ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾಲ್ಗುಡಿ ಮ್ಯೂಸಿಯಂಗೆ ಹೋಗುವ ಪ್ರವಾಸಿಗರ ಗಮನಕ್ಕೆ

|
Google Oneindia Kannada News

ಶಿವಮೊಗ್ಗ, ಜನವರಿ 29: ಶಿವಮೊಗ್ಗ ಜಿಲ್ಲೆಯ ಪ್ರವಾಸಿ ತಾಣಗಳ ಪಟ್ಟಿಗೆ ಹೊಸ ಸೇರ್ಪಡೆಯಾಗಿದೆ. ಹೊಸನಗರ ತಾಲೂಕಿನಲ್ಲಿರುವ ಮಾಲ್ಗುಡಿ ಮ್ಯೂಸಿಯಂಗೆ ನೂರಾರು ಪ್ರವಾಸಿಗರು ಪ್ರತಿದಿನ ಭೇಟಿ ನೀಡುತ್ತಾರೆ.

ಮಾಲ್ಗುಡಿ ಮ್ಯೂಸಿಯಂ ನೋಡಲು ಬರುವವರಿಗೆ ರೈಲ್ವೆ ಇಲಾಖೆ ಸಮಯ ನಿಗದಿ ಮಾಡಿದೆ. ಪ್ರತಿದಿನ ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯ ತನಕ ಪ್ರವಾಸಿಗರು ಭೇಟಿ ನೀಡಬಹುದು. ಮಂಗಳವಾರ ರಜಾದಿನವಾಗಿದೆ.

ಕೆಮ್ಮಣ್ಣಗುಂಡಿ, ನಂದಿ ಗಿರಿಧಾಮ ಪ್ರವಾಸೋದ್ಯಮ ಇಲಾಖೆಗೆ ಕೆಮ್ಮಣ್ಣಗುಂಡಿ, ನಂದಿ ಗಿರಿಧಾಮ ಪ್ರವಾಸೋದ್ಯಮ ಇಲಾಖೆಗೆ

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ರಿಪ್ಪನಪೇಟೆ ಸಮೀಪದ ಅರಸಾಳುವಿನಲ್ಲಿ ಮಾಲ್ಗುಡಿ ಮ್ಯೂಸಿಯಂ ಇದೆ. ಇಷ್ಟು ದಿನ ಪ್ರತಿದಿನ ಪ್ರವಾಸಿಗರು ಮ್ಯೂಸಿಯಂ ವೀಕ್ಷಣೆ ಮಾಡಬಹುದಿತ್ತು.

ವಿಶ್ವ ಪ್ರವಾಸೋದ್ಯಮ ದಿನ: ಬದರಿನಾಥ ಯಾತ್ರೆ ದಿವ್ಯ ಅನುಭೂತಿ ವಿಶ್ವ ಪ್ರವಾಸೋದ್ಯಮ ದಿನ: ಬದರಿನಾಥ ಯಾತ್ರೆ ದಿವ್ಯ ಅನುಭೂತಿ

Holiday For Malgudi Museum Every Tuesday

ಇನ್ನು ಮುಂದೆ ಮಂಗಳವಾರ ಮ್ಯೂಸಿಯಂಗೆ ರಜೆ ಇರಲಿದೆ. ಉಳಿದ ದಿನ ಪ್ರವಾಸಿಗರು 5 ರೂ. ಪ್ರವೇಶ ಶುಲ್ಕವನ್ನು ಪಾವತಿ ಮಾಡಿ ಮ್ಯೂಸಿಯಂ ವೀಕ್ಷಣೆ ಮಾಡಬಹುದು. ಇತ್ತೀಚೆಗೆ ಮ್ಯೂಸಿಯಂಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚುತ್ತಿದೆ.

 ಕಾರವಾರದ ಕಡಲ ತೀರದಲ್ಲಿಲ್ಲ ಪ್ರವಾಸಿಗಳ ಕಲರವ; ಇನ್ನೂ ಚೇತರಿಸಿಲ್ಲ ಪ್ರವಾಸೋದ್ಯಮ ಕಾರವಾರದ ಕಡಲ ತೀರದಲ್ಲಿಲ್ಲ ಪ್ರವಾಸಿಗಳ ಕಲರವ; ಇನ್ನೂ ಚೇತರಿಸಿಲ್ಲ ಪ್ರವಾಸೋದ್ಯಮ

ಪ್ರಸಿದ್ಧ ಧಾರವಾಹಿ; ದೂರದರ್ಶನದಲ್ಲಿ ಪ್ರವಾರವಾಗುತ್ತಿದ್ದ 'ಮಾಲ್ಗುಡಿ ಡೇಸ್' ಪ್ರಸಿದ್ಧ ಧಾರವಾಹಿಯಾಗಿತ್ತು. ನಟ ದಿ. ಶಂಕರ್‌ನಾಗ್ ಕನಸಿನ ಧಾರವಾಹಿ ಇಲ್ಲಿ ಚಿತ್ರೀಕರಣಗೊಂಡಿತ್ತು. 1956ರಲ್ಲಿ ಕಟ್ಟಿದ ಅರಸಾಳು ರೈಲ್ವೆ ನಿಲ್ದಾಣವನ್ನು ಹಾಗೆಯೇ ಉಳಿಸಿಕೊಂಡು ಮಾಲ್ಗುಡಿ ಮ್ಯೂಸಿಯಂ ಹೆಸರಿನಲ್ಲಿ ನವೀಕರಣ ಮಾಡಲಾಗಿದೆ.

ನೈಋತ್ಯ ರೈಲ್ವೆಯ ಮೈಸೂರು ವಿಭಾಗ ಇದನ್ನು ಅಭಿವೃದ್ಧಿಪಡಿಸಿದ್ದು, ನಿರ್ವಹಣೆಯನ್ನು ಮಾಡುತ್ತಿದೆ. ಮ್ಯೂಸಿಯಂನಲ್ಲಿ ಹಿಂದಿನ ಕಾಲದಲ್ಲಿ ಬಳಕೆ ಮಾಡುತ್ತಿದ್ದ ಕೆಲವು ಗೃಹೋಪಯೋಗಿ ವಸ್ತುಗಳನ್ನು ಸಂಗ್ರಹ ಮಾಡಲಾಗಿದೆ.

English summary
Malgudi museum closed for every Tuesday. Tourist can't visit museum on Tuesday. The museum was opened at the old Arasalu railway station where the popular television serial Malgudi Days was shot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X