ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶರಾವತಿ ಭೂಗರ್ಭ ವಿದ್ಯುತ್ ಯೋಜನೆ; ಸಮೀಕ್ಷೆಗೆ ತಡೆ

|
Google Oneindia Kannada News

ಶಿವಮೊಗ್ಗ, ಅಕ್ಟೋಬರ್ 27: ಕರ್ನಾಟಕ ಹೈಕೋರ್ಟ್ ಶರಾವತಿ ಭೂಗರ್ಭ ವಿದ್ಯುತ್ ಯೋಜನೆ ಜಿಯೋ ಟೆಕ್ನಿಕಲ್ ಸಮೀಕ್ಷೆಗೆ ತಡೆ ನೀಡಿದೆ. ನವೆಂಬರ್ 4ರ ತನಕ ಯಾವುದೇ ಸಮೀಕ್ಷೆ ನಡೆಸದಂತೆ ಸರ್ಕಾರಕ್ಕೆ ಸೂಚಿಸಿದೆ.

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕಾ ಅವರಿದ್ದ ವಿಭಾಗೀಯ ಪೀಠ ಬಳ್ಳಾರಿಯ ಸಂತೋಷ್ ಮಾರ್ಟಿನ್ ಮತ್ತು ಬೆಂಗಳೂರಿನ ಯುನೈಟೆಡ್ ಕನ್ಸರ್ವೇಶನ್ ಮೂವ್ ಮೆಂಟ್ ಸಂಘಟನೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿತು.

ರಾಯಚೂರು; ಆರ್‌ಟಿಪಿಎಸ್‌ನಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತ ರಾಯಚೂರು; ಆರ್‌ಟಿಪಿಎಸ್‌ನಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತ

ಕೆಪಿಸಿಎಲ್ ನಡೆಸುತ್ತಿರುವ ಸಮೀಕ್ಷೆಗೆ ಅಕ್ಟೋಬರ್ 26ರ ತನಕ ಮೊದಲು ತಡೆ ನೀಡಲಾಗಿತ್ತು. ಅದನ್ನು ಈಗ ನವೆಂಬರ್ 4ರ ತನಕ ವಿಸ್ತರಣೆ ಮಾಡಿ ಆದೇಶ ಹೊರಡಿಸಿತು.ಇದರಿಂದಾಗಿ ಮುಂದಿನ ಆದೇಶದ ತನಕ ಜಿಯೋ ಟೆಕ್ನಿಕಲ್ ಸಮೀಕ್ಷೆ ನಡೆಸುವಂತಿಲ್ಲ.

ಬೆಂಗಳೂರಿಗೆ ಶರಾವತಿ ನೀರು; ಮತ್ತೆ ಚರ್ಚೆ ಆರಂಭಬೆಂಗಳೂರಿಗೆ ಶರಾವತಿ ನೀರು; ಮತ್ತೆ ಚರ್ಚೆ ಆರಂಭ

High Court Stay For Survey For Sharavathi Hydel Project

ಏನಿದು ಯೋಜನೆ: ಲಿಂಗನಮಕ್ಕಿ ಅಣೆಕಟ್ಟೆಯಿಂದ ವಿದ್ಯುತ್ ಉತ್ಪಾದನೆ ಬಳಿಕ ಪುನಃ ನದಿಗೆ ಸೇರುತ್ತಿರುವ ನೀರನ್ನು ಮೇಲೆತ್ತಿ ವಿದ್ಯುತ್ ಉತ್ಪಾದನೆ ಮಾಡಲು ಕೆಪಿಸಿಎಲ್ ಯೋಜನೆ ರೂಪಿಸಿದೆ. ಕರ್ನಾಟಕ ಸರ್ಕಾರ ಯೋಜನೆಯ ಸಮೀಕ್ಷೆ ಅವಕಾಶ ನೀಡಿದೆ.

ಶಿವಮೊಗ್ಗದ ಶರಾವತಿ ಒಡಲಲ್ಲಿ ಶೀಘ್ರ ಮತ್ತೊಂದು ಯೋಜನೆಶಿವಮೊಗ್ಗದ ಶರಾವತಿ ಒಡಲಲ್ಲಿ ಶೀಘ್ರ ಮತ್ತೊಂದು ಯೋಜನೆ

ಆದರೆ, ಯೋಜನೆ ಕೈಗೆತ್ತಿಕೊಳ್ಳುತ್ತಿರುವ ಪ್ರದೇಶ ಶರಾವತಿ ವನ್ಯಜೀವಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿದೆ. ಕೆಪಿಸಿಎಲ್‌ಗೆ ಅನುಮತಿ ನೀಡುವಾಗ ಮಳೆಗಾಲದಲ್ಲಿ ಸಮೀಕ್ಷೆ ನಡೆಸದಂತೆ ಸೂಚನೆ ನೀಡಲಾಗಿತ್ತು. ಇದನ್ನು ಉಲ್ಲಂಘನೆ ಮಾಡಿ ಸಮೀಕ್ಷೆ ನಡೆದಿತ್ತು.

ಆದ್ದರಿಂದ ಪರಿಸರವಾದಿಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ನಿಯಮ ಉಲ್ಲಂಘನೆ ಮಾಡಿ ಸಮೀಕ್ಷೆ ನಡೆಸುವುದು 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಸೆಕ್ಷನ್ 29ರ ಉಲ್ಲಂಘನೆ ಎಂದು ಕೋರ್ಟ್ ಹೇಳಿದ್ದು, ಸಮೀಕ್ಷೆಗೆ ತಡೆ ನೀಡಿದೆ.

English summary
Karnataka high court stay for the Sharavathi hydel project. KPCL conducting survey in the sanctuary area for its proposed underground power project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X