ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಡಿ ವಿಚಾರ ಕೇಳಬೇಡಿ ವಾಕರಿಕೆ ಬರುತ್ತೆ; ಕೆ. ಎಸ್. ಈಶ್ವರಪ್ಪ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಮಾರ್ಚ್ 28; ರಮೇಶ್ ಜಾರಕಿಹೊಳಿ ಸಿಡಿ ವಿಚಾರ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈ ನಡುವೆ ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್. ಈಶ್ವರಪ್ಪ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, "ಸಿಡಿ ವಿಚಾರ ಮಾತನಾಡೋಕೆ ತಮಗೆ ವಾಕರಿಕೆ ಬರುತ್ತಿದೆ" ಎಂದು ತಿಳಿಸಿದರು.

ಭಾನುವಾರ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, "ಸಿಡಿ ವಿಚಾರದ ಬಗ್ಗೆ ತನ್ನನ್ನು ಏನೂ ಕೇಳಬೇಡಿ. ಅದು ಅವರು ಅವರಿಗೆ ಬಿಟ್ಟಿ ವಿಚಾರ. ಸಿಡಿ ವಿಚಾರ ಮಾತನಾಡಲು ನನಗೆ ವಾಕರಿಕೆ ಬರುತ್ತದೆ. ನನಗೆ ಸಿಡಿ ವಿಚಾರದಲ್ಲಿ ಆಸಕ್ತಿ ಇಲ್ಲ" ಎಂದರು.

ಡಿಕೆ ಶಿವಕುಮಾರ್ ವಿರುದ್ಧ ಬಳಸಿದ್ದ 'ಅವಾಚ್ಯ' ಪದವನ್ನು ವಾಪಸ್ ಪಡೆದ ರಮೇಶ್ ಜಾರಕಿಹೊಳಿಡಿಕೆ ಶಿವಕುಮಾರ್ ವಿರುದ್ಧ ಬಳಸಿದ್ದ 'ಅವಾಚ್ಯ' ಪದವನ್ನು ವಾಪಸ್ ಪಡೆದ ರಮೇಶ್ ಜಾರಕಿಹೊಳಿ

"ರಾಜ್ಯದಲ್ಲಿ ಯಾವುದೇ ಚುನಾವಣೆ ನಡೆದರೂ ಬಿಜೆಪಿ ಗೆಲುವು ನಿಶ್ಚಿತ. ಇತ್ತೀಚಿಗೆ ನಡೆದ ಉಪಚುನಾವಣೆಗಳ ಪೈಕಿ 17 ರಲ್ಲಿ 14ನ್ನು ನಾವು ಗೆದ್ದಿದ್ದೇವೆ. ಇದೀಗ ಬಸವಕಲ್ಯಾಣ, ಮಸ್ಕಿ ಮತ್ತು ಬೆಳಗಾವಿಗೆ ಉಪಚುನಾವಣೆ ಘೋಷಣೆಯಾಗಿದೆ. ಮಾರ್ಚ್ 30 ರಂದು ನಮ್ಮ ಅಭ್ಯರ್ಥಿ ಬೆಳಗಾವಿಯಲ್ಲಿ ನಾಮಪತ್ರ ಸಲ್ಲಿಸಲಿದ್ದು, ಸಿಎಂ ಯಡಿಯೂರಪ್ಪ, ರಾಜ್ಯಾಧ್ಯಕ್ಷರು, ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಶಿ, ನಾನು ಸೇರಿದಂತೆ ಎಲ್ಲರೂ ಹೋಗುತ್ತೇವೆ" ಎಂದು ಈಶ್ವರಪ್ಪ ತಿಳಿಸಿದರು.

ಡಿಕೆಶಿ ವಿರುದ್ಧ ಪ್ರತಿಭಟನೆ; ಬೆಳಗಾವಿಗೆ ಹೊರಟು ನಿಂತ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ವಿರುದ್ಧ ಪ್ರತಿಭಟನೆ; ಬೆಳಗಾವಿಗೆ ಹೊರಟು ನಿಂತ ಕೆಪಿಸಿಸಿ ಅಧ್ಯಕ್ಷ

I Will Not Comment On Ramesh Jarakiholi CD Case

ಮೂರು ಕ್ಷೇತ್ರದಲ್ಲೂ ಗೆಲ್ಲುತ್ತೇವೆ; "ಕೆಲವು ಪಕ್ಷಗಳು ಅಭ್ಯರ್ಥಿಗಳನ್ನೇ ಹಾಕಲ್ಲ.‌ ಇನ್ನೂ ಕೆಲವು ಪಕ್ಷ ನೆಪಮಾತ್ರಕ್ಕೆ ಅಭ್ಯರ್ಥಿ ಕಣಕ್ಕಿಳಿಸುತ್ತಿದ್ದಾರೆ. ಮೂರು ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿಗಳು ದಿಗ್ವಿಜಯ ಸಾಧಿಸುತ್ತಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳು, ಪಕ್ಷದ ಕಾರ್ಯಕರ್ತರ ಸಂಘಟನೆಯ ಬಲದಿಂದ‌ ಗೆಲ್ಲುತ್ತೇವೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನನ್ನ ಹೆಸರು ತಾನೇ ಪ್ರಸ್ತಾಪ ಮಾಡಲಿ ಬಿಡಿ; ಡಿಕೆ ಶಿವಕುಮಾರ್ನನ್ನ ಹೆಸರು ತಾನೇ ಪ್ರಸ್ತಾಪ ಮಾಡಲಿ ಬಿಡಿ; ಡಿಕೆ ಶಿವಕುಮಾರ್

ಶಿವಮೊಗ್ಗ ನಗರದ ವಿವಿಧೆಡೆ ಭೇಟಿ ನೀಡಿದ ಸಚಿವ ಕೆ. ಎಸ್. ಈಶ್ವರಪ್ಪ, ಹಲವು ಕಾಮಗಾರಿಗಳಿಗೆ ಚಾಲನೆ ನೀಡಿದರು. ಗೋಪಾಳ 2ನೇ ಹಂತದ ವಸತಿ ಬಡಾವಣೆಯಲ್ಲಿ 25 ಲಕ್ಷ ವೆಚ್ಚದಲ್ಲಿ ಉದ್ಯಾನವ ಅಭಿವೃದ್ಧಿ, 25 ಲಕ್ಷ ವೆಚ್ಚದಲ್ಲಿ ಕಾಂಕ್ರಿಟ್ ಬಾಕ್ಸ್ ಚರಂಡಿ ಯೋಜನೆಗೆ ಚಾಲನೆ ನೀಡಿದರು.

English summary
Minister of rural development and panchayat raj K. S. Eshwarappa said that i will not comment on the issue of former minister Ramesh Jarakiholi CD case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X