• search
  • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾಗೋಡು ತಿಮ್ಮಪ್ಪರನ್ನು ಜೆಡಿಎಸ್‌ ಪಕ್ಷದಿಂದ ಮಂತ್ರಿ ಮಾಡಲು ಸಿದ್ಧ: ಎಚ್‌ಡಿಕೆ

|

ಸಾಗರ, ಅಕ್ಟೋಬರ್ 30: ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿ ಹಿರಿಯ ರಾಜಕೀಯ ಮುತ್ಸಧಿ ಕಾಗೋಡು ತಿಮ್ಮಪ್ಪ ಅವರನ್ನು ಜೆಡಿಎಸ್‌ ಖೋಟಾದಿಂದ ಮಂತ್ರಿ ಮಾಡಲು ಸಿದ್ಧ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಸಾಗರದಲ್ಲಿ ಜೆಡಿಎಸ್-ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾಗೋಡು ತಿಮ್ಮಪ್ಪ ಅವರು ಒಪ್ಪುವುದಿರೆ ಅವರನ್ನು ಪರಿಷತ್‌ಗೆ ನೇಮಿಸಲೂ ನಾವು ಸಿದ್ಧರಿದ್ದೇವೆ ಎಂದು ಭರವಸೆ ನೀಡಿದ್ದಾರೆ.

ಕಾಗೋಡು ತಿಮ್ಮಪ್ಪ ಅವರ ಹಿರಿತವನ್ನು ಕೊಂಡಾಡಿದ ಕುಮಾರಸ್ವಾಮಿ ಅವರು, ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದು ಅವರ ಮಾರ್ಗದರ್ಶನದಲ್ಲಿ ಇತರರು ಉತ್ತಮವಾಗಿ ಕೆಲಸ ಮಾಡಲೆಂದು, ಅವರ ಉಪಸ್ಥಿತಿ ಇದ್ದರೆ ಕಿರಿಯರು ಚೆನ್ನಾಗಿ ಕೆಲಸ ಮಾಡುತ್ತಾರೆ ಎಂದು ಅವರು ಹೇಳಿದರು.

ಶಿವಮೊಗ್ಗದಲ್ಲಿ ಬಿಜೆಪಿಗೆ ಜಯ, ಸರ್ಕಾರ ಉಳಿಯೋಲ್ಲ : ಯಡಿಯೂರಪ್ಪ

ಸಾಗರದ ಪ್ರಚಾರ ಸಭೆಯಲ್ಲಿ ಕುಮಾರಸ್ವಾಮಿ ಅವರು ಮಾತನಾಡಬೇಕಾದರೆ ಕಾಂಗ್ರೆಸ್‌ ಕಾರ್ಯಕರ್ತನೋರ್ವ ಕಾಗೋಡು ತಿಮ್ಮಪ್ಪ ಅವರಿಗೆ ಸರ್ಕಾರದಲ್ಲಿ ಉನ್ನತ ಜವಾಬ್ದಾರಿ ನೀಡಿ ಎಂದು ಆಗ್ರಹಿಸಿದಾಗ ಕುಮಾರಸ್ವಾಮಿ ಈ ಮಾತುಗಳನ್ನು ಹೇಳಿದರು.

'ಜೆಡಿಎಸ್‌ ಪಕ್ಷದಿಂದಲೇ ಮಂತ್ರಿ ಮಾಡ್ತೇನೆ'

'ಜೆಡಿಎಸ್‌ ಪಕ್ಷದಿಂದಲೇ ಮಂತ್ರಿ ಮಾಡ್ತೇನೆ'

ಸಚಿವ ಸ್ಥಾನಗಳ ಹಂಚಿಕೆಯಲ್ಲಿ ಜೆಡಿಎಸ್‌ ಪಕ್ಷ ಇನ್ನೂ ಖಾತೆಯನ್ನು ಹಾಗೆ ಇಟ್ಟುಕೊಂಡಿದ್ದೇವೆ. ಅದನ್ನೇ ಕಾಗೋಡು ತಿಮ್ಮಪ್ಪ ಅವರಿಗೆ ನೀಡಲು ನಾನು ಸಿದ್ಧನಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.

ಶಿವಮೊಗ್ಗ ಉಪ ಚುನಾವಣೆ : ಬಿಜೆಪಿಗೆ ಗೆಲುವು ಅಷ್ಟು ಸುಲಭವಲ್ಲ!

ಕಾಗೋಡು ಮೇಲೆ ಪೂಜ್ಯ ಭಾವ ಇದೆ: ಎಚ್‌ಡಿಕೆ

ಕಾಗೋಡು ಮೇಲೆ ಪೂಜ್ಯ ಭಾವ ಇದೆ: ಎಚ್‌ಡಿಕೆ

ಕಾಗೋಡು ಅವರು ನೇರವಾದಿ ಅವರದ್ದು ಏನಿದ್ದರೂ ನೇರ ಮಾತು, ಅಂತಹವರು ರಾಜಕೀಯದಲ್ಲಿ ಬಲು ಅಪರೂಪ. ಅವರ ಬಗ್ಗೆ ನನಗೆ ಪೂಜ್ಯ ಭಾವನೆ ಇದೆ. ಅವರು ತಯಾರಿದ್ದರೆ ಮಂತ್ರಿ ಮಾಡಲು ಸಿದ್ಧ ಎಂದು ಕುಮಾರಸ್ವಾಮಿ ಅವರು ಈ ಸಮಯದಲ್ಲಿ ಹೇಳಿದರು. ಕುಮಾರಸ್ವಾಮಿ ಮಾತಿಗೆ ಭಾರಿ ಕರತಾಡನ ಕೇಳಿಬಂತು.

ಬಿ. ವೈ. ರಾಘವೇಂದ್ರ ಡಮ್ಮಿ ಕ್ಯಾಂಡಿಡೇಟ್: ಸಿದ್ದರಾಮಯ್ಯ ಲೇವಡಿ

ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದ ಕಾಗೋಡು

ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದ ಕಾಗೋಡು

ಕಾಂಗ್ರೆಸ್ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಸಾಗರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಬಿಜೆಪಿಯ ಹರತಾಳು ಹಾಲಪ್ಪ ವಿರುದ್ಧ ಸುಮಾರು 8000 ಮತಗಳ ಅಂತರದಿಂದ ಸೋಲನ್ನಪ್ಪಿದ್ದರು.

'ಕುಮಾರಸ್ವಾಮಿ ಸಿಎಂ ಆಗಬೇಕೆಂಬ ಬಂಗಾರಪ್ಪ ಆಸೆ ಈಡೇರಿಸಿದ ಕಾಂಗ್ರೆಸ್'

ಲೋಕಸಭೆ ಚುನಾವಣೆ ಸೀಟು

ಲೋಕಸಭೆ ಚುನಾವಣೆ ಸೀಟು

ಶಿವಮೊಗ್ಗದಿಂದ ಕಾಗೋಡು ತಿಮ್ಮಪ್ಪ ಅವರಿಗೆ ಲೋಕಸಭೆ ಚುನಾವಣೆ ಸೀಟು ಕೊಡಬೇಕೆಂದು ಆರಂಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಿಸಿದ್ದರು ಆದರೆ ಕಾಂಗ್ರೆಸ್-ಜೆಡಿಎಸ್‌ ಮೈತ್ರಿಯು ಮಧು ಬಂಗಾರಪ್ಪ ಅವರಿಗೆ ಟಿಕೆಟ್ ನೀಡಿತು. ಇದೀಗತ ಮಧು ಬಂಗಾರಪ್ಪ ಅವರ ಪರ ಕಾಗೋಡು ಅವರು ಪ್ರಚಾರ ಮಾಡುತ್ತಿದ್ದಾರೆ.

English summary
CM Kumaraswamy said if Kagodu Thimmappa is ready i am ready to make is as minister that too from jds. He was talking in jds-congress by election campaign in Sagara.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X