ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾರಿ ಮಳೆ: ಶಿವಮೊಗ್ಗದ ಜಲಾಶಯಗಳಿಗೆ ಒಳ ಹರಿವು ಹೆಚ್ಚಳ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಮೇ 20: ಭಾರಿ ಮಳೆ ಹಿನ್ನೆಲೆ ಶಿವಮೊಗ್ಗ ಜಿಲ್ಲೆಯ ಪ್ರಮುಖ ಜಲಾಶಯಗಳ ಒಳ ಹರಿವು ಪ್ರಮಾಣ ಹೆಚ್ಚಳವಾಗಿದೆ. ತುಂಗಾ ಜಲಾಶಯ ಭರ್ತಿ ಆಗಿರುವುದರಿಂದ ಇಲ್ಲಿ ಹೊರ ಹರಿವು ಕೂಡ ದಾಖಲಾಗಿದೆ.

ಯಾವ್ಯಾವ ಜಲಾಶಯದಲ್ಲಿ ಎಷ್ಟಿದೆ ನೀರು?

ಲಿಂಗನಮಕ್ಕಿ ಜಲಾಶಯಕ್ಕೆ 11,125 ಕ್ಯೂಸೆಕ್ ಒಳಹರಿವು ಇದೆ. ಜಲಾಶಯದ ಗರಿಷ್ಠ ಮಟ್ಟ 1819 ಅಡಿ. ಪ್ರಸ್ತುತ 1763.65 ಅಡಿಯಷ್ಟು ನೀರಿದೆ. ಕಳೆದ 24 ಗಂಟೆ ಅವಧಿಯಲ್ಲಿ ಲಿಂಗನಮಕ್ಕಿ ಜಲಾಶಯ ವ್ಯಾಪ್ತಿಯಲ್ಲಿ 54.2 ಮಿ.ಮೀ ಮಳೆಯಾಗಿದೆ. ಭದ್ರಾ ಜಲಾಶಯಕ್ಕೆ 7799 ಕ್ಯೂಸೆಕ್ ಒಳಹರಿವು ದಾಖಲಾಗಿದೆ. ಡ್ಯಾಂನ ಗರಿಷ್ಠ ಮಟ್ಟ 186 ಅಡಿ. ಪ್ರಸ್ತುತ 149.7 ಅಡಿಯಷ್ಟು ನೀರಿದೆ. ತುಂಗಾ ಜಲಾಶಯ ಗರಿಷ್ಠ ಮಟ್ಟ ತಲುಪಿದೆ. ಆದ್ದರಿಂದ ಒಳ ಹರಿವಿನಷ್ಟೆ ಪ್ರಮಾಣದ ನೀರನ್ನು ಹೊರಗೆ ಬಿಡಲಾಗುತ್ತಿದೆ. ಜಲಾಶಯಕ್ಕೆ ಸದ್ಯ 11,976 ಕ್ಯೂಸೆಕ್ ಒಳ ಹರಿವು ಇದೆ. ಅಷ್ಟೆ ಪ್ರಮಾಣದ ನೀರನ್ನು ಹೊರಗೆ ಬಿಡಲಾಗುತ್ತಿದೆ. ಮಾಣಿ ಡ್ಯಾಂನಲ್ಲಿ 380 ಕ್ಯೂಸೆಕ್ ಒಳಹರಿವು ಇದೆ. 390 ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ. ಪಿಕಪ್ ಡ್ಯಾಂನಲ್ಲಿ 671 ಕ್ಯೂಸೆಕ್ ಒಳಹರಿವು ದಾಖಲಾಗಿದೆ.

Increase in flow to the reservoirs of Shivamogga

ನೂರು ಮಿ.ಮೀಗಿಂತಲೂ ಹೆಚ್ಚು ಮಳೆ:

ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ನಿನ್ನೆಯಿಂದ ಭಾರಿ ಮಳೆಯಾಗುತ್ತಿದೆ. ನಿರಂತರ ಮಳೆಗೆ ಜನರು ತತ್ತರಿಸಿ ಹೋಗಿದ್ದಾರೆ. ಬೆಳೆ ಹಾನಿ ಉಂಟಾಗಿದೆ. ಕೆಲವು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನೂರು ಮಿ.ಮೀ ಗಿಂತಲು ಹೆಚ್ಚು ಮಳೆ ಸುರಿದಿದೆ. ಅದರ ವಿವರ ಇಲ್ಲಿದೆ.

Increase in flow to the reservoirs of Shivamogga

ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ?

ಶಿವಮೊಗ್ಗ ನಗರದಲ್ಲಿ 124 ಮಿ.ಮೀ, ಶಿವಮೊಗ್ಗದ ಮದ್ದಿನಕೊಪ್ಪದಲ್ಲಿ 125 ಮಿ.ಮೀ, ಅಗಸವಳ್ಳಿಯಲ್ಲಿ 127 ಮಿ.ಮೀ, ಕೋಟೆಗಂಗೂರು 125 ಮಿ.ಮೀ, ಮಲ್ಲಾಪುರದಲ್ಲಿ 124 ಮಿ.ಮೀ, ಆಯನೂರಿನಲ್ಲಿ 126 ಮಿ.ಮೀ, ಪುರದಾಳುವಿನಲ್ಲಿ 128 ಮಿ.ಮೀ, ಬಾಳೆಕೊಪ್ಪ 125 ಮಿ.ಮೀ ಮಳೆಯಾಗಿದೆ. ಭದ್ರಾವತಿ ತಾಲೂಕು ದಾಸರಕಲ್ಲಹಳ್ಳಿಯಲ್ಲಿ 124 ಮಿ.ಮೀ. ಶಿಕಾರಿಪುರದ ಅಂಜನಾಪುರದಲ್ಲಿ 125 ಮಿ.ಮೀ, ಹಾರೋಗೊಪ್ಪದಲ್ಲಿ 125 ಮಿ.ಮೀ ಮಳೆ ಸುರಿದಿದೆ. ತೀರ್ಥಹಳ್ಳಿಯ ಅಗ್ರಹಾರದಲ್ಲಿ 124 ಮಿ.ಮೀ, ತ್ರಿಯಂಬಕಪುರ 128 ಮಿ.ಮೀ, ದೇಮ್ಲಾಪುರ 124 ಮಿ.ಮೀ, ಹಾದಿಗಲ್ಲು 127 ಮಿ.ಮೀ ಮಳೆಯಾಗಿದೆ.

English summary
Heavy rainfall has increased the flow rate of major reservoirs in Shivamogga district. As the Tunga reservoir is filled, the outflow is also recorded here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X