ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಡಿಯೋ; ಶಿವಮೊಗ್ಗದ ಕೂಡ್ಲಿಯಲ್ಲಿ ವೈಭವದ ಜಾತ್ರೆ, ಪುಣ್ಯಸ್ನಾನ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಏಪ್ರಿಲ್ 03; ಶಿವಮೊಗ್ಗದ ಕೂಡ್ಲಿಯಲ್ಲಿ ಪುರಾಣ ಪ್ರಸಿದ್ಧ ಶ್ರೀ ಸಂಗೇಶ್ವರ ಸ್ವಾಮಿ ಜಾತ್ರೆ ಅದ್ಧೂರಿಯಿಂದ ನಡೆಯುತ್ತಿದೆ. ತುಂಗಾ, ಭದ್ರಾ ಸಂಗಮ ಕ್ಷೇತ್ರದಲ್ಲಿ ಪುಣ್ಯ ಸ್ನಾನ ಮಾಡಿ, ಭಕ್ತರು ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಇವತ್ತು ರಥೋತ್ಸವ ನಡೆಯುತ್ತಿದ್ದು, ಸುಮಾರು 200 ಹಳ್ಳಿಯ ಜನರು ಪಾಲ್ಗೊಳ್ಳಲಿದ್ದಾರೆ.

ಯುಗಾದಿ ಹಬ್ಬದಂದು ಶ್ರೀ ಸಂಗಮೇಶ್ವರ ಜಾತ್ರೆಗೆ ಚಾಲನೆ ನೀಡಲಾಗುತ್ತದೆ. ಸುತ್ತಮುತ್ತಲ ಗ್ರಾಮಗಳು, ನೆರಹೊರೆಯ ಜಿಲ್ಲೆಯಿಂದಲು ಭಕ್ತರು ಇಲ್ಲಿಗೆ ಆಗಮಿಸಿ ಪುಣ್ಯ ಸ್ನಾನ ಮಾಡುತ್ತಾರೆ. ತುಂಗಾ ಮತ್ತು ಭದ್ರಾ ನದಿಗಳು ಶಿವಮೊಗ್ಗ ತಾಲೂಕಿನ ಕೂಡ್ಲಿಯಲ್ಲಿ ಸಂಗಮವಾಗುತ್ತವೆ.

ಶಿರಸಿ ಮಾರಿಕಾಂಬಾ ಜಾತ್ರೆ ಸಂಪನ್ನ; ಮೆರವಣಿಗೆಯಲ್ಲಿ ಸಹೋದರಿಯರತ್ತ ತಿರುಗಿ ನೋಡಿದ ಮಾರಮ್ಮ ಶಿರಸಿ ಮಾರಿಕಾಂಬಾ ಜಾತ್ರೆ ಸಂಪನ್ನ; ಮೆರವಣಿಗೆಯಲ್ಲಿ ಸಹೋದರಿಯರತ್ತ ತಿರುಗಿ ನೋಡಿದ ಮಾರಮ್ಮ

ಈ ಕ್ಷೇತ್ರದ ಹೊಳೆಯಲ್ಲಿ ಮಿಂದೆದ್ದರೆ ಪುಣ್ಯ ಪ್ರಾಪ್ತಿಯಾಗಲಿದೆ ಎಂಬ ನಂಬಿಕೆ ಇದೆ. ಯುಗಾದಿ ಹಬ್ಬದ ಸಂದರ್ಭ ದೊಡ್ಡ ಸಂಖ್ಯೆಯ ಭಕ್ತರು ಕೂಡ್ಲಿಗೆ ಬಂದು ಪುಣ್ಯ ಸ್ನಾನ ಮಾಡಿದ್ದಾರೆ. ಇವತ್ತು ಭಾನುವಾರ ಆಗಿರುವುದರಿಂದ ಜಾತ್ರೆಗೆ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಸಂಗಮ ಕ್ಷೇತ್ರದಲ್ಲಿ ಪುಣ್ಯ ಸ್ನಾನ ಮಾಡುವವರ ಸಂಖ್ಯೆಯು ಏರಿಕೆ ಆಗಿದೆ.

ಯುವಕರು ಯುವತಿಯರ ವೇಷ ಧರಿಸುವ ರಮ್ಮನಹಳ್ಳಿ ಜಾತ್ರೆ! ಯುವಕರು ಯುವತಿಯರ ವೇಷ ಧರಿಸುವ ರಮ್ಮನಹಳ್ಳಿ ಜಾತ್ರೆ!

Koodli Sri Sangameshwara Temple

200 ಹಳ್ಳಿಯ ದೇವರುಗಳು ಬರುತ್ತವೆ; ಸುತ್ತಮುತ್ತಲ ಊರಿನ ಜನರು ಯುಗಾದಿ ಸಂದರ್ಭ ಕೂಡ್ಲಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ. ಸುಮಾರು 200 ಹಳ್ಳಿಯಿಂದ ಜನರು ಇಲ್ಲಿಗೆ ಬರುತ್ತಾರೆ. ಊರ ದೇವರ ಮೂರ್ತಿಗಳನ್ನು ಪಲ್ಲಕ್ಕಿಯಲ್ಲಿ ತಂದು ತುಂಗಾ, ಭದ್ರಾ ಸಂಗಮ ಕ್ಷೇತ್ರದಲ್ಲಿ ಸ್ವಚ್ಛಗೊಳಿಸುತ್ತಾರೆ. ಹೊಳೆ ದಂಡೆ ಮೇಲೆ ಪೂಜೆ ಸಲ್ಲಿಸಿ ಬಳಿಕ ಊರಿಗೆ ಕೊಂಡೊಯ್ಯುತ್ತಾರೆ.

ಶಿವಮೊಗ್ಗ; ಕೋಟೆ ಮಾರಿಕಾಂಬ ಜಾತ್ರೆಗೆ 600 ವರ್ಷದ ಇತಿಹಾಸ ಶಿವಮೊಗ್ಗ; ಕೋಟೆ ಮಾರಿಕಾಂಬ ಜಾತ್ರೆಗೆ 600 ವರ್ಷದ ಇತಿಹಾಸ

ಶ್ರೀ ಸಂಗಮೇಶ್ವರ ಸ್ವಾಮಿ ಜಾತ್ರೆ ನೋಡಲು ತೆಪ್ಪದಲ್ಲಿ ಹೋಗಬೇಕು. ಹೊಳೆಯ ನಡುಗಡ್ಡೆಯ ಮೇಲೆ ಅಂಗಡಿಗಳನ್ನು ಹಾಕಲಾಗುತ್ತದೆ. ಜಾತ್ರೆಗೆ ಬಂದವರು ತೆಪ್ಪಗಳ ಮೂಲಕ ನಡುಗಡ್ಡೆಗೆ ಹೋಗಬೇಕಾಗುತ್ತದೆ. ತೆಪ್ಪದಲ್ಲಿ ಹೋಗಿ ಜಾತ್ರೆಯಲ್ಲಿ ಪಾಲ್ಗೊಳ್ಳುವುದರಿಂದ ದೊಡ್ಡ ಸಂಖ್ಯೆಯ ಜನರು ಇಲ್ಲಿಗೆ ಬರುತ್ತಾರೆ.

ಇವತ್ತು ವಿಜೃಂಭಣೆಯ ರಥೋತ್ಸವ; ಜಾತ್ರೆ ಅಂಗವಾಗಿ ಇವತ್ತು ಶ್ರೀ ಸಂಗಮೇಶ್ವರ ಸ್ವಾಮಿಯ ಅದ್ಧೂರಿ ರಥೋತ್ಸವ ನಡೆಯಲಿದೆ. ಸುಮಾರು ನೂರಕ್ಕೂ ಹೆಚ್ಚು ಗ್ರಾಮಗಳ ದೇವರುಗಳು ಈ ರಥೋತ್ಸವದಲ್ಲಿ ಪಾಲ್ಗೊಳ್ಳಲಿವೆ. ಎಲ್ಲಾ ದೇವರಿಗೂ ಪೂಜೆ ಸಲ್ಲಿಸಲಾಗುತ್ತದೆ. ಇದನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನರು ಸೇರುತ್ತಾರೆ.

ಶಿವಮೊಗ್ಗ ನಗರಕ್ಕೆ ಸಮೀಪದಲ್ಲಿ ಇರುವ ಕೂಡ್ಲಿ ಕ್ಷೇತ್ರವು ಪ್ರಮುಖ ಪ್ರವಾಸಿ ತಾಣವಾಗಿದೆ. ತುಂಗಾ ಮತ್ತು ಭದ್ರಾ ನದಿಗಳ ಸಂಗಮ ಕ್ಷೇತ್ರ ಆಗಿರುವುದರಿಂದ ಇಲ್ಲಿಗೆ ದೊಡ್ಡ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುತ್ತಾರೆ. ಇನ್ನು ಹೊಳೆ ದಂಡೆ ಮೇಲೆ ಶ್ರೀ ಸಂಗಮೇಶ್ವರ ಸ್ವಾಮಿ ಗುಡಿ ಇದೆ. ಹೊಯ್ಸಳರ ಕಾಲದಲ್ಲಿ ಈ ದೇಗುಲ ನಿರ್ಮಾಣವಾಗಿದೆ ಎಂದು ಹೇಳಲಾಗುತ್ತಿದೆ.

ಇದೇ ಗುಡಿಯಲ್ಲಿ ಈಗ ಪೂಜೆ ಸಲ್ಲಿಸಲಾಗುತ್ತೆ. ಜಾತ್ರೆಗೆ ಬರುವ ಭಕ್ತರು ಸಂಗಮದಲ್ಲಿ ಸ್ನಾನ ಮಾಡಿ, ಸಂಗಮೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸುತ್ತಾರೆ. ಬಳಿಕ ತೆಪ್ಪದ ಮೂಲಕ ನಡುಗಡ್ಡೆಯಲ್ಲಿ ನಡೆಯುತ್ತಿರುವ ಜಾತ್ರೆ ಹೋಗಿ ಬರುತ್ತಾರೆ.

ಕೂಡ್ಲಿ ಗ್ರಾಮದಲ್ಲಿ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನವಿದೆ. ಪುರಾಣ ಕಾಲದಲ್ಲಿ ದೇಗುಲ ಸ್ಥಾಪನೆ ಆಗಿರುವ ನಂಬಿಕೆ ಇದೆ. ಶ್ರೀ ರಂಗನಾಥ ಸ್ವಾಮಿಗೆ ದೊಡ್ಡ ಸಂಖ್ಯೆಯ ಭಕ್ತರು ಇದ್ದಾರೆ. ಇನ್ನು, ದೇಗುಲ ಸಮೀಪದಲ್ಲೇ ಆರ್ಯ ಅಕ್ಷೋಭ್ಯ ತೀರ್ಥ ಮಠವಿದೆ. ಶಿವಮೊಗ್ಗ, ದಾವಣಗೆರೆ, ಬೆಂಗಳೂರು ಸೇರಿದಂತೆ ಹಲವು ಕಡೆಯಿಂದ ಇಲ್ಲಿಗೆ ಭಕ್ತರು ನಡೆದುಕೊಳ್ಳುತ್ತಾರೆ.

English summary
Hundreds of devotees took part in Koodli village Sri Sangameshwara temple in Shivamogga. Jatre will be held after Ugadi every year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X