ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ನಟಿಯರ ಡ್ರಗ್ಸ್ ಸೇವನೆ ದೃಢ: ಗೃಹ ಸಚಿವರ ಮಹತ್ವದ ಹೇಳಿಕೆ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಆಗಸ್ಟ್ 24: "ಮಾದಕ ದ್ರವ್ಯ ಸೇವನೆ‌ ಪ್ರಕರಣದಲ್ಲಿ ಪೊಲೀಸರು ಈ ಹಿಂದೆ ಹಲವರನ್ನು ಬಂಧಿಸಿದ್ದರು‌. ಪ್ರಕರಣ ಸಂಬಂಧಿತ ದಾಖಲೆಯನ್ನು ಹೈದರಾಬಾದ್‌ನ ಎಫ್ಎಸ್ಎಲ್ ಲ್ಯಾಬ್‌ಗೆ ಕಳುಹಿಸಲಾಗಿತ್ತು. ಡ್ರಗ್ಸ್ ಸೇವನೆ ವಿಷಯದಲ್ಲಿ ನಟಿಯರಿಂದ ಸಂಗ್ರಹಿಸಿದ ಸ್ಯಾಂಪಲ್ ಪಾಸಿಟಿವ್ ಬಂದಿದೆ," ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಶಿವಮೊಗ್ಗದಲ್ಲಿ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, "ಎಫ್ಎಸ್ಎಲ್ ಲ್ಯಾಬ್ ವರದಿಯನ್ನು ಪೊಲೀಸರು ಕೋರ್ಟ್‌ಗೆ ಹಾಜರುಪಡಿಸಲಿದ್ದು, ಕೇಸ್ ಮತ್ತಷ್ಟು ಗಟ್ಟಿಯಾಗಿದೆ," ಎಂದರು.

"ಅಪರಾಧಿಗಳು ರಂಗೋಲಿ ಕೆಳಗೆ ನುಸುಳುವ ಕೆಲಸ ಮಾಡುತ್ತಿದ್ದಾರೆ. ಪೊಲೀಸ್ ಇಲಾಖೆ ನಿರಂತರವಾಗಿ ರೈಡ್ ಮಾಡುತ್ತಿದ್ದು, ಟನ್‌ಗಟ್ಟಲೆ ಮಾದಕ ವಸ್ತು ವಶಪಡಿಸಿಕೊಂಡಿದೆ," ಎಂದು ತಿಳಿಸಿದರು.

Shivamogga: Home Minister Araga Jnanendra Reaction On Actresses Drug Case

"ರಾಜ್ಯದ ಎಫ್ಎಸ್ಎಲ್ ಪ್ರಯೋಗಾಲಯವನ್ನು ಮೇಲ್ದರ್ಜೇಗೇರಿಸುವ ಕೆಲಸ ನಡೆದಿದೆ. ಮಾದಕ ದ್ರವ್ಯ ಮಾರಾಟ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಪೊಲೀಸರೇ ಈ ವಿಷಯದಲ್ಲಿ ಶಾಮೀಲಾಗಿದ್ದರೆ, ಅವರ ವಿರುದ್ಧವೇ ಕ್ರಮ‌ ಜರುಗಿಸಲಾಗುವುದು," ಎಂದು ಗೃಹ ಸಚಿವರು ಹೇಳಿದರು.

"ಪೊಲೀಸ್ ಇಲಾಖೆಯ ಶೇ.49 ರಷ್ಟು ಸಿಬ್ಬಂದಿಗೆ ಈಗಾಗಲೇ ವಸತಿ ಕಲ್ಪಿಸಲಾಗಿದ್ದು, ಉಳಿದವರ ಬಗ್ಗೆಯೂ ಗಮನ ಹರಿಸಲಾಗುತ್ತಿದೆ. ಈಗ ವಿದ್ಯಾವಂತರೇ ಹೆಚ್ಚಾಗಿ ಪೊಲೀಸ್ ಇಲಾಖೆಗೆ ಬರುತ್ತಿದ್ದಾರೆ. ಇಲಾಖೆಯನ್ನು ಉತ್ತಮ ಪಡಿಸಲು ಕ್ರಮ ವಹಿಸಲಾಗುತ್ತಿದೆ," ಎಂದರು.

Shivamogga: Home Minister Araga Jnanendra Reaction On Actresses Drug Case

"ನಾನು ಹೋದ ಕಡೆಯಲ್ಲಾ ಇಲಾಖೆಯ ಬೇರೆ ಬೇರೆ ವಿಭಾಗಕ್ಕೆ ಭೇಟಿ ನೀಡುತ್ತಿದ್ದೇನೆ. ಗುಪ್ತಚರ ವಿಭಾಗ ಬಲಪಡಿಸುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಸಿಎಂ ಜೊತೆ ಚರ್ಚಿಸುತ್ತೇನೆ," ಎಂದರು ತಿಳಿಸಿದರು.

"ಗಣೇಶೋತ್ಸವ ಆಚರಣೆ ಕುರಿತಂತೆ ಸಿಎಂ ಬಸವರಾಜ ಬೊಮ್ಮಾಯಿ ಈಗಾಗಲೇ ಸೂಚನೆ ನೀಡಿದ್ದು, ಕೊರೊನಾ ನಿಯಮ ಪಾಲಿಸುವಂತೆ ಮನವಿ ಮಾಡಿಕೊಳ್ಳುತ್ತೇನೆ. ಆಫ್ಘಾನಿಸ್ತಾನದಿಂದ ರಾಜ್ಯಕ್ಕೆ 9 ಜನ ಬಂದಿದ್ದಾರೆ. ಉಳಿದವರೂ ಬರಲಿದ್ದು, ನಮ್ಮ ಅಧಿಕಾರಿ ಉಮೇಶ್ ಕುಮಾರ್ ಈ ಕೆಲಸದಲ್ಲಿ ನಿರತರಾಗಿದ್ದಾರೆ," ಎಂದು ಮಾಹಿತಿ ನೀಡಿದರು.

English summary
The sample collected from actresses in the case of Drugs Consumption has been positive, Home Minister Araga Jnanendra said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X