ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ ಜನತೆಗೆ ಭಾವುಕ ವಿದಾಯ ಪತ್ರ ಬರೆದ ಕೆ. ದಯಾನಂದ

|
Google Oneindia Kannada News

ಶಿವಮೊಗ್ಗ, ಆಗಸ್ಟ್ 08 : ಶಿವಮೊಗ್ಗ ಜಿಲ್ಲಾಧಿಕಾರಿಯಾಗಿದ್ದ ಕೆ. ದಯಾನಂದರನ್ನು ವರ್ಗಾವಣೆ ಮಾಡಲಾಗಿದೆ. ಶಿವಕುಮಾರ್ ಕೆ. ಬಿ. ನೂತನ ಜಿಲ್ಲಾಧಿಕಾರಿಯಾಗಿ ಬುಧವಾರ ಅಧಿಕಾರವಹಿಸಿಕೊಂಡಿದ್ದಾರೆ.

ಶಿವಮೊಗ್ಗದಲ್ಲಿ 364 ದಿನಗಳ ಕಾಲ ಐಎಎಸ್ ಅಧಿಕಾರಿ ಕೆ. ದಯಾನಂದ ಕಾರ್ಯ ನಿರ್ವಹಣೆ ಮಾಡಿದ್ದಾರೆ. ನೂತನ ಜಿಲ್ಲಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಮಾಡಿದ ಅವರು, ಜಿಲ್ಲೆಯ ಜನರಿಗೆ ವಿದಾಯ ಪತ್ರವನ್ನು ಬರೆದಿದ್ದಾರೆ.

ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಎ.ದಯಾನಂದ ವರ್ಗಾವಣೆಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಎ.ದಯಾನಂದ ವರ್ಗಾವಣೆ

"ನಾನು ನಿಮ್ಮ ದಯಾನಂದ" ಎಂದು ಆರಂಭವಾಗುವ ಪತ್ರದಲ್ಲಿ, "ಶಿವಮೊಗ್ಗ ಜಿಲ್ಲೆಯಲ್ಲಿ ನಾನು ಕಳೆದಂತಹ 364 ದಿನಗಳು ನನ್ನ ಬದುಕಿನ ಕೊನೆಯವರೆಗೂ ಸಹ ಚಿಲುಮೆ ರೂಪದಲ್ಲಿ ನೆನಪಿನಲ್ಲಿ‌ ಉಳಿಯುವಂತಹ ಕ್ಷಣಗಳಾಗಿವೆ" ಎಂದು ಅವರು ಹೇಳಿದ್ದಾರೆ.

ಜಿಲ್ಲೆಗೆ ಬಂದ ಐದು ತಿಂಗಳಲ್ಲೇ ಮೊದಲ ಮಹಿಳಾ ಎಸ್ಪಿ ವರ್ಗಾವಣೆಜಿಲ್ಲೆಗೆ ಬಂದ ಐದು ತಿಂಗಳಲ್ಲೇ ಮೊದಲ ಮಹಿಳಾ ಎಸ್ಪಿ ವರ್ಗಾವಣೆ

2018ರ ಭಾರಿ ಮಳೆ, ಲೋಕಸಭಾ ಚುನಾವಣೆ, ಮಂಗನ ಕಾಯಿಲೆಯಂತಹ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಕೆಲಸ ನಿರ್ವಹಣೆ ಮಾಡಿದ ಕೆ. ದಯಾನಂದ ಬಗ್ಗೆ ಜನರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಪಾರ ಪರಿಸರ ಮತ್ತು ಜನಪರ ಕಾಳಜಿ ಹೊಂದಿರುವ ಅಧಿಕಾರಿಯ ಕಾರ್ಯ ವೈಖರಿಯನ್ನು ಜನರು ಶ್ಲಾಘಿಸಿದ್ದಾರೆ. ದಯಾನಂದ ಅವರು ಬರೆದ ಪತ್ರದ ವಿವರ ಇಲ್ಲಿದೆ......

ವಿ.ಜಿ. ಸಿದ್ಧಾರ್ಥ ಮಲೆನಾಡ ನಂಟಿನ ನೆನಪಿನ ಪಯಣವಿ.ಜಿ. ಸಿದ್ಧಾರ್ಥ ಮಲೆನಾಡ ನಂಟಿನ ನೆನಪಿನ ಪಯಣ

ಕೆ. ದಯಾನಂದ ಪತ್ರ

ಕೆ. ದಯಾನಂದ ಪತ್ರ

"ನಾನು ನಿಮ್ಮ ದಯಾನಂದ...ಶಿವಮೊಗ್ಗ ಜಿಲ್ಲೆಯಲ್ಲಿ ನಾನು ಕಳೆದಂತಹ 364 ದಿನಗಳು ನನ್ನ ಬದುಕಿನ ಕೊನೆಯವರೆಗೂ ಸಹ ಚಿಲುಮೆ ರೂಪದಲ್ಲಿ ನೆನಪಿನಲ್ಲಿ‌ ಉಳಿಯುವಂತಹ ಕ್ಷಣಗಳಾಗಿವೆ"

ಶಿವಮೊಗ್ಗ ಜಿಲ್ಲೆಯ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸಹಕಾರ, ಮಾಧ್ಯಮ ಮಿತ್ರರ ಆತ್ಮೀಯತೆ, ಸಾರ್ವಜನಿಕರ ಅಭಿಮಾನ ಮತ್ತು ಪ್ರೀತಿ ನನ್ನ ಕೆಲಸಗಳಿಗೆ ಸ್ಪೂರ್ತಿಯಾಗಿತ್ತು. ಶಿವಮೊಗ್ಗದ ಜನಮಾನಸದಲ್ಲಿ ನಾನು ನೀಡಿದಂತಹ ಒಂದು ಸಣ್ಣ ಕೊಡುಗೆಯನ್ನು ತಮ್ಮೆಲ್ಲರಿಗೂ ಸಹ ನೆನಪಿಸಬೇಕೆಂಬ ಆಶಯ ನನ್ನದಾಗಿದೆ" ಎಂದು ಪತ್ರವನ್ನು ಆರಂಭಿಸಿದ್ದಾರೆ.

ಗ್ರಾಮ ವಾಸ್ತವ್ಯದ ಮೂಲಕ ಆರಂಭ

ಗ್ರಾಮ ವಾಸ್ತವ್ಯದ ಮೂಲಕ ಆರಂಭ

"ಗ್ರಾಮವಾಸ್ತವ್ಯ- ಸಾರ್ವಜನಿಕರ ಅಹವಾಲು ಸ್ವೀಕಾರದೊಂದಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ಆರಂಭವಾದಂತಹ ನನ್ನ ಕರ್ತವ್ಯ, ಶಿವಮೊಗ್ಗ ಜಿಲ್ಲೆಯಲ್ಲಿ‌ ಜರುಗಿದ ಮೂರು‌ ಚುನಾವಣೆಗಳಾದ ಮಹಾನಗರ ಪಾಲಿಕೆ, ಲೋಕಸಭಾ ಉಪ ಚುನಾವಣೆ, ಲೋಕ‌ಸಭಾ ಸಾರ್ವತ್ರಿಕ ಚುನಾವಣೆಯ ಮತದಾನ‌ ಜಾಗೃತಿಯು 75 ವರ್ಷಗಳ ಇತಿಹಾಸವನ್ನು ಮರುಕಳಿಸಿ ಲೋಕ‌ಸಭಾ ಚುನಾವಣೆಯ ಎರಡನೇ ಹಂತದ ಚುನಾವಣೆಯಲ್ಲಿ ರಾಜ್ಯಕ್ಕೆ ಪ್ರಥಮ‌ ಸ್ಥಾನವನ್ನು ಗಳಿಸಲು ಶಿವಮೊಗ್ಗದ ಜನತೆಯ ಸಹಕಾರ ಅತ್ಯದ್ಭುತವಾಗಿತ್ತು" ಎಂದು ಕೆ. ದಯಾನಂದ ಹೇಳಿದ್ದಾರೆ.

ಮಂಗನಕಾಯಿಲೆ ಸಂದರ್ಭದಲ್ಲಿ ಕೆಲಸ

ಮಂಗನಕಾಯಿಲೆ ಸಂದರ್ಭದಲ್ಲಿ ಕೆಲಸ

"ದಸರಾ ರಜೆಯ ಮೋಜನ್ನು ಕಳೆಯಲು ಬಡತನ ರೇಖೆಗಿಂತ ಕೆಳಗಿನ ಮಕ್ಕಳಿಗೆ ಸಾದ್ಯವಾಗಲಿ ಎಂಬ ಉದ್ದೇಶದಿಂದ ಮಕ್ಕಳ ಹಬ್ಬವನ್ನು ಆರಂಭಿಸಿ ಸಹಕಾರ ಸಮನ್ವಯದ ಶಿಖರ ನೆನಪಿಸಿ, 10 ವರ್ಷಗಳ ನಂತರ ಆರಂಭಿಸಿದಂತಹ ಅತ್ಯದ್ಭುತ ಕಾರ್ಯಕ್ರಮ ಸಹ್ಯಾದ್ರಿ ಉತ್ಸವ ನಿಮ್ಮೆಲ್ಲರ‌ ಮನದಲ್ಲಿ ಅಚ್ಚಳಿಯದೇ ಉಳಿಯಲಿದೆ ಎಂಬುದು ನನ್ನ ಆಶಯ"

"ಶಿವಮೊಗ್ಗ ಜಿಲ್ಲೆಯಲ್ಲಿ ಕಂಡುಬಂದಂತಹ ಕೆ ಎಫ್ ಡಿ ಕಾಯಿಲೆಯು ಸಮರೋಪಾದಿಯ ಕಾರ್ಯದಲ್ಲಿ ಹತೋಟಿಗೆ ತರಲು ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಕಾರ್ಯ ಶ್ಲಾಘನೀಯ ಇದರ ಜೊತೆ ರಾಜ್ಯದ ಗಮನ ಸೆಳೆದ ಮಾದ್ಯಮದವರ ಸಹಕಾರವೂ ಸಹ ಅಸ್ಟೇ ಶ್ಲಾಘನೀಯ, ಜನರಲ್ಲಿ‌ ಕೆ ಎಫ್ ಡಿ ಕಾಯಿಲೆಯ ಬಗ್ಗೆ‌ ಜನರಿಗೆ ಆತ್ಮ ವಿಶ್ವಾಸ ಮೂಡಿಸಲು‌ ಗ್ರಾಮ ವಾಸ್ತವ್ಯ ಮಾಡಿದ್ದು ನೆನೆಪುಳಿಯುವಂತದ್ದು" ಎಂದು ಹೇಳಿದ್ದಾರೆ.

ಉದ್ಯೋಗ ಮೇಳ ಆಯೋಜನೆ

ಉದ್ಯೋಗ ಮೇಳ ಆಯೋಜನೆ

"9000 ಹಿಂದುಳಿದ ವರ್ಗಗಳ ಹಾಸ್ಟೆಲ್ ವಿದ್ಯಾರ್ಥಿಗಳಿಗೆ UPSC - KPSC ಪರೀಕ್ಷಾ ತರಭೇತಿಯ ಬಗ್ಗೆ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ನೀಡಿದ ತರಭೇತಿ ನನಗೆ ತೃಪ್ತಿದಾಯಕವಾಗಿದೆ. ಕೌಶಲ್ಯ ಶಾಲೆಯೊಂದಿಗೆ ಸದ್ದಿಲ್ಲದೆ ಬಡ ಮಕ್ಕಳಿಗೆ ಜೀವನ‌ ಕೌಶಲ್ಯವನ್ನು ತಿಳಿಸುವ ಕಾರ್ಯವಂತು ಸಮನ್ವಯದ ಸಮಿತಿಯಿಂದ ಅತ್ಯದ್ಭುತವಾಗಿ ಮೂಡಿ ಬರುತ್ತಿದೆ"

"ರಾಜ್ಯದಲ್ಲಿನ‌ ವಿದ್ಯಾರ್ಥಿಗಳಿಗೆ ವಾಯಸೇನಾ ನೇಮಕಾತಿಯಡಿ 556 ಕ್ಕೂ ಅಧಿಕ‌ ವಿದ್ಯಾರ್ಥಿಗಳಿಗೆ ಉದ್ಯೋಗ ಕಲ್ಪಿಸಲು ಸಹಕಾರ ನೀಡಿದ‌ ವಾಯುಸೇನೆಗೆ ನನ್ನ ಶುಭಾಶಯಗಳು"

"ಅರಣ್ಯ ನಾಶವಾಗುತ್ತಿದೆ, ಮರಗಿಡಗಳನ್ನು ಉಳಿಸಿ ಎಂಬ ಪ್ರತಿ‌ದಿನದ ಕರೆಗೆ ನನ್ನ ಉತ್ತರವೆಂಬಂತೆ ಕಲ್ಲುಗಂಗೂರು ಅರಣ್ಯ ಪ್ರದೇಶದಲ್ಲಿ ಸ್ವಯಂ ಸೇವಕ ವಿದ್ಯಾರ್ಥಿಗಳ ಸಹಕಾರದಿಂದ 10 ಲಕ್ಷಕ್ಕೂ ಅಧಿಕ ಬೀಜಗಳನ್ನು 1500 ವಿದ್ಯಾರ್ಥಿಗಳಿಂದ ಬೀಜಗಳನ್ನು ಒಂದೇ ದಿನದಲ್ಲಿ ನೆಡಿಸಲು ಸಹಕಾರ‌ ನೀಡಿದ ಅರಣ್ಯ ಇಲಾಖೆಗೆ ಅಭಿನಂದನೆಗಳು" ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪ್ಲಾಸ್ಟಿಕ್ ಹಾವಳಿಗೆ ತಡೆ

ಪ್ಲಾಸ್ಟಿಕ್ ಹಾವಳಿಗೆ ತಡೆ

"ಎಲ್ಲೆಡೆ ಪ್ಲಾಸ್ಟಿಕ್‌ ಹಾವಳಿ ಇದೆ ಎಂಬ ಕೂಗನ್ನು ದಮನಿಸಲು ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ‌ ಪ್ಲಾಸ್ಟಿಕ್ ಮುಕ್ತ ಶಿವಮೊಗ್ಗವನ್ನಾಗಿಸಲು ಮಾಡಿದ ಅಭಿಯಾನವಂತು ತುಂಬಾ ಖುಷಿ ತಂದಿದ್ದು, ಇದಕ್ಕೆ ಪ್ರತಿಕಾರವೆಂಬಂತೆ ಶಿವಮೊಗ್ಗ ಜಿಲ್ಲೆಯಲ್ಲಿದ್ದ ಎರಡು ಪ್ಲಾಸ್ಟಿಕ್ ಕಾರ್ಖಾನೆಗಳನ್ನು ಮುಚ್ಚಿಸಿ, ಶಿವಮೊಗ್ಗದ ಜನತೆಗೆ ಬಟ್ಟೆಯ‌ಬ್ಯಾಗ್ ಗಳನ್ನು‌ ಬಳಸುವಂತೆ‌ ಸಲಹೆ‌ ನೀಡಿ, ವಿವಿಧ ಸಮಾರಂಭಗಳಲ್ಲಿ ಹಾಗೂ ಕಛೇರಿಗೆ ಭೇಟಿಗಾಗಿ ಬರುವಂತಹವರಿಗೂ ಸಹ‌‌ ಪ್ಲಾಸ್ಟಿಕ್ ರಹಿತ ಬೊಕ್ಕೆಗಳನ್ನು ಬಳಸುವಂತೆ ತಿಳಿಸಲು ಪ್ರೇರಣೆಯಾಯಿತು" ಎಂದು ಹೇಳಿದ್ದಾರೆ.

ಸೈನಿಕ ಪಾರ್ಕ್ ನಿರ್ಮಾಣ

ಸೈನಿಕ ಪಾರ್ಕ್ ನಿರ್ಮಾಣ

"ಶಿವಮೊಗ್ಗ ಜಿಲ್ಲೆಯ ಯವ ಮನಸ್ಸುಗಳಿಗೆ ಸೈನಿಕರ‌ ಬಗೆಗಿನ ಗೌರವ ದ ಪ್ರತೀಕಕ್ಕಾಗಿ ಕೇವಲ 15 ದಿನಗಳಲ್ಲಿ ಸೈನಿಕ ಪಾರ್ಕ್ ನಲ್ಲಿ ಸೈನಿಕರ ಶಿಲ್ಪ ಕಲಾಕೃತಿಗಳನ್ನು ತಯಾರಿಸಿ ನಿಮ್ಮಲ್ಲರ ಪ್ರೀತಿಗೆ ಪಾತ್ರನಾಗಿರುವೆ ಎಂದು ನಂಬಿರುತ್ತೇನೆ"

"ಶಿವಮೊಗ್ಗ ನಗರದಲ್ಲಿ ಪರಿಸರದ ಕಾಳಜಿಯ ಬಗ್ಗೆ ಯೋಚಿಸುವಂತೆ ಮಾಡುವ ಸದುದ್ದೇಶದಿಂದ ಆರಂಭಿಸಿದ ಪರಿಸರ ಸ್ನೇಹಿ‌ ಕುಟುಂಬ ಪ್ರಶಸ್ತಿ ವಿತರಣೆಯ 16 ನೇ ದಿನಕ್ಕೆ ಕೊನೆಯದಾಗಿ ನೀಡಿ ನನ್ನ ಶಿವಮೊಗ್ಗ ಜಿಲ್ಲೆಯ ಜಿಲ್ಲಾಧಿಕಾರಿ ಹುದ್ದೆಗೆ ತೃಪ್ತಿದಾಯಕವಾಗಿ ಅಧಿಕಾರವನ್ನು ಹಸ್ತಾಂತರಿಸಿರುವೆ"
ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು ಎಂದು ಪತ್ರವನ್ನು ಮುಗಿಸಿದ್ದಾರೆ.

English summary
IAS officer K.A.Dayanand letter to Shivamogga people. Deputy Commissioner of Shivamogga K.A.Dayanand was transferred on August 6, 2019. He worked one year in the district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X