ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ ಮಹಾನಗರ ಪಾಲಿಕೆ ಬಿಜೆಪಿ ತೆಕ್ಕೆಗೆ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಸೆಪ್ಟೆಂಬರ್. 03: ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಹೊರ ಬಿದ್ದಿದ್ದು, ಶಿವಮೊಗ್ಗದ 35 ವಾರ್ಡ್ ಗಳಲ್ಲಿ ಬಿಜೆಪಿ 20 ಸೀಟುಗಳನ್ನು ಗೆದ್ದು ಬಹುಮತ ಪಡೆದಿದೆ. ಬಹುಮತಕ್ಕೆ 18 ಸೀಟು ಬರಬೇಕಿದ್ದು, ಬಿಜೆಪಿ 20 ಸೀಟು ಪಡೆಯುವ ಮೂಲಕ ಬಹುಮತ ಸಾಬೀತುಪಡಿಸಿದೆ.

LIVE: ಪಕ್ಷಗಳ ಬಲಾಬಲ: ಕಾಂಗ್ರೆಸ್ 982 , ಬಿಜೆಪಿ 927, ಜೆಡಿಎಸ್ 375 LIVE: ಪಕ್ಷಗಳ ಬಲಾಬಲ: ಕಾಂಗ್ರೆಸ್ 982 , ಬಿಜೆಪಿ 927, ಜೆಡಿಎಸ್ 375

ಕಾಂಗ್ರೆಸ್ 7 , ಜೆಡಿಎಸ್ 2, ಎಸ್.ಡಿ.ಪಿ.ಐ 1, ಪಕ್ಷೇತರ 5 ಸ್ಥಾನ ಪಡೆದುಕೊಂಡಿದೆ.

 ಸ್ಥಳೀಯ ಸಂಸ್ಥೆ ಚುನಾವಣೆ : ಕಾಂಗ್ರೆಸ್‌ ದೊಡ್ಡ ಪಕ್ಷ, ಬಿಜೆಪಿಗೆ 2ನೇ ಸ್ಥಾನ! ಸ್ಥಳೀಯ ಸಂಸ್ಥೆ ಚುನಾವಣೆ : ಕಾಂಗ್ರೆಸ್‌ ದೊಡ್ಡ ಪಕ್ಷ, ಬಿಜೆಪಿಗೆ 2ನೇ ಸ್ಥಾನ!

Shimoga Municipal Corporation election BJP won 20 seats

ಕಳೆದಬಾರಿ ಶಿವಮೊಗ್ಗ ನಗರಸಭೆಯ ಅಧಿಕಾರವನ್ನು ಬಿಜೆಪಿ ಪಕ್ಷ ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಂಡು ಹಿಡಿದಿತ್ತು. ಆದರೆ ಬದಲಾದ ಕಾಲಘಟ್ಟದಲ್ಲಿ ಜೆಡಿಎಸ್ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿಯಿತು. ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಟ್ಟಿದ್ದವು.

 ಸ್ಥಳೀಯ ಸಂಸ್ಥೆಗಳ ಚುನಾವಣೆ: ಯಾರು ಏನು ಹೇಳಿದರು? ಸ್ಥಳೀಯ ಸಂಸ್ಥೆಗಳ ಚುನಾವಣೆ: ಯಾರು ಏನು ಹೇಳಿದರು?

In Shimoga Municipal Corporation election BJP won 20 seats

ಶಿವಮೊಗ್ಗ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಗೆಲುವು ಸಾಧಿಸಲು ಮೂರು ಪಕ್ಷಗಳೂ ಶತಾಯಗತಾಯ ಪ್ರಯತ್ನಿಸಿದ್ದವು. ಆಗಸ್ಟ್ 31 ರಂದು ನಡೆದ ಚುನಾವಣೆಯಲ್ಲಿ ಮತದಾರ ಯಾವ ಅಭ್ಯರ್ಥಿಗೆ ಹರಸಿ ಅಧಿಕಾರಕ್ಕೇರಿಸಲಿದ್ದಾನೆ ಎಂಬುದು ಇದೀಗ ಬಯಲಾಗಿದೆ.

English summary
Shimoga Municipal Corporation election results announced. In the 35 wards of Shimoga BJP won 20 seats. Congress 7, JDS 2, SDPI 1, Independent won 5 seats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X