• search
  • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಾಮಪತ್ರ ಸಲ್ಲಿಸಿ, ಮತಯಾಚನೆಗಿಳಿದ ಗೀತಾ ಶಿವಣ್ಣ

By Mahesh
|

ಶಿವಮೊಗ್ಗ, ಮಾ.25 : ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಬಂಗಾರಪ್ಪರ ಪುತ್ರಿ, ಚಿತ್ರನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಅವರು ಮತಯಾಚನೆ ಆರಂಭಿಸಿದ್ದಾರೆ. ಗ್ರಾಮಾಂತರ ಪ್ರದೇಶಗಳಲ್ಲಿ ಇಂದು ಚುನಾವಣಾ ಪ್ರಚಾರ ಕಾರ್ಯದಲ್ಲಿ ಗೀತಾ ಅವರು ನಿರತರಾಗಿದ್ದಾರೆ.

ಗೀತಾ ಶಿವರಾಜ್ ಕುಮಾರ್ ಅವರು ಸೋಮವಾರ ಮಧ್ಯಾಹ್ನ ನಗರದ ಡಿ.ಸಿ. ಕಚೇರಿಯಲ್ಲಿ ಚುನಾವಣಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ‌ರವರಿಗೆ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೂ ಮುನ್ನ 'ಸಂವಿಧಾನದ ವಿಧಿ ವಿಧಾನಗಳಿಗೆ ಅನುಗುಣವಾಗಿ ನಡೆದುಕೊಳ್ಳುತ್ತೇನೆ' ಎಂದು ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿ, ಸಹಿ ಹಾಕಿದರು. ಈ ಸಂದರ್ಭದಲ್ಲಿ ಪತಿ, ನಟ ಶಿವರಾಜ್ ‌ಕುಮಾರ್, ಶಾಸಕ ಜಮೀರ್ ಅಹ್ಮದ್, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್, ಚಿಕ್ಕೇಗೌಡ ಉಪಸ್ಥಿತರಿದ್ದರು.

ಉಳಿದಂತೆ ನಾಮಪತ್ರ ಸಲ್ಲಿಕೆಯ ಮೆರವಣಿಗೆಯಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶಾರದಾ ಪೂರ್ಯನಾಯ್ಕಾ, ಭದ್ರಾವತಿ ಕ್ಷೇತ್ರದ ಶಾಸಕ ಅಪ್ಪಾಜಿಗೌಡ, ದಾವಣಗೆರೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಹಿಮಾ ಪಟೇಲ್, ಚಿತ್ರನಟ ವಿನೋದ್ ಪ್ರಭಾಕರ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು. ಗೀತಾ ಶಿವರಾಜ್ ಕುಮಾರ್ ಅವರ ಪ್ರಚಾರ ಮೆರವಣಿಗೆ ಚಿತ್ರಗಳು ಇನ್ನಷ್ಟು ಮಾಹಿತಿ ಮುಂದಿದೆ. [ಚಿತ್ರಗಳ ಕೃಪೆ: ಶಿವು ಅಡ್ಡಾ.ಕಾಂ]

ಬೆಂಗಳೂರಿನಲ್ಲಿ ಡಾ. ರಾಜ್ ಸಮಾಧಿಗೆ ನಮನ

ಬೆಂಗಳೂರಿನಲ್ಲಿ ಡಾ. ರಾಜ್ ಸಮಾಧಿಗೆ ನಮನ

ಗೀತಾ ಶಿವರಾಜ್ ದಂಪತಿ ಭಾನುವಾರದಂದು ಮಲ್ಲೇಶ್ವರದ ಸರ್ಕಲ್ ಮಾರಮ್ಮ, ಗಂಗಮ್ಮ ದೇವಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರು. ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಪತಿ ಶಿವರಾಜ್‌ಕುಮಾರ್ ಜತೆ ರಾಜ್ ‌ಕುಮಾರ್ ಸಮಾಧಿಗೆ ತೆರಳಿ ಅಲ್ಲಿಯೂ ಕೂಡ ಪೂಜೆ ಸಲ್ಲಿಸಿದ್ದರು. ಸೋಮವಾರ ಬೆಳಗ್ಗೆ ಕೋಟೆ ಗಣೇಶನ ಗುಡಿ, ಮಾರಿಕಾಂಬ ದೇವಾಲಯ, ಸೇಕ್ರೇಡ್ ಹಾರ್ಟ್ ಚರ್ಚ್ ‌ ಹಾಗೂ ಮಸೀದಿಗೆ ತೆರಳಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು

ನಾಮಪತ್ರ ಸಲ್ಲಿಕೆಗೂ ಮುನ್ನ ಮೆರವಣಿಗೆ

ನಾಮಪತ್ರ ಸಲ್ಲಿಕೆಗೂ ಮುನ್ನ ಮೆರವಣಿಗೆ

ನಾಮಪತ್ರ ಸಲ್ಲಿಕೆಗೂ ಮುನ್ನ ಶಿವಮೊಗ್ಗದ ಪ್ರಮುಖ ಬೀದಿಗಳಲ್ಲಿ ಜೆಡಿಎಸ್ ಕಾರ್ಯಕರ್ತರು ಅಭ್ಯರ್ಥಿಯ ಮೆರವಣಿಗೆ ನಡೆಸಿದರು. ರಾಮಣ್ಣ ಶ್ರೇಷ್ಠಿ ಪಾರ್ಕ್ ‌ನಿಂದ ಆರಂಭವಾದ ಮೆರವಣಿಗೆಯು ಗಾಂಧಿ ಬಜಾರ್, ಶಿವಪ್ಪ ನಾಯಕ ವೃತ್ತ, ಬಿ.ಎಚ್.ರಸ್ತೆ, ಎ.ಎ.ವೃತ್ತ, ನೆಹರೂ ರಸ್ತೆ, ಗೋಪಿ ವೃತ್ತ, ಬಾಲರಾಜ್ ‌ಅರಸ್ ರಸ್ತೆಯ ಮೂಲಕ ಮಹಾವೀರ ವೃತ್ತಕ್ಕೆ ಆಗಮಿಸಿತು.ಅಲ್ಲಿಂದ ಅಭ್ಯರ್ಥಿ ಸೇರಿದಂತೆ ಐವರಿಗೆ ಮಾತ್ರ ಪೊಲೀಸರು ಡಿ.ಸಿ. ಕಚೇರಿಯ ಒಳಕ್ಕೆ ಪ್ರವೇಶಾವಕಾಶ ನೀಡಿದರು.

ಬೃಹತ್ ಮೆರವಣಿಗೆಯಿಂದ ಸಂಚಾರ ಅಸ್ತವ್ಯಸ್ತ

ಬೃಹತ್ ಮೆರವಣಿಗೆಯಿಂದ ಸಂಚಾರ ಅಸ್ತವ್ಯಸ್ತ

ಮೆರವಣಿಗೆಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ವಾಹನ ಸವಾರರು ಪರದಾಡುವಂತಾಯಿತು. ಮುಖ್ಯ ರಸ್ತೆಗಳಿಗೆ ಹೊಂದಿಕೊಂಡಂತಿದ್ದ ಸಮಾನಾಂತರ ರಸ್ತೆಗಳಲ್ಲಿ ವಾಹನಗಳು ಸಂಚರಿಸುತ್ತಿದ್ದ ದೃಶ್ಯ ಕಂಡುಬಂದಿತು. ಆದರೆ ಟ್ರಾಫಿಕ್ ಜಾಮ್ ಸರ್ವೇ ಸಾಮಾನ್ಯವಾಗಿತ್ತು. ಸುಗಮ ವಾಹನ ಸಂಚಾರಕ್ಕೆ ಪೊಲೀಸರು ಹರಸಾಹಸ ಪಡುವಂತಾಯಿತು.

ಗೀತಾ -ಶಿವರಾಜ್ ಪರ ಬಹುಪರಾಕ್ ಘೋಷಣೆ

ಗೀತಾ -ಶಿವರಾಜ್ ಪರ ಬಹುಪರಾಕ್ ಘೋಷಣೆ

ಮೆರವಣಿಗೆಯಲ್ಲಿ ಚಿತ್ರ ನಟರಾದ ಶಿವರಾಜ್ ‌ಕುಮಾರ್, ವಿನೋದ್ ಪ್ರಭಾಕರ್, ಮಧು ಬಂಗಾರಪ್ಪ, ಅಭ್ಯರ್ಥಿ ಗೀತಾ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು. ಶಿವರಾಜ್ ಕುಮಾರ್ ಗೆ ಹಸ್ತಲಾಘವ ನೀಡಲು ಅಭಿಮಾನಿಗಳು ಮುಗಿಬೀಳುತ್ತಿದ್ದ ದೃಶ್ಯ ಕಂಡುಬಂದಿತು. ಮಹಾವೀರ ವೃತ್ತದಲ್ಲಿ ಅಭಿಮಾನಿಗಳ ನಡುವಿನಿಂದ ಜೀಪ್ ‌ನಿಂದಿಳಿದು ಡಿ.ಸಿ. ಕಚೇರಿ ಒಳಗೆ ಪ್ರವೇಶಿಸಲು ಶಿವರಾಜ್ ‌ಕುಮಾರ್ ಅಕ್ಷರಶಃ ಪರದಾಡುವಂತಾಯಿತು

ಗೀತಾ ಪರ ಜೆಡಿಎಸ್ ಕಾರ್ಯಕರ್ತರ ದಂಡು

ಗೀತಾ ಪರ ಜೆಡಿಎಸ್ ಕಾರ್ಯಕರ್ತರ ದಂಡು

ನಾಮಪತ್ರ ಸಲ್ಲಿಕೆಯ ಮೆರವಣಿಗೆಯಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶಾರದಾ ಪೂರ್ಯನಾಯ್ಕಾ, ಭದ್ರಾವತಿ ಕ್ಷೇತ್ರದ ಶಾಸಕ ಅಪ್ಪಾಜಿಗೌಡ, ದಾವಣಗೆರೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಹಿಮಾ ಪಟೇಲ್, ಚಿತ್ರನಟ ವಿನೋದ್ ಪ್ರಭಾಕರ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು. ಮಂಗಳವಾರದಿಂದ ಆರಂಭಗೊಂಡಿರುವ ಪ್ರಚಾರ ಕಾರ್ಯದಲ್ಲೂ ಇವರುಗಳು ಸಾಥ್ ನೀಡಿದ್ದಾರೆ.

English summary
Geetha Shivarajkumar, JD(S) candidate from the Shimoga Lok Sabha constituency, filed her nomination here on Monday. She was accompanied by her husband and actor Shivarajkumar, JD(S) MLA Zameer Ahmed Khan and the party’s district president M. Srikanth. Geetha will be campaigning in Shimoga rural areas on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X