ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪತ್ರಕರ್ತ ಅರುಣ್ ನಿಧನಕ್ಕೆ ದೇವೇಗೌಡರ ತೀವ್ರ ಸಂತಾಪ

ಅರುಣ್ ಅವರ ಅಕಾಲಿಕ ಸಾವಿನ ಬಗ್ಗೆ ಖಾಸಗಿ ವಾಹಿನಿಗೆ ಪತ್ರಿಕ್ರಿಯಿಸಿದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು, ವೈಯಕ್ತಿಕವಾಗಿ ನನಗು ಬಹಳ ನೋವಾಗಿದೆ, ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ ಎಂದಿದ್ದಾರೆ.

By Mahesh
|
Google Oneindia Kannada News

ಶಿವಮೊಗ್ಗ, ಡಿಸೆಂಬರ್ 12: ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಶಕುನವಳ್ಳಿ ಮೂಲದ ಯುವ ಪತ್ರಕರ್ತ ಅರುಣ್ (27) ಅವರು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ಕೊನೆಯುಸಿರೆಳೆದಿದ್ದಾರೆ.

ಕಳೆದ ಒಂದು ವರ್ಷದಿಂದ ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದ ಅರುಣ್ ಅವರನ್ನು ಹುಬ್ಬಳ್ಳಿಯ. ಆರ್.ಬಿ.ಪಾಟೀಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು, ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

Young Journalist Arun Shakunavalli No More

ಕ್ರೈಂ , ರಾಜಕೀಯ, ಮೆಟ್ರೋ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅರುಣ್ ಅವರು ಮೂಲತಃ ಶಿವಮೊಗ್ಗದ ಸೊರಬ ತಾಲೂಕು ಶಕುವನಹಳ್ಳಿಯವರು, ಪತ್ರಿಕಾರಂಗದಲ್ಲಿ ಸಾಧನೆ ಮಾಡುವ ಕನಸು ಕಂಡಿದ್ದ ಅರುಣ್ ಅವರು ಉದಯ ಟಿವಿಯ ಸುದ್ದಿ ವಿಭಾಗದಲ್ಲಿ ಗುರುತಿಸಿಕೊಂಡಿದ್ದರು. ಇದಕ್ಕೂ ಮೊದಲು ಉದಯವಾಣಿ ಪತ್ರಿಕೆಯ ಶಿವಮೊಗ್ಗ ಆವೃತ್ತಿಯಲ್ಲಿ ಕಾರ್ಯನಿರ್ವಹಿಸಿದ್ದರು.

ಅರುಣ್ ಅವರ ಸಾವಿನಿಂದ ಪತ್ರಿಕಾಲೋಕ ಒಬ್ಬ ಯುವ ಪ್ರತಿಭೆಯನ್ನು ಕಳೆದುಕೊಂಡಿದೆ ಎಂದು ಸ್ನೇಹಿತರು, ಪತ್ರಕರ್ತರು ಸಾಮಾಜಿಕ ಜಾಲ ತಾಣಗಳಲ್ಲಿ ತಮ್ಮ ಸಂತಾಪ ಸಂದೇಶಗಳನ್ನು ಹಾಕಿದ್ದಾರೆ.

ಅರುಣ್ ಅವರ ಅಕಾಲಿಕ ಸಾವಿನ ಬಗ್ಗೆ ಖಾಸಗಿ ವಾಹಿನಿಗೆ ಪತ್ರಿಕ್ರಿಯಿಸಿದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು, ವೈಯಕ್ತಿಕವಾಗಿ ನನಗು ಬಹಳ ನೋವಾಗಿದೆ, ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ, ಅರುಣ್ ರವರ ಕುಟುಂಬದವರಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ' ಎಂದಿದ್ದಾರೆ.
***
-ನಾಗರಾಜ್ ವೈದ್ಯ ಅವರು ತಮ್ಮ ಗೆಳೆಯ ಬಗ್ಗೆ ಫೇಸ್ ಬುಕ್ ನಲ್ಲಿ ಬರೆದಿದ್ದು ಹೀಗೆ

ಜತೆಗೇ ಇದ್ದವರು 'ಇನ್ನಿಲ್ಲ' ಅಂತಂದರೆ ಅರಗಿಸಿಕೊಳ್ಳಲು ತುಂಬಾ ಕಷ್ಟವಾಗುತ್ತದೆ..
ಸ್ವಲ್ಪ ಹೊತ್ತಿಗೆ ಮುಂಚೆ Vinay ಕರೆ ಮಾಡಿ, 'ವಿಷ್ಯ ಗೊತ್ತಾಯ್ತಾ? Arun Shakunavalli ತೀರಿ ಹೋದ್ನಂತೆ' ಅಂದ.. ನಂಬಲಾಗ್ಲಿಲ್ಲ.. ನನ್ನದೇ ವಯಸ್ಸಿನ ಹುಡುಗ. ಒಂದು ವರ್ಷದಿಂದ ಇಬ್ಬರೂ ಒಂದೇ ಕಂಪನಿಯಲ್ಲಿ ಕೆಲಸ ಮಾಡ್ತಿದ್ವಿ. ಅವನು ಉದಯ ನ್ಯೂಸ್ ನಲ್ಲಿ ಇದ್ದರೆ ನಾನು ಫಿಕ್ಷನ್ ಟೀಂ ನಲ್ಲಿ.ನನ್ನ ಅವನ ಪರಿಚಯ,ಗೆಳೆತನವಾಗಿ ಹತ್ತುವರ್ಷ..ಇಬ್ಬರೂ ಒಟ್ಟಿಗೇ ಪತ್ರಿಕೋದ್ಯಮ ಓದಿದವರು.

ಇದುವರೆಗೂ ಒಮ್ಮೆಯೂ ಆತ ಯಾರ ಬಗ್ಗೂ ಕೆಟ್ಟದಾಗಿ ಮಾತಾಡಿದ್ದನ್ನ ನೋಡಿಲ್ಲ. ತುಂಬ ಕನಸುಗಳನ್ನಿಟ್ಟುಕೊಂಡವ. ಹೊಸತನ್ನು ಕಲಿಯುವ ಆಸಕ್ತಿ ತುಂಬಾ ಇತ್ತು.

ನಾನು ಹೊಸದಿಗಂತದ ಪುರವಣಿ ವಿಭಾಗದಲ್ಲಿದ್ದಾಗ ಅವನಿಂದ ಲೇಖನ ಬರೆಸ್ತಿದ್ದೆ. ಏಜನ್ಸಿಗಳು ಕಳಿಸುವ ನ್ಯೂಸ್ ಗಳು ಬೇಕು.. ತಾನು ಭಾಷಾಂತರ ಮಾಡುವುದನ್ನು ಕಲೀಬೇಕು ಅಂತ ಹೇಳ್ತಿದ್ದ, ಕಳಿಸಿಕೊಡ್ತಿದ್ದೆ. ಉದ್ದುದ್ದ ಬರೆದು ಕಳಿಸಿಕೊಡ್ತಿದ್ದ, ' ಹೇ ವೈದ್ಯ.. ನೀ ಫ್ರೀ ಇದ್ದೀಯೇನ್.. ನಾ ಸಿಗ್ಬೇಕಿತ್ತಲ್ಲೋ.. ' ಅಂತಿದ್ದ, ಭೇಟಿಯಾಗ್ತಿದ್ದೆ. ನಂಗವನ ವ್ಯಕ್ತಿತ್ವ ಯಾವತ್ತೂ ಇಷ್ಟ ಆಗ್ತಿತ್ತು..

ಈ ನಡುವೆ ಒಂದೆರಡು ವರ್ಷ ಕಾರಣಾಂತರಗಳಿಂದ ಭೇಟಿ, ಸಂಪರ್ಕ ಯಾವುದೂ ಇರಲಿಲ್ಲ. ಬಳಿಕ ಫೇಸ್ಬುಕ್ಕಲ್ಲಿ ಚಾಟಿಂಗು.. ಉದಯ ಟಿವಿಗೆ ಸೇರಿದ ಬಳಿಕವಂತೂ ವಾರಕ್ಕೆ ಮೂರು ದಿನಗಳಾದ್ರೂ ಭೇಟಿ ಆಗ್ತಿದ್ವಿ.. ತಲೆಗೊಂದು ಕ್ಯಾಪ್ ಹಾಕ್ಕೊಂಡೇ ಇರ್ತಿದ್ದ, ಊಟದ ಹೊತ್ತಲ್ಲೇ ನಮ್ಮ ಹೆಚ್ಚಿನ ಭೇಟಿ.. ಆಗಾಗ, ಕೆಲಸ ಬದಲಿಸ್ಬೇಕು ಅಂತಿದ್ದ.

ಆದರೆ, ಇತ್ತೀಚೆಗೆ ತುಂಬ ದಿನಗಳಿಂದ ಅವನು ಕಂಡಿರಲಿಲ್ಲ. ವಾರದಿಂದೀಚೆಗೆ ತುಂಬಾ ಸಲ ಅವ ನೆನಪಾಗಿದ್ದಾನೆ. ಕೇಳೋಣ ಅಂದರೆ, ಅವನೊಟ್ಟಿಗೆ ಬರುತ್ತಿದ್ದವರನ್ನು ನಾನು ಪರಿಚಯ ಮಾಡ್ಕೊಂಡಿರಲಿಲ್ಲ.. ' ನಂಗೆ ಹೇಳ್ದೇ ಕೇಳ್ದೇ ಬೇರೆ ಕೆಲಸ ಹುಡ್ಕೊಂಡ್ನಾ ?' ಅಂತಂದುಕೊಂಡಿದ್ದೆ..

ಆದರೆ...
ಆಗಿದ್ದೇ ಬೇರೆ. ಬ್ರೇನ್ ಟ್ಯೂಮರ್ ಇತ್ತಂತೆ. ಒಂದಿನವೂ ನಮ್ಮೊಂದಿಗೆಲ್ಲ ಹೇಳಿಕೊಳ್ಳಲಿಲ್ಲ.. ಎಷ್ಟು ಒದ್ದಾಡಿದನೋ? ಇವತ್ತು ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಕೊನೆಯುಸಿರೆಳೆದ ಅಂತ ವಿನಯ್ ಹೇಳಿದಾಗ ನಂಬಲಾಗಲೇ ಇಲ್ಲ. ರಮೇಶ್ ಗೆ ಕಾಲ್ ಮಾಡಿದೆ, ಅವರಿಬ್ಬರೂ ಆಪ್ತರು, ವಿಷಯ ಖಚಿತವಾಗಿ ಗೊತ್ತಿರುತ್ತೆ ಅಂತ.. ಅವನೂ ಹಾಗೇ ಅಂದ..
ಅರುಣ ಇನ್ನಿಲ್ಲ..

ಮತ್ತೂ ಸಂಕಟ ಏನ್ಗೊತ್ತಾ..
ಈ ಪೋಟೋದಲ್ಲಿದ್ದ ಇಬ್ಬರೂ ಗೆಳೆಯರು ಈಗ ಬರೀ ನೆನಪು ಮಾತ್ರ..
ಅರಗಿಸಿಕೊಳ್ಳಲಾಗ್ತಿಲ್ಲ..

English summary
Young and talented Kannada Journalist Arun Shakunavalli(27) passed away on Sunday (December 12) at a private hospital in Hubballi. Arun a native of Shivamogga was suffering from Brain Tumor, He was working with Udaya TV Channel
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X