಿವಮೊಗ್ಗ, ಜನವರಿ 17: ಫ್ಲಾಪ್ ಆಪರೇಷನ್ ಗೆ ಡಾಕ್ಟರೇಟ್‌ ಕೊಡುವುದಾದರೆ ಅದನ್ನು ಯಡಿಯೂರಪ್ಪ ಅವರಿಗೆ ಕೊಡಬೇಕು ಎಂದು ಜೆಡಿಎಸ್ ಮುಖಂಡ ಮಧು ಬಂಗಾರಪ್ಪ ವ್ಯಂಗ್ಯ ಮಾಡಿದರು.

ಶಿವಮೊಗ್ಗದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು, ಸಿಎಂ ಕುಮಾರಸ್ವಾಮಿ ಜನರಿಗೆ ಸುಲಭವಾಗಿ ಸಿಗುತ್ತಿದ್ದು ಯಡಿಯೂರಪ್ಪ ರೀತಿ ಫೈವ್ ಸ್ಟಾರ್ ಹೋಟೆಲ್ ನಲ್ಲಿ ಕುಳಿತಿಲ್ಲ. ಯಡಿಯೂರಪ್ಪ ಎಷ್ಟೇ ತಿಪ್ಪರಲಾಗ ಹಾಕಿದರೂ ಸಿಎಂ ಆಗುವುದಿಲ್ಲ. ಯಡಿಯೂರಪ್ಪ ವಿರೋಧ ಪಕ್ಷದ ಘನತೆ ಅರಿತು ಅದನ್ನು ಕಾಪಾಡಲಿ ಎಂದರು.

ಆಪರೇಷನ್ ಕಮಲ: ಪ್ರಧಾನಿ ಮೋದಿಗೆ ಖರ್ಗೆ 'ಕ್ಲಾಸ್' ತೆಗೆದುಕೊಂಡ್ರಾ?

ಜಿಲ್ಲೆಯಲ್ಲಿ ಮಂಗನ ಕಾಯಿಲೆಯಿಂದ 9 ಮಂದಿ ಸಾವನ್ನಪ್ಪಿದ್ದಾರೆ. ಆದರೆ ಮಾಜಿ ಮುಖ್ಯಮಂತ್ರಿಯಾಗಿ, ವಿರೋಧ ಪಕ್ಷದ ನಾಯಕರನಾಗಿ ಒಮ್ಮೆಯೂ ಭೇಟಿ ನೀಡಿ ಸಾಂತ್ವಾನ ಹೇಳುವ ಮನಸ್ಥಿತಿ ಇಲ್ಲ ಯಡಿಯೂರಪ್ಪಗೆ ಇಲ್ಲ. ಅವರಿಗೆ ಮಂಗನ ಕಾಯಿಲೆ ಹರಡುವ ಉಣ್ಣೆ ಕಚ್ಚಿದಾಗ ಜನರ ನಿಜವಾದ ನೋವು ಏನೆಂಬುದು ಗೊತ್ತಾಗುತ್ತದೆ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಮಂಗನ ಕಾಯಿಲೆಗೆ ಬಿಜೆಪಿ ಪ್ರತಿಕ್ರಿಯೆಯೇ ಇಲ್ಲ

ಮಂಗನ ಕಾಯಿಲೆಗೆ ಬಿಜೆಪಿ ಪ್ರತಿಕ್ರಿಯೆಯೇ ಇಲ್ಲ

ಇತ್ತೀಚೆಗೆ ಹೊಸನಗರದಲ್ಲಿ ರೈತರೊಬ್ಬರು ಹೃದಯಘಾತದಿಂದ ಮೃತಪಟ್ಟಾಗ ಬಿಜೆಪಿ ಮುಖಂಡರು ಅಲ್ಲಿಯೇ ತುತ್ತೂರಿ ಊದಿದ್ದರು. ಆದರೆ ಇದೀಗ 9 ಮಂದಿ ಮಂಗನ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಬಿಜೆಪಿಯವರ ಕಣ್ಣಿಗೆ ಇವರು ಕಾಣುವುಇದಲ್ಲವೇ, ಸತ್ತವರೇನು ರೈತರಲ್ಲವೇ ಎಂದು ಪ್ರಶ್ನಿಸಿದರು.

ಯಡಿಯೂರಪ್ಪ ಆಪರೇಷನ್ ಕಮಲ ಹಾಳುಗೆಡವಿದ್ದೇ ಈ ಪಂಚ ಪಾಂಡವರು!

'ಆಪರೇಷನ್ ಕಮಲ ಪ್ರಜಾಪ್ರಭುತ್ವದ ಕೊಲೆ'

'ಆಪರೇಷನ್ ಕಮಲ ಪ್ರಜಾಪ್ರಭುತ್ವದ ಕೊಲೆ'

ಆಪರೇಷನ್ ಕಮಲ ಒಂದು ರೀತಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದಂತೆ. ಯಡಿಯೂರಪ್ಪ ಹಾಗೂ ಬಿಜೆಪಿಯ ಶಾಸಕರಿಗೆ ಮಾನ, ಮರ್ಯಾದೆ ಇದ್ದರೆ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಹೋಗಿ ರೈತರ ಸಾಲ ಮನ್ನಾದ ಬಗ್ಗೆ ಮನವಿ ಸಲ್ಲಿಸಲಿ ಎಂದು ಅವರು ಸವಾಲು ಎಸೆದರು.

ಬಿಎಸ್ವೈ ಅವ್ರದ್ದು ಬಸ್ ಸ್ಟ್ಯಾಂಡ್ ಲವ್, ಕಾಂಗ್ರೆಸ್ಸಿನಗರು ಮುತ್ತೈದೆಯರು: ಸಿಎಂ ಇಬ್ರಾಹಿಂ

ಮೋದಿ ನಂ.1 ಸುಳ್ಳುಗಾರ: ಮಧು ಬಂಗಾರಪ್ಪ

ಮೋದಿ ನಂ.1 ಸುಳ್ಳುಗಾರ: ಮಧು ಬಂಗಾರಪ್ಪ

ಪ್ರಧಾನಿ ನರೇಂದ್ರ ಮೋದಿ ನಂಬರ್ ಒನ್ ಸುಳ್ಳುಗಾರ. ಬಿಜೆಪಿಯವರಿಗೆ ಬುದ್ಧಿ ಕಲಿಸಲು ಆರ್​​ಎಸ್​ಎಸ್ ನವರು ಇನ್ನಾದರೂ ಲಾಠಿ ಬಳಸಲಿ. ಜನರೂ ತರಾಟೆಗೆ ತೆಗೆದುಕೊಳ್ಳಲಿ ಎಂದು ಮಧು ಬಂಗಾರಪ್ಪ ಒತ್ತಾಯಿಸಿದರು.

ಆಪರೇಷನ್ ಠುಸ್... 3 ನೇ ಬಾರಿಗೂ ಯಡಿಯೂರಪ್ಪ ಫೇಲ್?

'ಯಾರೇ ಅಭ್ಯರ್ಥಿ ಆದರೂ ಪ್ರಚಾರ'

'ಯಾರೇ ಅಭ್ಯರ್ಥಿ ಆದರೂ ಪ್ರಚಾರ'

ಮುಂದಿನ ಲೋಕಸಭೆ ಚುನಾವಣೆಗೆ ಪಕ್ಷದ ವರಿಷ್ಠರು ಸೀಟು ಹಂಚಿಕೆ ಮತ್ತು ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸಲಿದ್ದಾರೆ. ಎಂಪಿ ಸ್ಥಾನಕ್ಕೆ ಕಾಂಗ್ರೆಸ್ ನವರು ಅಪೇಕ್ಷೆಪಡುವುದು ತಪ್ಪಲ್ಲ. ಹಾಗಾಗಿ ಕಾಂಗ್ರೆಸ್ ಅಭ್ಯರ್ಥಿಯೇ ಆದರೂ, ನಾನು ಬಂದು ಪ್ರಚಾರ ಮಾಡುತ್ತೇನೆ ಎಂದರು.

ಉಪಚುನಾವಣೆಯಲ್ಲಿ ಉತ್ತಮ ಫಲಿತಾಂಶ

ಉಪಚುನಾವಣೆಯಲ್ಲಿ ಉತ್ತಮ ಫಲಿತಾಂಶ

ಎಷ್ಟೇ ಆದರೂ ಮೂರನೇ ಸ್ಥಾನದಲ್ಲಿದ್ದ ನಮ್ಮ ಪಕ್ಷಕ್ಕೆ ಉತ್ತಮ ಫಲಿತಾಂಶ ಮತ್ತು ಬೆಂಬಲ ನೀಡಿದ್ದಾರೆ. ಜನವರಿ 26ರ ನಂತರ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಿಂದ ಒಟ್ಟಿಗೆ ಪ್ರಚಾರ ಕೈಗೊಳ್ಳಲಾಗುವುದು ಎಂದು ಸೊರಬ ಮಾಜಿ ಶಾಸಕ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
JDS leader Madhu Bangarappa said Karnataka BJP people does not have any concern about Karnataka people. They only thinking about politics. Yeddyurappa should award as 'Flop Operation star'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more