ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸುಲಭವಾಗಿ ಪೈಪ್ ಕಾಂಪೋಸ್ಟ್ ಘಟಕ ಅಳವಡಿಕೆ ಹೇಗೆ?

|
Google Oneindia Kannada News

ಶಿವಮೊಗ್ಗ, ಡಿಸೆಂಬರ್ 27 : "ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಉತ್ಪಾದನೆಯಾಗುವ ತ್ಯಾಜ್ಯದಲ್ಲಿ ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸಿ ಮೂಲದಲ್ಲಿಯೇ ಸಂಸ್ಕರಿಸಲಾಗುತ್ತಿದೆ. ಕಸ ಸಂಸ್ಕರಣೆಗೆ ಜಿಲ್ಲಾಡಳಿತ ಹೊಸ, ಆಧುನಿಕ ಹಾಗೂ ಸರಳ ವಿಧಾನವನ್ನು ಅಳವಡಿಸಿಕೊಳ್ಳಲು ಮುಂದಾಗಿದೆ" ಎಂದು ಜಿಲ್ಲಾಧಿಕಾರಿ ಕೆ. ಬಿ. ಶಿವಕುಮಾರ್ ಹೇಳಿದರು.

ಶುಕ್ರವಾರ ಜಿಲ್ಲಾಧಿಕಾರಿಗಳ ಮನೆಯ ಆವರಣದಲ್ಲಿ ಪೈಪ್ ಕಾಂಪೋಸ್ಟ್ ಕಿರುಘಟಕವನ್ನು ಸ್ಥಾಪನೆ ಮಾಡಲಾಯಿತು. ಶಿವಮೊಗ್ಗ ಮಹಾನಗರಪಾಲಿಕೆ ಆರಂಭಿಸಿರುವ ತ್ಯಾಜ್ಯ ನಿಯಂತ್ರಣ ಅಭಿಯಾನಕ್ಕೆ ಈ ಮೂಲಕ ಚಾಲನೆ ಸಿಕ್ಕಿತು.

ಕಸ ಸುಟ್ಟಿದ್ದಕ್ಕಾಗಿ ಮಥುರಾದಲ್ಲಿ 16 ರೈತರ ಬಂಧನಕಸ ಸುಟ್ಟಿದ್ದಕ್ಕಾಗಿ ಮಥುರಾದಲ್ಲಿ 16 ರೈತರ ಬಂಧನ

ಮನೆಯಲ್ಲಿ ಉತ್ಪತ್ತಿಯಾಗುವ ಹಸಿ ಕಸವನ್ನು ಮನೆಯಲ್ಲಿಯೇ ಸಂಗ್ರಹಿಸಿ, ಅದನ್ನು ವ್ಯವಸ್ಥಿತವಾಗಿ ಪೈಪ್ ಕಾಂಪೋಸ್ಟ್ ಕೊಳವೆಗೆ ನಿಯಮಾನುಸಾರ ಹಾಕುವುದರಿಂದ ಕಸದ ಪ್ರಮಾಣ ಕಡಿಮೆಯಾಗಲಿದೆ. ಇದರ ಅಳವಡಿಕೆಯಿಂದ ಪ್ರತಿ ಮನೆಯಿಂದ ಪಾಲಿಕೆಯ ಕಸದ ಗಾಡಿಗೆ ಬರುವ ತ್ಯಾಜ್ಯದ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಲಿದೆ.

ಮಹಾಬಲಿಪುರಂ ಬೀಚ್‌ನಲ್ಲಿ ಕಸ ಹೆಕ್ಕಿದ ಮೋದಿ: ವೈರಲ್ ವಿಡಿಯೋಮಹಾಬಲಿಪುರಂ ಬೀಚ್‌ನಲ್ಲಿ ಕಸ ಹೆಕ್ಕಿದ ಮೋದಿ: ವೈರಲ್ ವಿಡಿಯೋ

shivamogga

ಪೈಪ್ ಕಾಂಪೋಸ್ಟ್‌ ಘಟಕಕ್ಕೆ ಹಾಕಿದ ಕಸ ಕೆಲವೇ ತಿಂಗಳುಗಳಲ್ಲಿ ಸಾವಯವ, ಸಾರಯುಕ್ತ ಸುವಾಸಿತ ಗೊಬ್ಬರವಾಗಿ ದೊರೆಯಲಿದೆ. ಅದನ್ನು ಕೈತೋಟಗಳಿಗೆ ಬಳಸಬಹುದಾಗಿದೆ. ನಗರದ ಸರ್ಕಾರಿ ವಸತಿ ಗೃಹಗಳಲ್ಲಿ ಪೈಪ್ ಕಾಂಪೋಸ್ಟ್ ಪೈಪ್ ಅಳವಡಿಸಲು ಪಾಲಿಕೆ ಕಾರ್ಯಕ್ರಮವನ್ನು ರೂಪಿಸಿದೆ.

ಮುಂದಿನ ದಿನಗಳಲ್ಲಿ ಸರ್ಕಾರಿ ಹಾಸ್ಟೆಲ್, ಸರ್ಕಾರಿ ಶಾಲೆಗಳು, ವಿವಿಗಳು, ಖಾಸಗಿ ಕಚೇರಿಗಳು, ಸರ್ಕಾರಿ ಸ್ವಾಮ್ಯದ ಕಚೇರಿಗಳ ಆವರಣಗಳಲ್ಲಿ ಇದನ್ನು ಅಳವಡಿಸಲು ಉದ್ದೇಶಿಸಲಾಗಿದೆ. ಇದರಿಂದಾಗಿ ಪ್ರತಿದಿನ ಉತ್ಪತ್ತಿಯಾಗುವ ಟನ್‍ಗಟ್ಟಲೆ ಕಸದ ಉತ್ಪಾದನೆಯನ್ನು ನಿಯಂತ್ರಿಸಲು ಸಾಧ್ಯವಾಗಲಿದೆ.

ಎಲ್ಲೆಂದರಲ್ಲಿ ಕಸ ಬಿಸಾಡಿ ಬೆಂಗಳೂರಿಗರು ಕಟ್ಟಿದ್ದು 3 ಲಕ್ಷ ದಂಡ! ಎಲ್ಲೆಂದರಲ್ಲಿ ಕಸ ಬಿಸಾಡಿ ಬೆಂಗಳೂರಿಗರು ಕಟ್ಟಿದ್ದು 3 ಲಕ್ಷ ದಂಡ!

ಅಳವಡಿಸುವ ಸರಳ ವಿಧಾನ : 6ಇಂಚು ದಪ್ಪ, 6ಅಡಿ ಎತ್ತರದ ಸಿಮೆಂಟ್ ಅಥವಾ ಮಣ್ಣಿನ ಪ್ಲಾಸ್ಟಿಕ್‍ನ್ನು ಒಂದೂವರೆ ಅಡಿ ಆಳದಲ್ಲಿ ನೆಡಬೇಕು. ಪೈಪ್ ಒಳಗೆ ಕಸ ಹಾಕಬೇಕು.1 ಕೆಜಿ ಬೆಲ್ಲ ಮತ್ತು ಸಗಣಿ ನೀರನ್ನು ಕದಡಿ ಹಾಕಬೇಕು. ಇದರಿಂದಾಗಿ ಜೈವಿಕ ಹುಳುಗಳು ಉತ್ಪತ್ತಿಯಾಗುತ್ತವೆ. ನಂತರ ಮನೆಯಲ್ಲಿ ನಿತ್ಯ ಉತ್ಪತ್ತಿಯಾಗುವ ಬೇಡವಾದ ಜೈವಿಕ ಕಸವನ್ನು ಹಾಕಬೇಕು.

garabage

ಭೂಮಿಯಲ್ಲಿ ಕರಗದ ಯಾವುದೇ ವಸ್ತುಗಳನ್ನು ಪೈಪ್‍ನೊಳಗೆ ಹಾಕಬಾರದು. ವಾರಕ್ಕೊಮ್ಮೆ ಅರ್ಧ ಮಗ್ ನೀರು ಮತ್ತು ಒಂದು ಹಿಡಿ ಮಣ್ಣನ್ನು ಒಳಗೆ ಹಾಕಬೇಕು. ಪೈಪ್ ಮೇಲ್ಭಾಗವನ್ನು ಮರದತುಂಡ ಅಥವಾ ಹಂಚಿನಿಂದ ಮುಚ್ಚಬೇಕು.

ಪೈಪ್ ಕಾಂಪೋಸ್ಟ್ ಉಪಯೋಗ : ಪೈಪ್ ಕಾಂಪೋಸ್ಟ್ ಘಟಕದಿಂದಾಗಿ ತ್ಯಾಜ್ಯವನ್ನು ಮೂಲದಲ್ಲಿಯೇ ನಿರ್ವಹಿಸಬೇಕು. ಇದರಿಂದಾಗಿ ಕಡಿಮೆ ಜಾಗ, ಕಡಿಮೆ ಖರ್ಚು, ಸರಳ ರೀತಿಯಲ್ಲಿ ಕಸ ನಿರ್ವಹಣೆ ಸಾಧ್ಯ. ಕಸವನ್ನು ಗೊಬ್ಬರವನ್ನಾಗಿ ಪರಿವರ್ತಿಸಿ ಸಹ ಬಳಸಬಹುದಾಗಿದೆ.

English summary
People can install pipe compost unit at home in the low cast and convert wet waste into compost.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X